ಕೆ.ಸಿ.ಎಫ್ ದಮ್ಮಾಮ್ ಝೋನ್ ಸಂಘಟನಾ ವಿಭಾಗದ ಸಹಕಾರದೊಂದಿಗೆ ನಡೆಸಿದ ಕ್ರಿಯೇಟ್ ತರಗತಿ ದಿನಾಂಕ 26 ಮೇ 2022 ಗುರುವಾರ ರಾತ್ರಿ ದಮ್ಮಾಮ್ ಕೆ.ಸಿ.ಎಫ್ ಭವನದಲ್ಲಿ ಬಹಳ ಯಶಸ್ವಿಯಾಗಿ ನಡೆಯಿತು . ದಮ್ಮಾಮ್ ಝೋನ್ ಅಧ್ಯಕ್ಷರಾದ ಫಾರೂಕ್ ಮುಸ್ಲಿಯಾರ್ ಕುಪ್ಪೆಟ್ಟಿ ರವರು ದುಆ ನೆರೆವೇರಿಸಿದರು.
ಸಂಘಟನಾ ವಿಭಾಗದ ಕಾರ್ಯದರ್ಶಿ ಅಶ್ರಫ್ ನಾವುಂದ ತರಗತಿಗೆ ಆಗಮಿಸಿದ ಸರ್ವ ಕಾರ್ಯಕರ್ತರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಬಳಿಕ ಕೆ.ಸಿ.ಎಫ್ ರಾಷ್ಟ್ರಿಯ ಸಮಿತಿಯ ಅಧ್ಯಕ್ಷರಾದ ನಝೀರ್ ಹಾಜಿ ಕಾಶಿಪಟ್ನ ರವರು ತರಗತಿಯನ್ನು ಉದ್ಘಾಟಿಸಿದರು. ಲೀಡರ್ಸ್ ಕ್ರಿಯೇಟ್ ಲೀಡರ್ಸ್ ತರಗತಿಯನ್ನು ನಡೆಸಿಕೊಟ್ಟ ಐ.ಸಿ.ಎಫ್ ದಮ್ಮಾಮ್ ಸೆಂಟ್ರಲ್ ಪ್ರಧಾನ ಕಾರ್ಯದರ್ಶಿ ಅಬ್ಬಾಸ್ ಮಾಸ್ಟರ್‌ರವರು, ಕಾರ್ಯಕರ್ತರಿಗೆ ಬಹಳಷ್ಟು ಉತ್ತಮ ರೀತಿಯಲ್ಲಿ ಮನುಮುಟ್ಟುವಂತೆ ತಮ್ಮ ಜಬಾಬ್ದಾರಿಗಳನ್ನು ನಿಭಾಯಿಸುವ ಬಗ್ಗೆ ಹಾಗೂ ಸಂಘಟನೆಯ ಬೆಳವಣಿಗೆಗೆ ಬೇಕಾದ ಸವಿವರವಾದ ಮಾಹಿತಿಯನ್ನೊಳಗೊಂಡ ಅತ್ಯುತ್ತಮ ತರಗತಿಯನ್ನು ನಡೆಸಿಕೊಟ್ಟರು.
ಕೆ.ಸಿ.ಎಫ್ ಸೌದಿ ರಾಷ್ಟ್ರಿಯ ಸಮಿತಿಯ ಸಂಘಟನಾ ವಿಭಾಗದ ಅಧ್ಯಕ್ಷರಾದ ಅಬ್ದುಲ್ ರಶೀದ್ ಸಖಾಫಿ ಉಸ್ತಾದರು, ಎಲ್ಲಾ ವಿಂಗ್ ಗಳ ಜವಾಬ್ದಾರಿಗಳೇನು ಎಂಬ ಬಗ್ಗೆ ಕಾರ್ಯಕರ್ತರಿಗೆ ಮನಮುಟ್ಟುವಂತೆ ಉತ್ತಮ ರೀತಿಯಲ್ಲಿ ವಿವರಿಸಿದರು. ಸಂಘಟನಾ ವಿಭಾಗದ ಅಧ್ಯಕ್ಷರಾದ ಪಿ.ಸಿ.ಅಬುಬಕ್ಕರ್ ಸಅದಿ ಉಸ್ತಾದ್ ರವರು, ತರಗತಿಯಲ್ಲಿ ಭಾಗಿಯಾದರೆ ಲಭಿಸುವ ಪ್ರಯೋಜನಗಳೇನು ಹೇಗೆ ಪಡೆಯಬಹುದು ಎನ್ನುವುದನ್ನು ತಿಳಿಸಿಕೊಟ್ಟರು.
ದಮ್ಮಾಮ್ ಝೋನ್ ಅಧ್ಯಕ್ಷರಾದ ಫಾರೂಕ್ ಮುಸ್ಲಿಯಾರ್ ಕುಪ್ಪೆಟ್ಟಿಯವರು ಮಾತನಾಡಿ, ತರಗತಿಯ ಉತ್ತಮ ಸಂದೇಶಗಳನ್ನು ನೆನಪಿಸುತ್ತಾ ದಮ್ಮಾಮ್ ಝೋನಿನ ಕಾರ್ಯಚರಣೆಯಲ್ಲಿ ಎಲ್ಲರೂ ಭಾಗಿಯಾಗಲು ಕರೆ ನೀಡಿದರು.
ಝೋನ್ ಪ್ರ.ಕಾರ್ಯದರ್ಶಿ ತಮೀಮ್ ಕೂಳೂರು ಕ್ಯಾಬಿನೆಟ್ ನಾಯಕರ ಅನಿಸಿಕೆಯನ್ನು ಪಡೆದು, ಭಾಗವಹಿಸಿದ ಎಲ್ಲಾ ನಾಯಕರಿಗೂ ಹಾಗೂ ಕಾರ್ಯರ್ತರಿಗೂ ಧನ್ಯವಾದವನ್ನು ಸಲ್ಲಿಸಿದರು.