janadhvani

Kannada Online News Paper

ತೃಕ್ಕಾಕರ ಉಪಚುನಾವಣೆಯಲ್ಲಿ ಯುಡಿಎಫ್ ಅಭ್ಯರ್ಥಿ ಉಮಾ ಥಾಮಸ್ ಗೆ ಭರ್ಜರಿ ಗೆಲುವು

25,516 ಮತಗಳ ಮುನ್ನಡೆಯೊಂದಿಗೆ ತನ್ನ ಸ್ಥಾನವನ್ನು ಉಳಿಸಿಕೊಂಡ ಕಾಂಗ್ರೆಸ್

ಕೊಚ್ಚಿ: ತೃಕ್ಕಾಕರ ಉಪಚುನಾವಣೆಯಲ್ಲಿ ಯುಡಿಎಫ್ ಅಭ್ಯರ್ಥಿ ಉಮಾ ಥಾಮಸ್ ದಾಖಲೆಯ ಬಹುಮತದೊಂದಿಗೆ ಗೆಲುವು ಸಾಧಿಸಿದ್ದಾರೆ. ಯುಡಿಎಫ್ ಅಭ್ಯರ್ಥಿ ಉಮಾ ಥಾಮಸ್. 25,516 ಮತಗಳ ಮುನ್ನಡೆಯೊಂದಿಗೆ ಕ್ಷೇತ್ರದಲ್ಲಿ ಎಲ್‌ಡಿಎಫ್ ಅಭ್ಯರ್ಥಿ ಜೋ ಜೋಸೆಫ್ ಅವರನ್ನು ಸೋಲಿಸಿದರು.

ಎರ್ನಾಕುಲಂನ ಮಹಾರಾಜ ಕಾಲೇಜಿನಲ್ಲಿ ಮತ ಎಣಿಕೆ ಕಾರ್ಯ ನಡೆದಿದೆ. ಅಂಚೆ ಮತಗಳಿಂದ ಹಿಡಿದು ಕೊನೆಯ ಮತಯಂತ್ರದಲ್ಲಿ ಮತ ಎಣಿಕೆಯವರೆಗೂ ಉಮಾ ಥಾಮಸ್ ಅವರನ್ನು ಹಿಂದಿಕ್ಕಲು ಎದುರಾಳಿಗಳಿಗೆ ಅವಕಾಶ ಸಿಗಲಿಲ್ಲ.

ಕೇರಳದ ಎರ್ನಾಕುಲಂ ಜಿಲ್ಲೆಯ ತ್ರಿಕ್ಕಕರ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಭಾರೀ ಅಂತರದಿಂದ ಗೆಲುವು ದಾಖಲಿಸಿರುವ ಕಾಂಗ್ರೆಸ್ ತನ್ನ ಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಕಾಂಗ್ರೆಸ್ ಶಾಸಕ ಪಿ.ಟಿ. ಥಾಮಸ್ ನಿಧನದ ಹಿನ್ನೆಲೆಯಲ್ಲಿ ಉಪಚುನಾವಣೆ ನಡೆದಿದೆ. ದಿವಂಗತ ಶಾಸಕರ ಪತ್ನಿ ಉಮಾ ಥಾಮಸ್ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಿತು. ಆಡಳಿತಾರೂಢ ಎಲ್ ಡಿಎಫ್ ಹೃದ್ರೋಗ ತಜ್ಞ ಡಾ.ಜೋ ಜೋಸೆಫ್ ರನ್ನು ಸ್ಪರ್ಧೆಗಿಳಿಸಿತ್ತು. ಬಿಜೆಪಿ ಕೂಡ ತನ್ನ ಅನುಭವಿ ನಾಯಕ ಎ.ಎನ್. ರಾಧಾಕೃಷ್ಣನ್ ರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಿತ್ತು.

ಮತ ಎಣಿಕೆಯ ಆರಂಭದಿಂದಲೇ ಉಮಾ ಸ್ಪಷ್ಟ ಮುನ್ನಡೆ ಕಾಯ್ದುಕೊಂಡರು. ಪ್ರತಿ ಸುತ್ತಿನಲ್ಲಿ ತಮ್ಮ ಅಂತರವನ್ನು ಹೆಚ್ಚಿಸಿಕೊಂಡರು. 2016 ರಿಂದ ಕಾಂಗ್ರೆಸ್ ಭದ್ರಕೋಟೆಯನ್ನು ಪ್ರತಿನಿಧಿಸುತ್ತಿದ್ದ ಪಿ.ಟಿ. ಥಾಮಸ್ 2021 ರಲ್ಲಿ 14,300 ಮತಗಳ ಅಂತರದಿಂದ ಜಯ ಸಾಧಿಸಿದ್ದರು.ಆದರೆ ಅವರ ಪತ್ನಿ ಉಮಾ ಅವರು ಪತಿಗಿಂತ ಹೆಚ್ಚಿನ ಅಂತರದಿಂದ ಗೆದ್ದಿದ್ದಾರೆ.

1.96 ಲಕ್ಷ ಮತದಾರರ ಪೈಕಿ 1.35 ಲಕ್ಷ ಮಂದಿ ಮತದಾನ ಮಾಡಿದ್ದು, ಶೇ.68.77ರಷ್ಟು ಮತದಾನವಾಗಿದೆ.ಉಪಚುನಾವಣೆಯ ಮತದಾನದ ಪ್ರಮಾಣವು 2011 ರ ವಿಧಾನಸಭಾ ಚುನಾವಣೆಯ ನಂತರ ತುಲನಾತ್ಮಕವಾಗಿ ಕಡಿಮೆಯಾಗಿದೆ.

error: Content is protected !! Not allowed copy content from janadhvani.com