janadhvani

Kannada Online News Paper

ಮುಖ್ಯಮಂತ್ರಿ ಬೊಮ್ಮಾಯಿ ರಾಜಿನಾಮೆಗೆ ಗಲ್ಫ್ ಕನ್ನಡಿಗರ ಆಗ್ರಹ

ಧರ್ಮಾಧಾರಿತ ರಾಜಕೀಯದಿಂದ
ಕರ್ನಾಟಕದಲ್ಲಿ ಕಳೆದ ಒಂದು ವರ್ಷದಿಂದ ನಿರಂತರವಾಗಿ ನಡೆಯುತ್ತಿರುವ ಕೋಮು ದೌರ್ಜನ್ಯಗಳಿಂದಾಗಿ ವಿದೇಶಿಗಳು ಕನ್ನಡಿಗರನ್ನು ವಕ್ರ ದೃಷ್ಟಿಯಿಂದ ನೋಡಿಕೊಳ್ಳುತ್ತಿದ್ದಾರೆ.
ರಾಜ್ಯದಲ್ಲಿ ಎರಡು ಸಮುದಾಯಗಳ ನಡುವೆ ನಡೆಯುತ್ತಿರುವ ಗಲಭೆ, ಅಮಾಯಕರ ಕೊಲೆ ಬಗ್ಗೆ
ವಿದೇಶಿಗಳು ಪರಸ್ಪರ ಮಾತನಾಡುವಾಗ ಮನಸ್ಸಿಗೆ ನೋವಾಗುತ್ತಿದೆ.

ಕರ್ನಾಟಕದಲ್ಲಿ ಎಂತೆಂತೆಲ್ಲಾ ಮುಖ್ಯಮಂತ್ರಿಗಳು ಬಂದು ಹೋಗಿದ್ದಾರೆ. ಕೋಮು ಗಲಭೆಯೂ ನಡೆದಿದೆ.ಆದರೆ, ಕರ್ನಾಟಕದಲ್ಲಿ ಈ ಮಟ್ಟದ ಅರಾಜಕತೆ ಎಂದೂ ನಡೆದಿಲ್ಲ.

ಕಾಮನ್ ಮ್ಯಾನ್’ ಎಂದು ಜನರಿಂದ ಚಪ್ಪಾಳೆ, ಸಿಳ್ಳೆ ಗಿಟ್ಟಿಸಿಕೊಂಡ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಕ್ಷರಶಃ ಕ್ರಿಮಿನಲ್ ಮ್ಯಾನ್ ಆಗಿದ್ದಾರೆ.

2023 ರ ವಿಧಾನ ಸಭೆ ಚುನಾವಣೆ ತನಕ ಬೊಮ್ಮಾಯಿ ಸರಕಾರ ಮುಂದುವರಿದರೆ ಇನ್ನಷ್ಟು ಅಮಾಯಕರ ಹೆಣಗಳು ಬೀಳುವುದರಲ್ಲಿ ಸಂಶಯವಿಲ್ಲ.

ಆದ್ದರಿಂದ ಕರ್ನಾಟಕದ ಸರ್ವಧರ್ಮೀಯರು ಒಂದಾಗಿ, ಒಗ್ಗಟ್ಟಾಗಿ ಬಸವರಾಜ ಬೊಮ್ಮಾಯಿಯ ರಾಜಿನಾಮೆಯನ್ನು ಒತ್ತಾಯಿಸಬೇಕೆಂದು ಗಲ್ಫ್ ಕನ್ನಡಿಗರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

error: Content is protected !! Not allowed copy content from janadhvani.com