janadhvani

Kannada Online News Paper

ಕಾಸರಗೋಡು: ಕಾಲು ಜಾರಿ ಬಾವಿಗೆ ಬಿದ್ದು ಯುವಕ ಮೃತ್ಯು

ಕಾಸರಗೋಡು,ಜೂ.28: ಯುವಕನೊಬ್ಬ ಕಾಲು ಜಾರಿ ಬಾವಿಗೆ ಬಿದ್ದು ಮೃತಪಟ್ಟ ಘಟನೆ ಇಲ್ಲಿನ ಕೊಲ್ಲಂಪಾಡಿಯಲ್ಲಿ ನಿನ್ನೆ ನಡೆದಿದೆ.ಮೃತ ಯುವಕನನ್ನು ಕೊಲ್ಲಂಪಾಡಿಯ ದಿವಂಗತ ಅಬ್ದುಲ್ ರಹ್ಮಾನ್ ಅವರ ಕಿರಿಯ ಪುತ್ರ ಮುಹಮ್ಮದ್ ಅದ್ನಾನ್ (24) ಎಂದು ಗುರುತಿಸಲಾಗಿದೆ.

ಸೋಮವಾರ ಸಂಜೆ ಎರಿಯಪಾಡಿಯಲ್ಲಿರುವ ತನ್ನ ಸಹೋದರಿ ಸರ್ಫಿನಾ ಅವರ ಮನೆಗೆ ತೆರಳಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಬಾವಿಗೆ ಬಿದ್ದ ಯುವಕನನ್ನು ಸ್ಥಳೀಯರು ಕೂಡಲೇ ಆಸ್ಪತ್ರೆಗೆ ಕರೆದೊಯ್ದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ.

ತಾಯಿ ಸ್ವಫಿಯಾ, ಸಹೋದರರಾದ ಅಬ್ದುಲ್ ಖಾದರ್, ಹನಾನ್, ಸಹೋದರಿ ಸಮೀನಾ, ಸರ್ಫೀನಾ ಸಹಿತ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಮೃತ ಯುವಕನ ಮಗ್ಫಿರತ್ ಗಾಗಿ ಪ್ರತ್ಯೇಕ ದುಆ ಹಾಗೂ ಜನಾಝ ನಮಾಜ್ ನಿರ್ವಹಿಸುವಂತೆ ಕುಟುಂಬಸ್ಥರು ಮನವಿ ಮಾಡಿದ್ದಾರೆ.

error: Content is protected !! Not allowed copy content from janadhvani.com