ಲುಲು ಅದೃಷ್ಟ ಡ್ರಾ ಮತ್ತು ಉಚಿತ ಉಡುಗೊರೆ: ಸುಳ್ಳು ಸಂದೇಶಗಳ ಬಗ್ಗೆ ಎಚ್ಚರ

ಅಬುಧಾಬಿ: ಲುಲು ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಸುಳ್ಳು ಸಂದೇಶಗಳನ್ನು ಹರಡುವವರ ವಿರುದ್ದ ಅಧಿಕೃತರು ಎಚ್ಚರಿಕೆ ನೀಡಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ, ಲುಲು ಅದೃಷ್ಟ ಡ್ರಾ ಮತ್ತು ಉಚಿತ ಉಡುಗೊರೆ ರಶೀದಿಗಳನ್ನು ನೀಡುತ್ತಿದೆ ಎಂದು ಸಂದೇಶ ಹರಡಲಾಗುತ್ತಿದೆ.
ಕಳೆದ ಹಲವು ದಿನಗಳಿಂದ ಲುಲು 500 ದಿರ್ಹಂ ಗಳ ಉಚಿತ ಶಾಪಿಂಗ್ ರಶೀದಿಗಳನ್ನು ಒದಗಿಸುತ್ತಿದೆ ಎಂದು ಪ್ರಚಾರ ಪಡಿಸಲಾಗಿದೆ.

ಇಂತಹ ಮೋಸ ಘೋಷಣೆಗಳಿಗೆ ಬಲಿ ಬೀಳದಂತೆ ಮತ್ತು ಇಂತಹ ಯಾವುದೇ ಘೋಷಣೆ ಲುಲು ಕಡೆಯಿಂದ ನೀಡಲಾಗಿಲ್ಲ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಕೆಲವು ಮಂದಿಗೆ ಲುಲು ದಿಂದ ಎನ್ನುವಂತೆ ಕೆಲವು ಫೋನ್ ಕರೆಗಳು ಕೂಡ ಬಂದಿವೆ ಎನ್ನಲಾಗಿದೆ.

ಇದು ವ್ಯಕ್ತಿ ವಿವರಗಳು, ಬ್ಯಾಂಕ್ ಖಾತೆ ಸಂಖ್ಯೆ, ಕಾರ್ಡ್ ಸಂಖ್ಯೆಗಳು ಇತ್ಯಾದಿಗಳನ್ನು ದೋಚುವ ಪ್ರಯತ್ನವಾಗಿದೆ. ಅಂತಹ ಯಾವುದೇ ಮಾಹಿತಿಯನ್ನು ಪಡೆಯಲು ಯಾರನ್ನೂ ಲುಲು ನಿಯೋಜಿಸಿಲ್ಲ. ಇದರ ವಿರುದ್ಧ ಜಾಗರೂಕರಾಗಿರಿ.

ಯಾವುದೇ ಕೊಡುಗೆಗಳು ಅಥವಾ ಯೋಜನೆಗಳನ್ನು ಲುಲು ಭರವಸೆ ನೀಡಿದರೆ, ಅದನ್ನು ಸಂಸ್ಥೆಯ ಸಾಮಾಜಿಕ ಮಾಧ್ಯಮದ ಖಾತೆಗಳಲ್ಲಿ ಪ್ರಕಟಿಸಲಾಗುತ್ತದೆ ಎಂದು ಲುಲುವಿನ ಪತ್ರಿಕಾ ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!