ಮಂಗಳೂರು: ಆರ್ಯ ಸಂತತಿಯ ಮುತಾಲಿಕ್, ಈಗಾಗಲೇ ಕೃಪಾ ಅಣತಿಯಂತೆ, ಲವ್ ಜಿಹಾದ್, ಹಲಾಲ್, ಅಝಾನ್ ಮೂಲಕ ಈ ರಾಜ್ಯದ ಜನತೆಯನ್ನು ಹಿಂದುತ್ವದ ದ್ವೇಷ ಹೇಳಿಕೆಯ ಮೂಲಕ ಗಲಭೆ ಹುಟ್ಟು ಹಾಕಿ, ಹಿಂದುತ್ವದ ಅಮಲಿನಲ್ಲಿ ಇರಿಸಿ, ಈಗ ಆಝಾನ್ ನಿಲ್ಲಿಸದಿದ್ದರೆ ಸರಕಾರ ಅಧಿಕಾರ ನೀಡಲಿ ಗುಂಡು ಹೊಡೆದು ಸಾಯಿಸುತ್ತೇನೆ ಎಂಬಿತ್ಯಾದಿಯಾಗಿ ಬಹಿರಂಗ ಹತ್ಯಾ ಕರೆ ನೀಡಿದ್ದಾರೆ.
ಕರ್ನಾಟಕದಲ್ಲಿ, ಆಡಳಿತ, ಪೊಲೀಸು, ಕಾನೂನು ಅಸ್ತಿತ್ವದಲ್ಲಿಯೇ ಇಲ್ಲದ ರೀತಿಯಲ್ಲಿ ಭಾಸವಾಗುವ, ಘನ ಘೋರ ಅಪರಾಧ ಕೃತ್ಯ ಎಸಗಿದ್ದಾರೆ ಮತ್ತು ಬಹಿರಂಗ ಜನಾಂಗೀಯ ಹತ್ಯಾ ಹೇಳಿಕೆ ನೀಡಿದ್ದಾರೆ . ಈ ರಾಜ್ಯದಲ್ಲಿ ಪೊಲೀಸು ವ್ಯವಸ್ಥೆ ಇದೆಯೇ ಇಲ್ಲವೇ ಎಂದು ಖಾಕಿ ಬಣ್ಣದ ವಸ್ತ್ರ ಧರಿಸಿದ ಕೆಲವು ವ್ಯಕ್ತಿಗಳಾದರೂ ಜನರಿಗೆ ಮಾಹಿತಿ ನೀಡುವುದು ಒಳಿತು.
ಮುತಾಲಿಕ್ ಬಹುಷ ಮುಕ್ತವಾಗಿ ರಂಗಕ್ಕೆ ಇಳಿದಂತೆ ಭಾಸವಾಗುತ್ತದೆ. ಈ ಹಿಂದಿನ ಕೇಂದ್ರ ಸರಕಾರಗಳು ಪೊಲೀಸು ಮತ್ತು ಮಿಲಿಟರಿಯೇತರ ಶಸ್ತ್ರ ಸಂಘಟನೆಗಳನ್ನು ಉಗ್ರ ಸಂಘಟನೆಗಳು ಎಂದು ಪಟ್ಟಿ ಮಾಡಿದ್ದವು. ಮುತಾಲಿಕ್ ನಂತಹ ವ್ಯಕ್ತಿ ಮುಕ್ತವಾಗಿ ಪೊಲೀಸು, ಆಡಳಿತ, ಕಾನೂನು ಸಂಸ್ಥೆಯ ಮಧ್ಯದಲ್ಲಿಯೇ ನಿಂತು ತಾನು ಈ ದೇಶದ ಜನರಿಗೆ ಗುಂಡು ಹೊಡೆದು ಸಾಯಿಸುತ್ತೇನೆ ಎಂದು ಐಸಿಸ್ ನಂತಹ ಸಂಘಟನೆಗಳ ಕರೆಯನ್ನು ಮೀರಿಸುವ ಹೇಳಿಕೆ ನೀಡಿದ್ದಾರೆ.
ಈ ರಾಜ್ಯದ ಪೊಲೀಸು, ಕಾನೂನು ಮತ್ತು ಆಡಳಿತಕ್ಕೆ ಮುತಾಲಿಕ್ ಎಂಬ ಆರ್ಯ, ಸವರ್ಣೀಯ ಉಗ್ರನನ್ನು ನಿಯಂತ್ರಿಸಲು ಅಗತ್ಯವಿರುವ ಸಾಕ್ಷ್ಯಾಧಾರಗಳು ಬಹುಶಃ ಕಳೆದ ಮೂರು ದಿನಗಳಿಂದ ಲಭ್ಯವಾಗಲಿಲ್ಲ ಎಂದು ಕಾಣಿಸುತ್ತದೆ.
ಜನರ ತೆರಿಗೆ ಹಣದಿಂದ ಬದುಕುವ ಕರ್ನಾಟಕ ರಾಜ್ಯ ಆಡಳಿತ, ಪೊಲೀಸು ಮತ್ತು ಕಾನೂನು ಒಂದು ವೇಳೆ ಈ ಆರ್ಯ, ಸವರ್ಣೀಯ, ವೈದಿಕ ಮುತಾಲಿಕ ನನ್ನು ನಿಯಂತ್ರಿಸಲು ಪರ್ಯಾಯ ವ್ಯವಸ್ಥೆ ಮಾಡಿ ಕೊಳ್ಳುವ ಸಂದರ್ಭವನ್ನು ಕೈ ಚೆಲ್ಲಿದರೆ, ಮುತಾಲಿಕ್ ರಿಗೆ ಮಾಹಿತಿಯಾದರೂ ನೀಡಿ, ಮುತಾಲಿಕ್ ನಿಂದ ಐಸಿಸ್ ಮುಖ್ಯಸ್ಥನ ಹುದ್ದೆಗೆ ಅರ್ಜಿ ಸಲ್ಲಿಸಿ ಬರಲಿ, ಈ ದೇಶದ, ನಾಡಿನ ಮುಸ್ಲಿಮರು, ದಲಿತರು, ಪರಿಶಿಷ್ಟರು, ಅಂದು ಬ್ರಿಟಿಷರನ್ನು ಈ ದೇಶದಿಂದ ಓಡಿಸಿದಂತೆ, ಟಿಪ್ಪು, ರಾಣಿ ಅಬ್ಬಕ್ಕನ ಸಂತತಿಯಾದ ನಾವು ಈ ದೇಶದ್ರೋಹಿ ಆರ್ಯ, ಸವರ್ಣೀಯ, ವೈದಿಕ ಮುತಾಲಿಕನ್ನು ಅವರ ಮೂಲ ಸ್ಥಾನವಾದ ಮಧ್ಯ ಏಶಿಯಾಕೆ ಓಡಿಸಲಿದ್ದೇವೆ.
ಈ ದೇಶದ ಬಹುಸಂಖ್ಯಾತ ಜನರಾದ, ಮುಸ್ಲಿಮರು, ಕ್ರೈಸ್ತರು, ಹಿಂದುಳಿದ ವರ್ಗ, ಪರಿಶಿಷ್ಟರು, ಬುಡಕಟ್ಟು ಜನಾಂಗವು ಈ ನಾಡಿನಲ್ಲಿ ಸಾಮರಸ್ಯದ ಜೀವನ ನಡೆಸುತ್ತಿರುವಾಗ, ತಾಕತ್ತಿದ್ದರೆ ಐಸಿಸ್ ಮುಖ್ಯಸ್ಥನ ಪಟ್ಟ ಹಿಡಿದು ಕೊಂಡು ಬರಲಿ, ತಕ್ಕ ಉತ್ತರ ಸಿದ್ದವಾಗಿಯೆ ಇದೆ, ಯಾಕೆ ನೀಡಿಯೇ ಬಿಡ ಬಾರದು ?
ಮುತಾಲಿಕ್ ಗೆ ಮುಲ್ಲಾ ದೀಕ್ಷೆ ನೀಡಲಿದ್ದೇವೆ.
ಕೆ.ಅಶ್ರಫ್
ಅಧ್ಯಕ್ಷರು.ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ.
















ಇನ್ನಷ್ಟು ಸುದ್ದಿಗಳು
ದುಬೈ: ರೂಮ್ ಶೇರಿಂಗ್ ಮತ್ತು ಸಬ್ಲೆಟಿಂಗ್ಗೆ ಹೊಸ ನಿಯಮ- ಅನಿವಾಸಿಗಳು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ
ಎಸ್ವೈಎಸ್ ದ.ಕ ಜಿಲ್ಲೆ (ವೆಸ್ಟ್): ‘ಹುಬ್ಬುರ್ರಸೂಲ್ ಕಾನ್ಫರೆನ್ಸ್- 26’ – ಪ್ರಿ ಸಿಟ್ಟಿಂಗ್
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ: ಇಂದು ಮತ್ತು ನಾಳೆ – ತ್ವಯಿಬಾ ಗಾರ್ಡನ್ ನಲ್ಲಿ
ಸಮಸ್ತ ಜನರಲ್ ಸೆಕ್ರೆಟರಿ ಪ್ರೊಫೆಸರ್ ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ ವಫಾತ್
ವಿದ್ಯಾರ್ಥಿಗಳ ಧ್ವನಿಗೆ ಕಿವಿಗೊಡಿ, ಶಿಕ್ಷಣ ಹಾಗೂ ಸಂವಿಧಾನ ಗೌರವಿಸಿ: ಕೇಂದ್ರಕ್ಕೆ ರಜ್ವಿ ಆಗ್ರಹ
ಅನಿವಾಸಿ ಮಿತ್ರರಿಗಾಗಿ ವಿಶೇಷ ಪ್ರಾರ್ಥನೆಗೆ ಎಸ್ಸೆಸ್ಸೆಫ್ ಕರೆ
ಅಸ್ಸುಫ್ಫಾ ‘ನಾಟ್ಟು ದರ್ಸ್’ ಭೌತಿಕವಾಗಿ ಮಾತ್ರ ನಡೆಸಬೇಕು: ಶತಮಾನೋತ್ಸವ ಸಮಿತಿ ಸ್ಪಷ್ಟನೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
“ನಾವು ಭಾರತೀಯರೆಂದು ಹೇಳಿರಲಿಲ್ಲವೇ?”- ಬಾಂಗ್ಲಾದೇಶಕ್ಕೆ ಗಡೀಪಾರು ಮಾಡಲಾಗಿದ್ದ ಕುಟುಂಬಗಳು ವಾಪಸ್
ಮದ್ರಸಾ ಅಧ್ಯಾಪಕರ ಮೇಲಿನ ಹಲ್ಲೆ ಅತ್ಯಂತ ಖಂಡನೀಯ- ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ SJM ಕಿನ್ನಿಗೋಳಿ ರೇಂಜ್ ಆಗ್ರಹ