ರಿಯಾದ್: ವೀಸಾ ಏಜೆಂಟ್ ನೀಡಿದ ‘ಡ್ರೈಫ್ರೂಟ್ಸ್’ ಪೊಟ್ಟಣದೊಂದಿಗೆ ರಿಯಾದ್‌ಗೆ ಬಂದಿದ್ದ ತಮಿಳುನಾಡಿನ ವ್ಯಕ್ತಿ ಹಾಗೂ ಅದನ್ನು ಸ್ವೀಕರಿಸಲು ಬಂದಿದ್ದ ಮೂವರು ಮಲಯಾಳಿಗಳನ್ನು ಬಂಧಿಸಲಾಗಿದೆ.
ರಿಯಾದ್ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ತಪಾಸಣೆ ನಡೆಸಿದಾಗ ಡ್ರೈ ಫ್ರೂಟ್ಸ್ ಡ್ರಗ್ಸ್ ಎಂಬುದು ಸ್ಪಷ್ಟವಾಗಿದೆ. ತಕ್ಷಣವೇ ಆತನನ್ನು ಬಂಧಿಸಲಾಯಿತು. ನಂತರ ಡ್ರಗ್ಸ್ ಸ್ವೀಕರಿಸಲು ಬಂದ ಪೆರಿಂತಲ್ಮಣ್ಣ ಮೂಲದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಎಲ್ಲರೂ ಈಗ ಜೈಲಿನಲ್ಲಿದ್ದಾರೆ.
ಈ ಹಿಂದೆ ಅಬಹಾದಲ್ಲಿ ಕೆಲಸ ಮಾಡುತ್ತಿದ್ದ ತಮಿಳುನಾಡು ಮೂಲದ ಈತ ಫೈನಲ್ ಎಕ್ಸಿಟ್‌ಗೆ ಊರಿಗೆ ತೆರಳಿ, ಹೊಸ ವೀಸಾದಲ್ಲಿ ಸೌದಿಗೆ ಮರಳುವಾಗ ಏಜೆಂಟ್‌ನಿಂದ ವಂಚನೆಗೊಳಗಾಗಿದ್ದಾನೆ.
ಟಿಕೆಟ್ ಮತ್ತು ಪಾಸ್ ಪೋರ್ಟ್ ಬೆಂಗಳೂರಿನ ಕಚೇರಿಯಲ್ಲಿದ್ದು, ಅಲ್ಲಿಗೆ ಹೋಗಿ ಅದನ್ನು ಪಡೆದು ರಿಯಾದ್ ಗೆ ತೆರಳುವಂತೆ ವಂಚಕ ವೀಸಾ ಏಜೆಂಟ್ ಹೇಳಿದ್ದಾನೆ. ಕಛೇರಿ ತಲುಪಿದಾಗ ಟಿಕೆಟ್ ಮತ್ತು ಪಾಸ್ ಪೋರ್ಟ್ ನೊಂದಿಗೆ ಡ್ರೈ ಫ್ರೂಟ್ಸ್ ಪ್ಯಾಕೆಟನ್ನೂ ನೀಡಿದ್ದಾರೆ.ಇದನ್ನು ಸ್ವೀಕರಿಸಲು ಜನರು ರಿಯಾದ್‌ಗೆ ಬರುತ್ತಾರೆ ಎಂದು ಏಜೆಂಟ್ ಹೇಳಿದ್ದಾನೆ.
ಏಜೆಂಟರು ವಂಚಿಸಿದ್ದಾರೆ ಎಂದು ಆರೋಪಿಸಿ ತಮಿಳುನಾಡು ಮೂಲದ ವ್ಯಕ್ತಿಯ ಕುಟುಂಬದವರು ಚೆನ್ನೈ ಹೈಕೋರ್ಟ್‌ನಲ್ಲಿ ಮೊಕದ್ದಮೆ ಹೂಡಿದ್ದು, ಆತನನ್ನು ಬಿಡುಗಡೆ ಮಾಡಲು ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
















ಇನ್ನಷ್ಟು ಸುದ್ದಿಗಳು
ಸಪ್ಟೆಂಬರ್-17 : ಉಪ್ಪಿನಂಗಡಿಯಲ್ಲಿ ಬೃಹತ್ ಮೀಲಾದ್ ರ್ಯಾಲಿ ಹಾಗೂ ಕಾನ್ಫರೆನ್ಸ್
SIR ನೋಟೀಸ್ ಗೊಂದಲ: ಅನಿವಾಸಿ ಭಾರತೀಯರಿಗೆ ಶೀಘ್ರದಲ್ಲೇ ಪರಿಹಾರ- ಉಸ್ತುವಾರಿ ಸಚಿವರಿಂದ ಭರವಸೆ
ಸೌದಿ ಅರೇಬಿಯಾ ವಿರುದ್ಧ ಹೌತಿಗಳ ದಾಳಿ; 73 ನಾಗರಿಕರಿಗೆ ಗಾಯ
ಹಾರ್ಮುಜ್ ತೆರೆಯುವುದಕ್ಕೆ ಆದ್ಯತೆ; ಬಿಕ್ಕಟ್ಟು ಮುಂದುವರಿದರೆ ಕೈಗಾರಿಕಾ ದುರಂತ- ಕತಾರ್
ಕಿನ್ಯದಲ್ಲಿ ಹಬ್ಬಗಳ ಮೂಲಕ ಗಟ್ಟಿಯಾದ ಸೌಹಾರ್ದದ ಬಂಧ
ಬೆಸ್ಟ್ ಫ್ರೆಂಡ್ಸ್ ಚಾರಿಟಬಲ್ ಟ್ರಸ್ಟ್: ಶುದ್ಧ ಕುಡಿಯುವ ನೀರಿನ ವಾಟರ್ ಡಿಸ್ಪೆನ್ಸರ್ ವಿತರಣೆ
ಧರ್ಮವನ್ನು ವ್ಯಾಖ್ಯಾನಿಸುವುದಲ್ಲ ರಾಜ್ಯದ ಕರ್ತವ್ಯ, ಆಡಳಿತ ನಡೆಸುವತ್ತ ಗಮನ ಕೊಡಿ- ವಿ.ಡಿ.ಸತೀಶನ್ ವಿರುದ್ಧ ಎಸ್ಎಸ್ಎಫ್
ಇಸ್ಲಾಂ ವಿರೋಧಿ ಹೇಳಿಕೆಯನ್ನು ಮುಖ್ಯಮಂತ್ರಿ ಹಿಂಪಡೆಯಬೇಕು- ಕೇರಳ ಮುಸ್ಲಿಂ ಜಮಾಅತ್
ಎಸ್ಸೆಸ್ಸೆಫ್ ರಾಜ್ಯ ಮಟ್ಟದ ಸಾಹಿತ್ಯೋತ್ಸವ- ಹೂವಿನಹಡಗಲಿಯಲ್ಲಿ
ಸ್ಕಾಯ್ ಕರಾಟೆಯಲ್ಲಿ ಫಾತಿಮತ್ ರಿಫಾತ್ಗೆ ಚಿನ್ನದ ಪದಕ