janadhvani

Kannada Online News Paper

ಉಡುಪಿ ಜಿಲ್ಲಾ ಕ್ಯಾಂಪಸ್ ಅಸೆಂಬ್ಲಿ ಯಶಸ್ವಿ ಸಮಾಪ್ತಿ

ಕಾಪು ಆ.6: ಪ್ರಚಲಿತ ವಿಧ್ಯಾಮಾನಗಳು ವಿಧ್ಯಾರ್ಥಿಗಳನ್ನು ಅರಾಜಕತೆಯೆಡೆಗೆ ತಲುಪಿಸುತ್ತಿರುವಾಗ, ಅವರಿಗೆ ಶಿಕ್ಷಣದ ಮಹತ್ವವನ್ನು ಕಲ್ಪಿಸಿ, ಧಾರ್ಮಿಕ ಶಿಷ್ಟಾಚಾರಗಳೊಂದಿಗೆ ವಿದ್ಯಾರ್ಥಿ ಜೀವನದ ಗುರಿ, ಉದ್ಧೇಶಗಳ ಈಡೇರಿಕೆಯ ಮನವರಿಕೆಗಾಗಿ ಎಸ್ಸೆಸ್ಸೆಫ್ ರಾಜ್ಯ ಸಮಿತಿ ಹಮ್ಮಿಕೊಂಡ ‘ನೈತಿಕತೆ, ಸಮಗ್ರತೆ, ಸಮರ್ಪಣೆ’ ಎಂಬ ಧ್ಯೇಯವಾಕ್ಯದೊಂದಿಗೆ ಕ್ಯಾಂಪಸ್ ಅಸೆಂಬ್ಲಿ ಉಡುಪಿ ಜಿಲ್ಲಾ ಸಮಿತಿಯ ಕಾರ್ಯಕ್ರಮವು ಜುಲೈ 31ರಂದು ಕಾಪುವಿನ ಪಕೀರ್ಣಕಟ್ಟೆಯಲ್ಲಿರುವ ಪ್ಯಾಲೇಸ್ ಗಾರ್ಡನ್ ರೆಸಾರ್ಟ್ ನಲ್ಲಿ ನಡೆಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ಸೆ‌ಸ್ಸೆಫ್ ಉಡುಪಿ ಜಿಲ್ಲಾಧ್ಯಕ್ಷರಾದ ಅಹ್ಮದ್ ಶಬೀರ್ ಸಖಾಫಿ ವಹಿಸಿದ್ದರು.ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ದ‌ಅವಾ ಕನ್ವೀನರ್ ಸಿದ್ದೀಕ್ ಸಖಾಫಿ ಹಂಗಳೂರು ದುಆದೊಂದಿಗೆ ಚಾಲನೆ ನೀಡಿದರು. ಎಸ್ ವೈ ಎಸ್ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಬ್ರುರ್ರಹ್ಮಾನ್ ರಝ್ವಿ ಕಲ್ಕಟ್ಟ ಅಸೆಂಬ್ಲಿಯನ್ನು ಉದ್ಘಾಟಿಸಿದರು.ನಂತರ ವಿಶ್ವ ವಿಖ್ಯಾತ ಮರ್ಕಝುಸ್ಸಖಾಫತಿಸುನ್ನಿಯ್ಯ ಕಾರಂದೂರು ಇದರ ವೈಸ್ ಚಾನ್ಸೆಲ್ಲರ್ ಡಾ.ಹುಸೈನ್ ಸಖಾಫಿ ಚುಲ್ಲಿಕ್ಕೋಡ್, ಹಂಝ ಮದನಿ ಮಿತ್ತೂರು, ಎಸ್ ವೈ ಎಸ್ ರಾಜ್ಯಾಧ್ಯಕ್ಷರಾಗಿರುವ ಡಾ. ಅಬ್ದುರ್ರಶೀದ್ ಝೈನಿ ಅಲ್ ಖಾಮಿಲ್ ಸಖಾಫಿ, ಇಲೆಕ್ಟ್ರಿಕ್ ಪೆ ಇದರ ಪ್ರೋಗ್ರಾಮ್ ಮ್ಯಾನೇಜರಾಗಿರುವ ಶಾಹಿಬ್ಝಾದಾ ಯಾಮಿನ್ ಯಾಕೂಬ್ ಬೆಂಗಳೂರು, ಎಸ್ಸೆಸ್ಸೆಫ್ ರಾಜ್ಯ ಕ್ಯಾಂಪಸ್ ಕನ್ವೀನರ್ ಮಾಸ್ಟರ್ ರಖೀಬ್ ಕನ್ನಂಗಾರ್, ಹಲವು ವಿಭಾಗಗಳಾಗಿ ವಿಧ್ಯಾರ್ಥಿಗಳಿಗೆ ಉಪಯುಕ್ತ ತರಗತಿಗಳನ್ನು ನಡೆಸಿದರು.ಎಸ್ಸೆಸ್ಸೆಫ್ ರಾಜ್ಯ ಫಿನಾನ್ಸ್ ಕಾರ್ಯದರ್ಶಿ ಸುಫ್ಯಾನ್ ಸಖಾಫಿ, ಎಸ್ಸೆಸ್ಸೆಫ್ ರಾಜ್ಯ ಕ್ಯಾಂಪಸ್ ಕಾರ್ಯದರ್ಶಿ ಶರೀಫ್ ಮಾಸ್ಟರ್ ಕೊಡಗು ಶುಭ ಆಶಂಸ ನುಡಿದರು.ಎಸ್ಸೆಸ್ಸೆಫ್ ರಾಜ್ಯ ದ‌ಅವಾ ಕನ್ವೀನರ್ ಸಯ್ಯದ್ ಖುಬೈಬ್ ತಂಙಳ್, ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಉಸ್ತುವಾರಿ ಮುನೀರ್ ಅಹ್ಮದ್ ಸಖಾಫಿ ಉಳ್ಳಾಲ, ಎಸ್ಸೆಸ್ಸೆಫ್ ರಾಜ್ಯ ವಿಸ್ಡಂ ಕಾರ್ಯದರ್ಶಿ ಎನ್.ಸಿ. ರಹೀಂ ಹೊಸ್ಮಾರ್, ಕನ್ವೀನರ್ ಶಾಹಿನ್ ಚಿಕ್ಕಮಗಳೂರು, ರಾಜ್ಯ ಯು ಡಿ ಕಾರ್ಯದರ್ಶಿ ಅಬ್ದುಲ್ ರೌಫ್ ಖಾನ್ ಮೂಡುಗೋಪಾಡಿ, ಎಸ್ಸೆಸ್ಸೆಫ್ ರಾಜ್ಯ ಪಬ್ಲಿಕೇಶನ್ ಕಾರ್ಯದರ್ಶಿ ಹುಸೈನ್ ಸ‌ಅದಿ ಹೊಸ್ಮಾರ್, ಎಸ್ಸೆಸ್ಸೆಫ್ ದ.ಕ ಈಸ್ಟ್ ಜಿಲ್ಲಾಧ್ಯಕ್ಷ ಜಿ.ಕೆ. ಇಬ್ರಾಹಿಂ ಅಮ್ಜದಿ, ಎಸ್ಸೆಸ್ಸೆಫ್ ಉಳ್ಳಾಲ ಡಿವಿಷನ್ ಅಧ್ಯಕ್ಷರಾದ ಅಲ್ತಾಫ್ ಸಂತೋಷ್ ಬಾಗ್, ಎಸ್.ಜೆ.ಯು ಉಡುಪಿ ಜಿಲ್ಲಾಧ್ಯಕ್ಷ ಎಂ.ಕೆ ಅಬ್ದುಲ್ ರಶೀದ್ ಸಖಾಫಿ ಮಜೂರು, ಎಸ್.ಜೆ.ಎಂ ಉಡುಪಿ ಜಿಲ್ಲಾಧ್ಯಕ್ಷ ಅಬ್ದುಲ್ ರಝಾಕ್ ಖಾಸಿಮಿ, ಎಸ್.ವೈ‌. ಎಸ್ ಉಡುಪಿ ಜಿಲ್ಲಾಧ್ಯಕ್ಷ ಅಡ್ವಕೇಟ್ ಹಂಝತ್ ಹೆಜಮಾಡಿ ಕೋಡಿ, ಕರ್ನಾಟಕ ಮುಸ್ಲಿಂ ಜಮಾತ್ ಉಡುಪಿ ಜಿಲ್ಲಾಧ್ಯಕ್ಷ ಬಿ.ಎಸ್.ಎಫ್ ರಫೀಕ್, ಎಸ್ಸೆಸ್ಸೆಫ್ ಮಾಜಿ ರಾಜ್ಯ ಕಾರ್ಯದರ್ಶಿ ಅಶ್ರಫ್ ರಝಾ ಅಂಜದಿ, ಎಸ್ಸೆ‌ಸ್ಸೆಫ್ ಮಾಜಿ ರಾಜ್ಯ ಕಾರ್ಯದರ್ಶಿ ಅದ್ದು ಹಾಜಿ ಉಪಸ್ಥಿತಿಯಿದ್ದರು.ಕಾರ್ಯಕ್ರಮದಲ್ಲಿ ಖವಾಲಿ, ನ‌ಅತೇ ಶರೀಫ್, ಕ್ರಾಂತಿಗೀತೆ, ಬುರ್ದಾ, ಮುಂತಾದ ವಿಶೇಷ ಪ್ರತಿಭಾನ್ವಿತ ವಿಧ್ಯಾರ್ಥಿಗಳ ಪ್ರದರ್ಶನ ವಿದ್ಯಾರ್ಥಿಗಳನ್ನು ಗಮನ ಸೆಳೆಯಿತು.ಕಾರ್ಯಕ್ರಮದಲ್ಲಿ ಕ್ಯಾಂಪಸ್ ಅಸೆಂಬ್ಲಿಯ ಭಾಗವಾಗಿ ನಡೆದ ವಿಧ್ಯಾರ್ಥಿನಿಯರ ಕ್ಯಾಲಿಗ್ರಫಿ ಮತ್ತು ಪ್ರಬಂಧ ಸ್ಪರ್ಧೆ ಹಾಗೂ ವಿಧ್ಯಾರ್ಥಿಗಳ ಪ್ರೋಮೋ ವೀಡಿಯೋ ಸ್ಪರ್ಧೆಯ ಪಲಿತಾಂಶವನ್ನು ಘೋಷಿಸಿ ಅವಾರ್ಡನ್ನು ನೀಡಲಾಯಿತು.ಪಲಿತಾಂಶBEST CALLIGRAPHY AWARD ನ್ನು ಶ್ರೀನಿವಾಸ್ ಯುನಿವರ್ಸಿಟಿ ಕಾಲೇಜ್ ಮುಕ್ಕ ಇಲ್ಲಿಯ ಬಿ.ಟೆಕ್ ಇಂಜಿನಿಯರ್ ವಿಧ್ಯಾರ್ಥಿನಿ ಆಯಿಶ ರಿಸ್ವ ಮತ್ತು ಮಣಿಪಾಲ್ ಯುನಿವರ್ಸಿಟಿ ಜೈಪುರ ಇಲ್ಲಿಯ ಬಿ.ಬಿ.ಎ ವಿಧ್ಯಾರ್ಥಿನಿ ಆಯಿಶತುಲ್ ಮಿಸ್ಬ ಪಡೆದಿರುತ್ತಾರೆ.BEST ESSAY AWARD ನ್ನು ಮಣಿಪಾಲ್ ಆಕಾಡೆಮಿ ಇಲ್ಲಿಯ ಬಿ.ಎಸ್.ಸಿ ಯ ವಿಧ್ಯಾರ್ಥಿನಿ ಆಯಿಶಾ ಅಶ್ಫಿಯ ಮತ್ತು ಎಸ್‌.ಟಿ ಅಂತೋನಿ ಪಿ.ಯು ಕಾಲೇಜ್ ನಾರಾವಿ ಬೆಳ್ತಂಗಡಿ ಇಲ್ಲಿಯ ಕಾಮರ್ಸ್ ವಿಧ್ಯಾರ್ಥಿನಿ ಅಬೀಬಾ ಬಾನು ಪಡೆದಿರುತ್ತಾರೆ.BEST PROMO AWARD ನ್ನು ಪದವಿ ಪೂರ್ವ ಕಾಲೇಜು ಕಾಪು ಇಲ್ಲಿಯ ಬಿ.ಕಾಂ ವಿಧ್ಯಾರ್ಥಿ ಅಬ್ದುಲ್ ಝಿಯಾನ್ ಕೊರಂಟಿಕಟ್ಟೆ ಮತ್ತು ಬ್ಯಾರೀಸ್ ಕಾಲೇಜು ಕೋಡಿ ಕುಂದಾಪುರ ಇಲ್ಲಿಯ ಪದವಿ ವಿಧ್ಯಾರ್ಥಿ ಮುಹಮ್ಮದ್ ತನ್ಸೀರ್ ನೇರಳಕಟ್ಟೆ ಪಡೆದಿರುತ್ತಾರೆ.ನಾಲ್ನೂರಕ್ಕೂ ಮಿಕ್ಕ ವಿಧ್ಯಾರ್ಥಿಗಳು ಭಾಗವಹಿಸಿದ್ದರು. ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಕ್ಯಾಂಪಸ್ ಕಾರ್ಯದರ್ಶಿ ತ್ವಾಹಿರ್ ಮೂಡುಗೋಪಾಡಿ ಸ್ವಾಗತಿಸಿ, ಎಸ್ಸೆಸ್ಸೆಫ್ ರಾಜ್ಯ ನಾಯಕ ಕೆ.ಎಸ್.ಎಮ್ ಮನ್ಸೂರ್ ಉಡುಪಿ ವಂದಿಸಿದರು.

error: Content is protected !! Not allowed copy content from janadhvani.com