ತ್ವಾಯಿಫ್: ಗಾಂಧೀಜಿಯವರ ಕನಸು ಸಂಪೂರ್ಣ ಬದಲಾವಣೆಯಾಗಿದೆ- ಹನೀಫ್ ಹಿಮಮಿ ಕುಂಡಡ್ಕ

ತ್ವಾಯಿಫ್:ಆಸಿಫಾಳ ಬಿಸಿ ರಕ್ತದೊಂದಿಗೆ ಭಾರತ ಕುದಿಯುತ್ತಿದೆ ಎಂಬ ಧ್ಯೇಯ ವಾಕ್ಯದೊಂದಿಗೆ ಫೈಟರ್ಸ್ ಸ್ಪೋರ್ಟ್ಸ್ ಕ್ಲಬ್ ತ್ವಾಯಿಫ್ ಸೌದಿ ಅರೇಬಿಯಾ ವತಿಯಿಂದ ದಿನಾಂಕ 15/04/2018 ರಂದು ಬೃಹತ್ ಪ್ರತಿಭಟನೆ ಕಾರ್ಯಕ್ರಮ ನಡೆಯಿತು.

ಪ್ರತಿಭಟನೆ ಕಾರ್ಯಕ್ರಮವನ್ನು ಉದ್ದೇಶಿಸಿ ಮುಖ್ಯ ಪ್ರಭಾಷಣಕಾರರಾಗಿ ಹನೀಫ್ ಹಿಮಮಿ ಕುಂಡಡ್ಕ ಮಾತನಾಡಿ ನಮ್ಮ ಭಾರತ ದೇಶ ಎತ್ತ ಸಾಗುತ್ತಿದೆ. ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರು ಕನಸು ಕಂಡ ಭಾರತ ಸಂಪೂರ್ಣ ಬದಲಾವಣೆಯಾಗಿದೆ.
ಕ್ರೂರಿಗಳಿಂದ ಅತ್ಯಾಚಾರಗೊಳಪಟ್ಟು ಮೃತಳಾದ ನಮ್ಮ ಸಹೋದರಿ ಆಸಿಫಾಳಿಗೆ ನ್ಯಾಯ ಸಿಗಬೇಕು ಅಲ್ಲದೇ ಆರೋಪಿಗಳಿಗೆ ಗಲ್ಲುಶಿಕ್ಷೆ ಆಗಲೇ ಬೇಕೆಂದು ಒತ್ತಾಯಿಸಿದರು.ನಂತರ ಪ್ರತಿಭಟನಾ ಸಭೆಯಲ್ಲಿ ಕೇರಳದ ಮಲಪ್ಪುರಂ ಜಿಲ್ಲೆಯ ಬಶೀರ್ ಸಾಹೆಬ್ ಮಾತನಾಡಿ ಭಾರತದಲ್ಲಿನ ಮುಸಲ್ಮಾನರು ಪದೇ ಪದೇ ಎಲ್ಲಾ ರೀತಿಯಲ್ಲೂ ಕೋಮುವಾದಿಗಳಿಂದ ತೊಂದರೆಗೊಳಪಡುತ್ತಿದ್ದಾರೆ ಇನ್ನು ಯಾವತ್ತೂ ಇಂತಹ ವಿಷಯಗಳಲ್ಲಿ ಸುಮ್ಮನಿರುವವರಲ್ಲ ನಾವು. ಖಂಡಿತವಾಗಿಯೂ ಇಂತಹ ವಿಷಯಗಳಲ್ಲಿ ನಾವೆಲ್ಲರೂ ಒಂದಾಗೋಣ ಎಂದು ತಿಳಿಸಿದರು. ನಂತರ ಅನ್ವರ್ ಬಡಕಬೈಲು ಹಾಗೂ ಇಬ್ರಾಹಿಂ ಕನ್ನಂಗಾರು ಸಭಿಕರನ್ನುದ್ದೇಶಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಇಮ್ತಿಯಾಝ್ ಕುಂದಾಪುರ, ಶಂಸುದ್ದೀನ್ ಕಾಟಿಪಳ್ಳ, TF ಸದಸ್ಯರಾದ ಅಬ್ದುಲ್ ರಝಾಕ್ ಕೊಡಂಗಾಯಿ, ಅಚ್ಚು ಬಂದಿಯೂಡ್, ಹೈದರ್ ಅಡ್ಡೂರ್,ನಿಶಾದ್ ಕುಲಾಯಿ ಸಲೀಂ ಪಳ್ಳಕುಡಲ್, ನೌಫಲ್ ಬೆಂಗರೆ,ರಫೀಕ್ ಕೊಡಂಗಾಯಿ, ಫವಾಝ್ ಬಾಯಾರ್, ಸಿರಾಜ್ ಉಳ್ಳಾಲ, ರಿಯಾಝ್ ಉಳ್ಳಾಲ ಮತ್ತು ಇತರ ಸದಸ್ಯರು ಹಾಗೂ 80ಕ್ಕೂ ಅಧಿಕ ಸಂಖ್ಯೆಯಲ್ಲಿ ಜನರು ಪ್ರತಿಭಟನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ವರದಿ: ತಾಯಿಫ್ ಫೈಟರ್ಸ್

Leave a Reply

Your email address will not be published. Required fields are marked *

error: Content is protected !!