ರಿಯಾದ್: ಕಳೆದ ತಿಂಗಳೊಂದರಲ್ಲೇ ಸೌದಿ ವಿಮಾನಯಾನ ಸಂಸ್ಥೆಗಳ ವಿರುದ್ಧ ನಾಗರಿಕ ವಿಮಾನಯಾನ ಪ್ರಾಧಿಕಾರಕ್ಕೆ 1,600ಕ್ಕೂ ಹೆಚ್ಚು ದೂರುಗಳು ಬಂದಿವೆ.
ರಾಷ್ಟ್ರೀಯ ವಿಮಾನಯಾನ ಸಂಸ್ಥೆ ಸೌದಿಯಾ(Saudia) ವಿರುದ್ಧ ಅತಿ ಕಡಿಮೆ ದೂರುಗಳು ದಾಖಲಾಗಿವೆ. ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಮದೀನಾ ವಿಮಾನ ನಿಲ್ದಾಣ ವಿರುದ್ಧ ಕಡಿಮೆ ದೂರುಗಳನ್ನು ಸ್ವೀಕರಿಸಲಾಗಿದೆ ಎಂದು ಪ್ರಾಧಿಕಾರ ಹೇಳಿದೆ.
ಸೌದಿಯಾ ವಿರುದ್ಧ ಒಂದು ಲಕ್ಷ ಪ್ರಯಾಣಿಕರಿಗೆ 17 ದೂರುಗಳು ಎಂಬ ನೆಲೆಯಲ್ಲಿ ಸ್ವೀಕರಿಸಲಾಗಿದೆ. ಇವುಗಳಲ್ಲಿ ಶೇ.90 ದೂರುಗಳನ್ನು ನಿಗದಿತ ಸಮಯದಲ್ಲಿ ಪರಿಹರಿಸಲಾಗಿದೆ. ಬಜೆಟ್ ಏರ್ಲೈನ್ ಫ್ಲೈ ನಾಸ್(flynas) ಎರಡನೇ ಅತಿ ಕಡಿಮೆ ಸಂಖ್ಯೆಯ ದೂರುಗಳನ್ನು ಹೊಂದಿದೆ. Flynas ಪ್ರತಿ ಲಕ್ಷ ಪ್ರಯಾಣಿಕರಿಗೆ 29 ದೂರುಗಳನ್ನು ಸ್ವೀಕರಿಸಿದೆ. ಇವುಗಳಲ್ಲಿ ಶೇ. 88 ರಷ್ಟು ಪರಿಹಾರವಾಗಿದೆ.
ಬಜೆಟ್ ಏರ್ಲೈನ್ ಫ್ಲೈ ಅದೀಲ್(Flyadeal) ಪ್ರತಿ ಲಕ್ಷ ಪ್ರಯಾಣಿಕರಿಗೆ 73 ದೂರುಗಳನ್ನು ಸ್ವೀಕರಿಸಿದೆ.ಶೇ. 86 ರಷ್ಟು ದೂರುಗಳನ್ನು ಪರಿಹರಿಸಲಾಗಿದೆ. ಫ್ಲೈ ಅದೀಲ್ ಮೂರನೇ ಅತಿ ಕಡಿಮೆ ಸಂಖ್ಯೆಯ ದೂರುಗಳನ್ನು ಹೊಂದಿರುವ ವಿಮಾನಯಾನ ಸಂಸ್ಥೆ.
ಕಳೆದ ತಿಂಗಳು, ಟಿಕೆಟ್ ಮರುಪಾವತಿಗೆ ಸಂಬಂಧಿಸಿದಂತೆ ಹೆಚ್ಚಿನ ಸಂಖ್ಯೆಯ ದೂರುಗಳು ಬಂದಿವೆ. ವಿಳಂಬ ಸೇವೆ ಮತ್ತು ಲಗೇಜ್ ನಷ್ಟ ಇತರ ಹೆಚ್ಚಿನ ದೂರುಗಳಾಗಿವೆ.
ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳ ಕುರಿತಾದ ದೂರುಗಳ ಪೈಕಿ ಅತಿ ಹೆಚ್ಚು ದೂರುಗಳು ಜಿದ್ದಾ ವಿಮಾನ ನಿಲ್ದಾಣದ ವಿರುದ್ಧ ದಾಖಲಾಗಿವೆ. ರಿಯಾದ್ ವಿಮಾನ ನಿಲ್ದಾಣ ಎರಡನೇ ಸ್ಥಾನದಲ್ಲಿದೆ ಮತ್ತು ಮದೀನಾ ವಿಮಾನ ನಿಲ್ದಾಣವು ಕಡಿಮೆ ಸಂಖ್ಯೆಯ ದೂರುಗಳನ್ನು ಹೊಂದಿದೆ.
















ಇನ್ನಷ್ಟು ಸುದ್ದಿಗಳು
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ
ಹೋರ್ಮುಜ್ ಮೂಲಕ ಸುರಕ್ಷಿತ ಸಾರಿಗೆ- ಪ್ರಮುಖ ಚರ್ಚೆಗಾಗಿ ಇರಾನ್ಗೆ ತಲುಪಿದ ಒಮಾನ್ ನಿಯೋಗ
ಉಮ್ರಾ ಯಾತ್ರಿಕರಿಗೆ ಸಿಹಿ ಸುದ್ದಿ: ಒಂದು ವರ್ಷ ಕಾಲಾವಧಿಯ ‘ಮಲ್ಟಿ ಎಂಟ್ರಿ’ ಉಮ್ರಾ ವೀಸಾ ಬಿಡುಗಡೆ
ಭಾರತದ ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ: ಟಿಕೆಟ್ ದರಕ್ಕೆ ಮಾಸಿಕ ಕಂತಿನ ಸೌಲಭ್ಯ
ನಿಖರವಲ್ಲದ ಸುದ್ದಿ ಹಂಚಿಕೊಂಡರೆ ಅಪಾಯ- ನಕಲಿ ಸುದ್ದಿಗಳ ವಿರುದ್ಧ ಸೌದಿಯಲ್ಲಿ ಎಚ್ಚರಿಕೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
ಅಂತಾರಾಷ್ಟ್ರೀಯ ಸರ್ವೀಸ್ಗಳಲ್ಲಿ ದರ ಕಡಿತ – ಏರ್ ಇಂಡಿಯಾ ಎಕ್ಸ್ಪ್ರೆಸ್ ಘೋಷಣೆ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮರುಪರಿಶೀಲಿಸುವಂತೆ ಕೆಸಿಎಫ್ ಆಗ್ರಹ
ಸೌದಿಯಲ್ಲಿ ತೀವ್ರ ತಾಪಮಾನ: ವಾಹನಗಳಲ್ಲಿ ಬೆಂಕಿ ಹೊತ್ತಿಕೊಳ್ಳುವ ವಸ್ತುಗಳನ್ನು ಇಡದಂತೆ ಸಿವಿಲ್ ಡಿಫೆನ್ಸ್ ಎಚ್ಚರಿಕೆ
ಪವಿತ್ರ ಕಅಬಾಗೆ ತೊಡಿಸುವ ಕಿಸ್ವಾದ ಹಿಂದಿರುವ ಅದ್ಭುತ ರಹಸ್ಯಗಳ ಬಗ್ಗೆ ನಿಮಗೆ ಗೊತ್ತೇ?