janadhvani

Kannada Online News Paper

ಸಂದರ್ಶಕ ವೀಸಾದಲ್ಲಿದ್ದ ಪುತ್ತೂರಿನ ಅಬ್ದುರಹ್ಮಾನ್ (ಕುಂಬ್ರ) ಮದೀನಾದಲ್ಲಿ ನಿಧನ

ಮದೀನಾ: ವಿಸಿಟ್ ವೀಸಾದಲ್ಲಿದ್ದ ಕರ್ನಾಟಕದ ಮಂಗಳೂರು ನಿವಾಸಿಯೊಬ್ಬರು ಮದೀನಾ ಭೇಟಿ ವೇಳೆ ಮೃತಪಟ್ಟಿದ್ದಾರೆ.

ಮೃತರನ್ನು ಮಂಗಳೂರಿನ ಪುತ್ತೂರು, ಕುಂಬ್ರ ನಿವಾಸಿ ಅಬ್ದುರಹ್ಮಾನ್ (72) ಎಂದು ಗುರುತಿಸಲಾಗಿದೆ. ಮದೀನಾಕ್ಕೆ ಭೇಟಿ ನೀಡಲು ಮತ್ತು ಉಮ್ರಾ ಮಾಡಲು ಅವರು ತಮ್ಮ ಮಗನೊಂದಿಗೆ ಜಿಝಾನ್‌ನಿಂದ ಹೊರಟಿದ್ದರು.

ಇಂಡಿಯನ್ ಕಲ್ಚರಲ್ ಫೌಂಡೇಶನ್ (ಐಸಿಎಫ್) ನ ಜಿಝಾನ್ ಸೆಂಟ್ರಲ್ ಕಮಿಟಿ ಆಯೋಜಿಸಿದ್ದ ಬಸ್‌ನಲ್ಲಿ ಮದೀನಾಕ್ಕೆ ಪ್ರಯಾಣಿಸಿದ್ದರು. ಶುಕ್ರವಾರ ಜುಮುಆದಲ್ಲಿ ಪಾಲ್ಗೊಂಡು ಕೊಠಡಿಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ವೇಳೆ ನಿಧನ ಹೊಂದಿದ್ದಾರೆ.

ಕೆ.ಸಿ.ಎಫ್ ಮದೀನಾ ಮುನವ್ವರ ಸೆಕ್ಟರ್ ನಾಯಕರಾದ ಅಬ್ದುಲ್ ರಝಾಕ್ ಉಳ್ಳಾಲ್, ತಾಜುದ್ದೀನ್ ಸುಳ್ಯ, ಜಬ್ಬಾರ್ ಉಪ್ಪಿನಂಗಡಿ, ಹುಸೈನಾರ್ ಮಾಪಲ್ ಹಾಗೂ ಫೈಝಲ್ ಸಂತೋಷ್ ನಗರ ಇವರ ತಂಡದ ಮೂಲಕ ಜನಾಝದ ಅಂತ್ಯಕ್ರಿಯೆಗೆ ಬೇಕಾಗಿರುವ ಎಲ್ಲಾ ದಾಖಲೆಗಳನ್ನು ಸಂಗ್ರಹಿಸಿ ಮದೀನಾದ ಜನ್ನತುಲ್ ಬಖೀಲ್ ನಲ್ಲಿ ದಫನ ಮಾಡಲಾಯಿತು.

error: Content is protected !! Not allowed copy content from janadhvani.com