janadhvani

Kannada Online News Paper

KCF ಒಮಾನ್ ವತಿಯಿಂದ ಭಾರತದ 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಣೆ

ಕರ್ನಾಟಕ ಕಲ್ಚರಲ್ ಫೌಂಡೇಷನ್ KCF ಒಮಾನ್ ರಾಷ್ಟ್ರೀಯ ಸಮಿತಿಯ ವತಿಯಿಂದ ಭಾರತದ 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಆಚರಣೆ ಆಗಸ್ಟ್ 15 ರಂದು ರಾತ್ರಿ 9 ಗಂಟೆಗೆ ಬಹು ಉಮರ್ ಸಖಾಫಿ ಎಡಪ್ಪಾಲ ಕೊಡಗು ಇವರ ದುಅ ದೊಂದಿಗೆ ಆರಂಭ ಗೊಂಡಿತು.

ಕೆಸಿಎಫ್ ಒಮಾನ್ ರಾಷ್ಟ್ರೀಯ ಅಧ್ಯಕ್ಷ ಜನಾಬ್ ಅಯ್ಯೂಬ್ ಕೋಡಿ ಇವರು ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷ ರಾದ ಮೌಲಾನ ಶಾಫಿ ಸ ಅದಿ ಇವರು ಉದ್ಘಾಟಿಸಿದ ಕಾರ್ಯಕ್ರಮ ದಲ್ಲಿ ಇಹ್ಸಾನ್ ಕರ್ನಾಟಕ ಕಾರ್ಯದರ್ಶಿ ಶಾಹುಲ್ ಹಮೀದ್ ಮುಸ್ಲಿಯಾರ್ ಶಿವಮೊಗ್ಗ ಇವರು ಮುಖ್ಯ ಪ್ರಭಾಷಣಗೈದರು.
ಕಾರ್ಯಕ್ರಮದಲ್ಲಿ ಕೆಸಿಎಫ್ ಅಂತರಾಷ್ಟ್ರೀಯ ಆಡಳಿತ ವಿಭಾಗದ ಕಾರ್ಯದರ್ಶಿ ಜನಾಬ್ ಇಕ್ಬಾಲ್ ಬರ್ಕ, ಕೆಸಿಎಫ್ ಒಮಾನ್ ಸಂಘಟನಾ ಅಧ್ಯಕ್ಷ ಸಯ್ಯದ್ ಆಬಿದ್ ಅಲ್ ಹೈದ್ರೋಸಿ ತಂಙಳ್ , ಕೋಶಾಧಿಕಾರಿ ಜನಾಬ್ ಆರಿಫ್ ಕೋಡಿ ,ಕೆಸಿಎಫ್ ಅಂತರಾಷ್ಟ್ರೀಯ ಕೌನ್ಸಿಲ್ ಸದಸ್ಯರಾದ ಇಬ್ರಾಹಿಮ್ ಹಾಜಿ ಅತ್ರಾಡಿ, ಹಂಝ ಹಾಜಿ ಕನ್ನಂಗಾರ್, ಕೆಸಿಎಫ್ ಒಮಾನ್ ಇಹ್ಸಾನ್ ವಿಭಾಗದ ಅಧ್ಯಕ್ಷ ಇಕ್ಬಾಲ್ ಎರ್ಮಾಳ್ , ಪಬ್ಲಿಷಿಂಗ್ ವಿಭಾಗದ ಅಧ್ಯಕ್ಷ ಇರ್ಫಾನ್ ಕೂರ್ನಡ್ಕ, ಸಾಂತ್ವನ ವಿಭಾಗದ ಅಧ್ಯಕ್ಷ ಬಾಷ ತೀರ್ಥ ಹಳ್ಳಿ , ಶಿಕ್ಷಣ ವಿಭಾಗದ ಅಧ್ಯಕ್ಷ ಝುಬೈರ್ ಸ ಅದಿ ಪಾಟ್ರಕೋಡಿ, ಮೀಡಿಯಾ ವಿಭಾಗದ ಅಧ್ಯಕ್ಷ ಸಿದ್ದೀಕ್ ಮಾಂಬ್ಲಿ‌ ಸುಳ್ಯ ಹಾಗೂ ಕೆಸಿಎಫ್ ಒಮಾನ್ ರಾಷ್ಟ್ರೀಯ ನಾಯಕರು, ವಿವಿಧ ಝೋನ್ ಗಳ ನಾಯಕರು ಮತ್ತು ಸದಸ್ಯರು ಭಾಗವಹಿಸಿದರು.

ಕೆಸಿಎಫ್ ಒಮಾನ್ ಪ್ರಧಾನ ಕಾರ್ಯದರ್ಶಿ ಸಾದಿಕ್ ಹಾಜಿ ಸ್ವಾಗತಿಸಿ, ಇಹ್ಸಾನ್ ಕರ್ನಾಟಕ ಒರ್ಘನೈಸರ್ ಕಲಂದರ್ ಬಾವ ಪರಪ್ಪು ಇವರು ಕಾರ್ಯಕ್ರಮ ನಿರೂಪಿಸಿದರು.

error: Content is protected !! Not allowed copy content from janadhvani.com