ಧಾರ್ಮಿಕ ಮತ್ತು ಲೌಕಿಕ ವಿದ್ಯಾಭ್ಯಾಸಗಳಿಂದ ವಂಚಿತರಾಗಿ ಬಲುದೂರ ಉಳಿದಿರುವ ಮಧ್ಯ ಹಾಗೂ ಉತ್ತರ ಕರ್ನಾಟಕದ ಜನರಿಗಾಗಿ ಹಲವಾರು ದಾಯಿಗಳನ್ನು ನೇಮಿಸಿ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಕ್ರಾಂತಿ ನಡೆಸುತ್ತಿರುವ ದಅವಾ ಚಟುವಟಿಕೆಯೇ ಇಹ್ಸಾನ್ ಕರ್ನಾಟಕ.
ಕ
ರ್ನಾಟಕ ಕಲ್ಚರಲ್ ಫೌಂಡೇಶನ್(ಕೆ.ಸಿ.ಎಫ್) ವತಿಯಿಂದ ಸೌದಿ ಅರೇಬಿಯಾದಾದ್ಯಂತ ನಡೆಯುತ್ತಿರುವ ಇದರ ಪ್ರಚಾರದ ಭಾಗವಾಗಿ ಅಗಸ್ಟ್ 4ರಂದು ಬುರೈದ ತರ್ಫಿಯಾ ಇಸ್ತಿರಾದಲ್ಲಿ ಪ್ರಚಾರ ಸಮಾವೇಶ ನಡೆಯಿತು
ಉತ್ತರ ಕರ್ನಾಟಕದ ದಾರ್ಮಿಕ ಶಿಕ್ಷಣದ ಕೊರತೆ, ಮದರಸ , ಮಸೀದಿಗಳ ಅನಾನುಕೂಲತೆ, ನಿರಕ್ಷರತೆ ಹಾಗೂ ಅಲ್ಲಿನ ಶೈಕ್ಷಣಿಕ ಸ್ಥಿತಿಗತಿಗಳ ಬಗ್ಗೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಬಹು ಬಾಷಾ ಪಂಡಿತರೂ. ಇಹ್ಸಾನ್ ಕರ್ನಾಟಕ ಇದರ ಎಕ್ಸ್‌ಕ್ಯೂಟಿವ್ ಆಫಿಸರೂ ಆದ ಮೌಲಾನ ಮುಹಮ್ಮದ್ ಅನ್ವರ್ ಅಸ್ ಅದಿ ವೀಡಿಯೋ ಸಹಿತ ವಿವರಿಸಿದರು.
ಕಾರಟಗಿಯಲ್ಲಿ ಹಿಪ್ಲುಲ್ ಕುರ್ಆನ್ ಹಾಗೂ ಕೊಪ್ಪಳ ಜಿಲ್ಲೆಯ ಹಳ್ಳಿ ದಅವಾ ಪದ್ದತ್ತಿಗಾಗಿ ಝೋನ್ ವತಿಯಿಂದ 25 ಲಕ್ಷ ರೂಪಾಯಿಗಳ ಯೋಜನೆಯನ್ನು ಸಮರ್ಪಿಸಲಾಯಿತು.
ಝೋನ್ ಇಹ್ಸಾನ್ ಇಲಾಖೆ ಅಧ್ಯಕ್ಷ ಫೈಝಲ್ ಉಪ್ಪಿನಂಗಡಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯನ್ನು ಬಾದುಷಾ ಸಖಾಫಿ ಆಲಪುಝ ಉದ್ಘಾಟಿಸಿದರು ಕೆ.ಸಿ.ಎಫ್ ಸೌದಿ ರಾಷ್ಟ್ರೀಯ ಸಮಿತಿ ಪ್ರದಾನ ಕಾರ್ಯದರ್ಶಿ ಸಾಲಿ ಬೆಳ್ಳಾರೆ ಪ್ರಸ್ತಾವಿಕ ಮಾತುಗಳನ್ನಾಡಿದರು.
ಹಂಝ ಮೈಂದಾಲ, ಸಿದ್ದೀಕ್ ಸಖಾಫಿ ಪೆರುವಾಯಿ ಮುಅಝಂ ರತ್ನಗಿರಿ., ರಝಾಕ್ ಅಡ್ಡೂರು , ಹಾಜಿ ಮುಹಮ್ಮದ್ ಕುಕ್ಕುವಳ್ಳಿ ಸಹಿತ ಹಲವಾರು ಧಾರ್ಮಿಕ ಸಾಮಾಜಿಕ ನೇತಾರರು ಬಾಗವಹಿಸಿದರು
ಸಾಮಾಜಿಕ ಹಾಗೂ ಸಹಕಾರ ಮನೋಭಾವದ ಸೇವೆಗಾಗಿ ಮೂವರು ದುರೀಣರನ್ನು ಮೊಮೆಂಟೊ ನೀಡಿ ಗೌರವಿಸಲಾಯಿತು ಮಹಿಳೆಯರಿಗಾಗಿ ನಡೆದ ಪ್ರಬಂಧ ಹಾಗೂ ಕ್ವಿಝ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಪುರುಷರ ವಾಲಿಬಾಲ್ ಪಂದ್ಯಾಟದಲ್ಲಿ ಫ್ರೆಂಡ್ಸ್ ಕುಕ್ಕುವಳ್ಳಿ ಹಾಗೂ ನಜಂ ಫ್ರೆಂಡ್ಸ್ ಪ್ರಥಮ ಹಾಗೂ ದ್ವಿತೀಯ ಸ್ಥಾನವನ್ನು ಮಡಿಲಿಗೇರಿಸಿ ಟ್ರೋಪಿಯನ್ನು ಎತ್ತಿದರು ಬಶೀರ್ ಕನ್ಯಾನ ಸ್ವಾಗತಿಸಿ ಇರ್ಷಾದ್ ಸಚ್ಚೇರಿಪೇಟೆ ವಂದಿಸಿದ ಕಾಯ೯ಕ್ರಮವನ್ನು ಇಸಾಕ್ ಬಾ ಹಸನಿ ನಿರೂಪಿಸಿದರು.