ಪುತ್ತೂರು: SMA ಈಸ್ಟ್ ಜಿಲ್ಲೆಯ ವತಿಯಿಂದ ಇಂದು ಪುತ್ತೂರು ಸುನ್ನಿ ಸೆಂಟನ್ನಲ್ಲಿ. SMA ಝೋನಲ್ ಪದಾಧಿಕಾರಿಗಳ ಸಂಗಮ ಜರುಗಿತ್ತು. ಈ ಸಂದರ್ಭದಲ್ಲಿ ದ.ಕ ಜಿಲ್ಲೆಯ
ಕೃಷ್ಣಾಪುರ 6ನೇ ಬ್ಲಾಕ್ ಬದ್ರಿಯಾ ಮದರಸ ವಿದ್ಯಾರ್ಥಿ ಶಯಾನ್ ಎಂಬ ಅಪ್ರಾಪ್ತ ಬಾಲಕನ ಮೇಲೆ ಹಲ್ಲೆ ನಡೆಸಿದ ಕೃತ್ಯ ಖಂಡನೀಯ.
ದ.ಕ ಜಿಲ್ಲೆಯಲ್ಲಿ ಪದೇಪದೇ ಮಸೀದಿ ಮದರಸ ವಿದ್ಯಾರ್ಥಿಗಳನ್ನು ಗುರಿಯಾಗಿರಿಸಿ ಇಂಥ ಕೃತ್ಯಗಳು ನಡೆಯುತ್ತಲೇ ಇದೆ ಈ ಬಗ್ಗೆ ಪೊಲೀಸ್ ಇಲಾಖೆ ಕೂಡಲೇ ಎಚ್ಚೆತ್ತುಕೊಂಡು ದುಷ್ಕರ್ಮಿಗಳನ್ನು ಪತ್ತೆಹಚ್ಚಿ ವಿದ್ಯಾರ್ಥಿಗೆ ನ್ಯಾಯ ಒದಗಿಸಬೇಕು ಎಂದು ಸಭೆ ಒತ್ತಾಯಿಸಿತ್ತು. ಜಿಲ್ಲಾಧ್ಯಕ್ಷರಾದ ಸೈಯದ್ ಸಾದತ್ ತಂಙಳ್ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ SMA ರಾಜ್ಯ ಉಪಾಧ್ಯಕ್ಷರಾದ ಹಾಜಿ ಹಮೀದ್ ಕೊಡಂಗಾಯಿ ಮದರಸ ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯ ಸಹಿಸಲು ಸಾಧ್ಯವಿಲ್ಲ ಇದನ್ನು ತೀವ್ರವಾಗಿ ಖಂಡಿಸುತ್ತೇವೆ ಮದ್ರಸಾ ಆಡಳಿತ ಸಮಿತಿ ವಿದ್ಯಾರ್ಥಿಗಳ ಪೋಷಕರು ಈ ಬಗ್ಗೆ ಜಾಗುರುತರಗಬೇಕು ಸರ್ಕಾರ ದುಷ್ಕರ್ಮಿಗಳ ಅಟ್ಟಹಾಸ ಕಡಿವಾನ ಹಾಕಿ ನಿಲ್ಲಿಸದಿದ್ದಲ್ಲಿ ಹೋರಾಟ ಅನಿವಾರ್ಯ ಎಂದರು ಜಿಲ್ಲಾ ಕಾರ್ಯದರ್ಶಿ ಇಬ್ರಾಹಿಂ ಸಖಾಫಿ ಕಬಕ ಸಭೆಯನ್ನು ಉಧ್ಘಾಟಿಸಿದರು.
ಪ್ರಸ್ತುತ ಸಭೆಯಲ್ಲಿ ಬೆಳ್ಳಾರೆ ಝೋನಲ್ ಅಧ್ಯಕ್ಷರಾದ ಜನಾಬ್ ಇಬ್ರಾಹಿಂ ಬೀಡು ಕಾರ್ಯದರ್ಶಿ ಹಮೀದ್ ಸುಣ್ಣಮೂಲೆ ಕೋಶಾಧಿಕಾರಿ ಅಬೂಬಕ್ಕರ್ ಹಾಜಿ ವಿಟ್ಲ ಝೋನಲ್ ಕಾರ್ಯದರ್ಶಿ ಖಾಸಿಂ ಸಖಾಫಿ ಉಪ್ಪಿನಂಗಡಿ ಝೋನಲ್ ಅಧ್ಯಕ್ಷರಾದ ಜನಾಬ್ ಮುಹಮ್ಮದ್ ಹಾಜಿ ಕಾರ್ಯದರ್ಶಿ ಮಜೀದ್ ಅಹ್ಸನಿ ಕೋಶಾಧಿಕಾರಿ ರಮ್ಲಾನ್ ನೆಕ್ಕಿಲ್ ಉಜಿರೆ ಝೋನಲ್ ಅಧ್ಯಕ್ಷರಾದ ಜನಾಬ್ ಹಮೀದ್ ಮುಂಡಾಜೆ ಜಿಲ್ಲಾ ಉಪಾಧ್ಯಕ್ಷರಾದ ಜನಾಬ್ ಇಸ್ಮಾಯಿಲ್ ಉಳ್ತೂರು ಕಾರ್ಯದರ್ಶಿ ಮುಹಮ್ಮದ್ ಕಾಜೂರು ಹಾಗೂ ಹಲವಾರು ಕಾರ್ಯಕರ್ತರು ಬಾಗವಹಿಸಿದ್ದರು ಜಿಲ್ಲಾ ಸಂಘಟನಾ ಕಾರ್ಯದರ್ಶಿ ಅಶ್ರಫ್ ಹಿಮಮಿ ಉಜಿರೆ ಸ್ವಾಗತಿಸಿ ಮುಹಮ್ಮದ್ ಬಶೀರ್ ಮದನಿ ಜಾರಿಗೆಬೈಲು ಧನ್ಯವಾದ ಸಮರ್ಪಿಸಿದರು.