janadhvani

Kannada Online News Paper

ಸೌದಿ: ಸಂದರ್ಶಕ ವೀಸಾಗಳಲ್ಲಿ ಹೆಚ್ಚಿನ ಕುಟುಂಬಸ್ಥರನ್ನು ಕರೆತರಲು ಅವಕಾಶ

ಕನಿಷ್ಠ ಮೂರು ತಿಂಗಳ ಅವಧಿಯ ಇಖಾಮಾ ಹೊಂದಿರುವವರ ಕುಟುಂಬಸ್ಥರಿಗೆ ಮಾತ್ರ ಸಂದರ್ಶಕ ವೀಸಾ ನೀಡಲಾಗುತ್ತದೆ.

ರಿಯಾದ್: ಸೌದಿ ಅರೇಬಿಯಾ ಎಲ್ಲಾ ವರ್ಗದ ಜನರಿಗೆ ವಿಸಿಟಿಂಗ್ ವೀಸಾಗಳನ್ನು ನೀಡಲಿದೆ. ಸೌದಿ ಅರೇಬಿಯಾದ ಕೆಲಸದ ವೀಸಾಗಳನ್ನು ಹೊಂದಿರುವವರು ತಮ್ಮ ಪ್ರಾಯೋಜಕತ್ವದಲ್ಲಿ ಹೆಚ್ಚಿನ ಸಂದರ್ಶಕರನ್ನು ಕರೆತರಬಹುದು. ಪತ್ನಿ, ಪತಿ, ಮಕ್ಕಳು, ತಂದೆ, ತಾಯಿ, ಪತಿ, ಪತ್ನಿಯರ ತಂದೆ, ತಾಯಿ ಅಲ್ಲದೇ, ಇನ್ನಷ್ಟು ಮಂದಿಗೆ ಸಂದರ್ಶಕರ ವೀಸಾ ನೀಡಲು ತೀರ್ಮಾನ ಕೈಗೊಳ್ಳಲಾಗಿದೆ.

ಸಹೋದರ, ಸಹೋದರಿ ಹಾಗೂ ಕುಟುಂಬ, ಹೆಂಡತಿ ಮತ್ತು ಗಂಡನ ಒಡಹುಟ್ಟಿದವರು ಮತ್ತು ತಂದೆ ಅಥವಾ ತಾಯಿಯ ತಂದೆ ತಾಯಿಗೆ ಸೌದಿ ಅರೇಬಿಯಾದಲ್ಲಿ ಸಂದರ್ಶಕರ ವೀಸಾವನ್ನು ನೀಡಲಾಗುತ್ತದೆ.

ಹೆಚ್ಚಿನ ಸಂದರ್ಶಕರ ವೀಸಾಗಳಿಗೆ ಅವಕಾಶ ನೀಡಲು ಕಾನೂನಿಗೆ ತಿದ್ದುಪಡಿ ತರಲಾಗುವುದು. ಕನಿಷ್ಠ ಮೂರು ತಿಂಗಳ ಅವಧಿಯ ಇಖಾಮಾ ಹೊಂದಿರುವವರ ಕುಟುಂಬಸ್ಥರಿಗೆ ಮಾತ್ರ ಸಂದರ್ಶಕ ವೀಸಾ ನೀಡಲಾಗುತ್ತದೆ. ನಫಾತ್ ಮೊಬೈಲ್ ಅಪ್ಲಿಕೇಶನ್ ಅನ್ನು ಸಕ್ರಿಯಗೊಳಿಸಬೇಕು ಎಂಬ ಷರತ್ತು ಕೂಡ ಇದೆ. ಈ ಅಪ್ಲಿಕೇಶನ್ ಮೂಲಕ ಸಂದರ್ಶಕ ವೀಸಾಗೆ ಅರ್ಜಿ ಸಲ್ಲಿಸಬೇಕು.