ತಲಪಾಡಿ ಕೆ.ಸಿ.ನಗರದಲ್ಲಿ ಕಳೆದ ಕೆಲವು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಮಿನ್‌ಹಾಜ್ ಮಹಿಳಾ ಕಾಲೇಜಿನಲ್ಲಿ ಶರೀಅತ್ ಪದವಿ ಕೋರ್ಸ್ ಪೂರ್ತಿಗೊಳಿಸಿದ ವಿದ್ಯಾರ್ಥಿನಿಯರ ಪದವಿ ಪ್ರದಾನ ಕಾರ್ಯಕ್ರಮವು ಜೂನ್ ಹನ್ನೊಂದು ಶನಿವಾರ ಬೆಳಗ್ಗೆ 9 ಗಂಟೆಯಿಂದ ಕೆಸಿ ರೋಡ್ ಮುನವ್ವಿರುಲ್ ಇಸ್ಲಾಂ ಮದ್ರಸದ ‘ಮರ್ಹೂಂ ಕೆ.ಎಸ್. ಬಾವ ಹಾಜಿ ವೇದಿಕೆ’ಯಲ್ಲಿ ನಡೆಯಲಿದೆ.
ಈ ಸಮಾರಂಭದಲ್ಲಿ ಕಳೆದ ಐದು ವರ್ಷಗಳಲ್ಲಿ, ಮೂರು ಬ್ಯಾಚ್‌ಗಳಲ್ಲಿ ಅಧ್ಯಯನ ಪೂರ್ತಿಗೊಳಿಸಿದ ಮೂವತ್ತೆಂಟು ವಿದ್ಯಾರ್ಥಿನಿಯರಿಗೆ ‘ಅಲ್ ಮಾಹಿರಾ’ ಪದವಿ ಪ್ರದಾನ ಮಾಡಲಾಗುವುದು.
ಉಜಿರೆ ಸಯ್ಯಿದತ್ ಖದೀಜತುಲ್ ಕುಬ್ರಾ ಬೀವಿ ಬಾಅಲವಿ ಸನದ್ ಪ್ರದಾನ ಮಾಡುವರು.
ಪರಿಸರದ ಹೈಸ್ಕೂಲ್ ಗಳಲ್ಲಿ ಈ ಕಳೆದ ಎಸ್ಸೆಸ್ಸೆಲ್ಸಿ ಯಲ್ಲಿ ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿನಿಯರನ್ನು ಸನ್ಮಾನಿಸಲಾಗುವುದು. ಯೇನೆಪೋಯಾ ಡೆಂಟಲ್ ಕಾಲೇಜಿನ ಡಾ. ಉಮ್ಮು ಕುಲ್ಸೂಮ್ ಶಿವಮೊಗ್ಗ ಸನ್ಮಾನ ಕಾರ್ಯಕ್ರಮ ನಿರ್ವಹಿಸುವರು.
ರಂಸೀನಾ ಅಲ್ ಸ್ವಾಫಿಯಾ ಆಲಂಪಾಡಿ, ರಾಹಿಲಾ ಶೇಖ್ ಅಲ್ ಖಮರಿಯಾ, ಕೆ.ಎಂ.ಸುಮಯ್ಯಾ ಮೋಂಟುಗೋಳಿ,ಮಿನ್ಹಾಜ್ ಅಲುಂನಿ ಅಸೋಸಿಯೇಷನ್ ಅಧ್ಯಕ್ಷೆ ಸಈದಾ ಫಾತಿಮಾ ಅಲ್ ಮಾಹಿರಾ, ಭಾಷಣ ಮಾಡುವರು.
ಬೆಳಗ್ಗೆ ನಡೆಯುವ ಮುನ್ನುಡಿ ಸಮಾವೇಶಕ್ಕೆ ಸಂಸ್ಥೆಯ ಅಧ್ಯಕ್ಷ ಡಾ.ಎಮ್ಮೆಸ್ಸೆಂ. ಝೈನೀ ಕಾಮಿಲ್ ಹಾಗೂ ಪ್ರಿನ್ಸಿಪಾಲ್ ಬಶೀರ್ ಅಹ್ಸನಿ ತೋಡಾರ್ ನೇತೃತ್ವ ನೀಡುವರು.
ಕಾರ್ಯಕ್ರಮ ಆಹ್ವಾನಿತ ಮಹಿಳೆಯರಿಗೆ ಮಾತ್ರ ಇರುವುದೆಂದು ಸಂಸ್ಥೆಯ ಪ್ರಧಾ ಕಾರ್ಯದರ್ಶಿ ಪಿ.ಎಂ.ಅಬ್ಬಾಸ್ ಪೂಮಣ್ಣು ತಿಳಿಸಿದ್ದಾರೆ
















ಇನ್ನಷ್ಟು ಸುದ್ದಿಗಳು
ಮುಸ್ಲಿಂ ನಾಯಕರ ಕಡೆಗಣನೆ: ಕಾಂಗ್ರೆಸ್ ಪಕ್ಷ ಧೂಳಿಪಟ ದೂರವಿಲ್ಲ- ರಜ್ವಿ
ವಾಮಂಜೂರು: ಸಾಂತ್ವನ ಹಾಗೂ ಹಣ್ಣು ಹಂಪಲು ವಿತರಣೆ
ಮಂಗಳೂರು ಮೂಲದ ಶಾಜಹಾನ್ ರಸ್ತೆ ಅಪಘಾತದಲ್ಲಿ ಮರಣ
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಮೇ 7ರಂದು ದಾರುಲ್ ಅಮಾನ್ ಎಲ್ಲೂರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸನದು ದಾನ ಸಮಾರಂಭ
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ