janadhvani

Kannada Online News Paper

ಕಾನೂನು ಕೈಗೆತ್ತಿಕೊಳ್ಳಬೇಡಿ, ಶಾಂತಿ ಕಾಪಾಡಿ- ಖಾಝಿ ಮಾಣಿ ಉಸ್ತಾದ್

ಮಂಗಳೂರು: ಜಿಲ್ಲೆಯಲ್ಲಿ ನಡಯುತ್ತಿರುವ ಅಹಿತಕರ ಘಟನೆಗಳು ಖಂಡನೀಯ ಮತ್ತು ವಿಷಾದನೀಯ. ಯಾವುದೇ ಕಾರಣಕ್ಕೂ ಶಾಂತಿ ಕದಡದಂತೆ ಎಚ್ಚರಿಕೆ ವಹಿಸಿ, ಕಾನೂನು ಕೈಗೆತ್ತಿಕೊಲ್ಲದಿರಿ, ಕಾನೂನನ್ನು ಗೌರವಿಸಿ ಎಲ್ಲರೂ ಶಾಂತಿ ಸೌಹಾರ್ದ ಕಾಪಾಡಬೇಕೆಂದು ವಿನಂತಿಸುತಿದ್ದೇನೆ.

ಸರಕಾರ ಮತ್ತು ಗೃಹ ಇಲಾಖೆ ಈ ಬಗ್ಗೆ ಮುಂಜಾಗ್ರತೆ ಕ್ರಮ ಕೈಗೊಳ್ಳಬೇಕು ಈಗ ನಡೆದಿರುವ ಮೂರು ಅಮಾಯಕರ ಕೊಲೆಗೆ ಕಾನೂನು ರೀತಿಯ ಶಿಕ್ಷೆ ನೀಡಬೇಕು ಎಂದು ಖಾಝಿ ಮಾಣಿ ಉಸ್ತಾದ್ ಆಗ್ರಹಿಸಿದರು.

ಸಂಂಧಪಟ್ಟ ನಾಯಕರು ತಮ್ಮ ತಮ್ಮ ಮೊಹಲ್ಲಾಗಳಲ್ಲಿ ಈ ಬಗ್ಗೆ ಶಾಂತಿಯ ಸಂದೇಶವನ್ನು ನೀಡಬೇಕೆಂದು ಉಡುಪಿ,ಹಾಸನ ,ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲಾ ಸಂಯುಕ್ತ ಜಮಾಅತ್ ಖಾಝಿ ಶೈಖುನಾ ಝೈನುಲ್ ಉಲಮಾ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ತಿಳಿಸಿದ್ದಾರೆ.

error: Content is protected !! Not allowed copy content from janadhvani.com