janadhvani

Kannada Online News Paper

ಸುಳ್ಯ ಪ್ರವೀಣ್ ಹತ್ಯೆ ಖಂಡನೀಯ: ಜಿಲ್ಲೆಯಲ್ಲಿ ಶಾಂತಿ ಕಾಪಾಡಲು ಮನವಿ: ಕೆ.ಅಶ್ರಫ್,ಮುಸ್ಲಿಮ್ ಒಕ್ಕೂಟ.

ಸುಳ್ಯ ರಾಜಕೀಯ ಪಕ್ಷದ ಮುಖಂಡ ಪ್ರವೀಣ್ ನನ್ನು ದುಷ್ಕರ್ಮಿಗಳು ಹತ್ಯೆ ನಡೆಸಿದ್ದು ಖಂಡನೀಯ. ಜಿಲ್ಲೆಯಲ್ಲಿ ಮತೀಯ ಆಧಾರದಲ್ಲಿ ಇತ್ತೀಚೆಗೆ ದುರ್ಘಟನೆಗಳು ಸಂಭವಿಸುತ್ತಿರುವುದು ಅತ್ಯಂತ ಖೇದಕರವಾಗಿದೆ. ಇಂತಹ ಬೆಳವಣಿಗೆಗಳಿಂದ ಜಿಲ್ಲೆಯ ಶಾಂತಿ ಸುವ್ಯವಸ್ಥೆ ಕಾಪಾಡುವಿಕೆಗೆ ತೀವ್ರ ಭಂಗವಾಗುತ್ತದೆ. ಸುಳ್ಯದಲ್ಲಿ ಇತ್ತೀಚೆಗೆ ಮಸೂದ್ ಎಂಬ ಯುವಕನು ಇಂತಹ ಕೃತ್ಯಕ್ಕೆ ಬಲಿಯಾಗಿದ್ದಾನೆ. ಮತೀಯ ದ್ವೇಷದಿಂದ ಎಂದಿಗೂ ಜನರ ಜೀವನ ಸುಗಮವಾಗಿ ನಡೆಯಲಾರದು.

ಜಿಲ್ಲಾಡಳಿತ,ಪೊಲೀಸರು ಮತ್ತು ಸರಕಾರ ಮತೀಯ ದ್ವೇಷಿತ ಅಪರಾಧದ ಆರೋಪಿಗಳನ್ನು ಬಂಧಿಸಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಮತ್ತು ಜಿಲ್ಲೆಯಲ್ಲಿ ಇನ್ನು ಮುಂದೆ ಇಂತಹ ಘಟನೆಗಳು ನಡೆಯದಂತೆ ಗುಪ್ತಚರ ಸಂಸ್ಥೆ ಗಳನ್ನು ಸಕ್ರಿಯ ಗೊಳಿಸಬೇಕು.ಸಾರ್ವಜನಿಕರು ಈ ಘಟನೆಯ ಬಗ್ಗೆ ಯಾವುದೇ ಊಹಾಪೋಹ ವದಂತಿಗಳಿಗೆ ಕಿವಿ ಹಚ್ಚಿ ಗೊಂದಲ ಸೃಷ್ಟಿ ಮಾಡಬಾರದು.ಪೊಲೀಸರು ಈ ಕೃತ್ಯದ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಮತ್ತು ಕೃತ್ಯದ ಹಿಂದಿನ ಸತ್ಯಾಂಶವನ್ನು ಪ್ರಕಟಿಸಬೇಕು.ಪೊಲೀಸರು ಈ ಘಟನೆಯಲ್ಲಿ ಸಮಗ್ರ ಕೂಲಂಕುಷ ತನಿಖೆ ನಡೆಸುವ ಬಗ್ಗೆ ಭರವಸೆ ಹೊಂದಿದ್ದೇವೆ.

ಕೆ.ಅಶ್ರಫ್.
ಅಧ್ಯಕ್ಷರು.ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ.

error: Content is protected !! Not allowed copy content from janadhvani.com