janadhvani

Kannada Online News Paper

ಪಠ್ಯ ಪರಿಷ್ಕರಣಾ ಸಮಿತಿ ಅಧ್ಯಕ್ಷರ ವಿರುದ್ಧ ಕ್ರಿಮಿನಲ್ ಮೊಕದ್ದಮೆಗೆ ಆಗ್ರಹ

ಇತಿಹಾಸ ತಿರುಚಿ ಪ್ರಕಟ ಮಾಡಿರುವ ರೋಹಿತ್ ಚಕ್ರತೀರ್ಥ ಅವರ ಮೇಲೆ ಸ್ವಯಂ ಪ್ರೇರಿತವಾಗಿ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಬೇಕು.

ಬೆಳಗಾವಿ: ಪಠ್ಯ ಪರಿಷ್ಕರಣಾ ಸಮಿತಿ ಅಧ್ಯಕ್ಷರಾಗಿರುವ ರೊಹಿತ್ ಚಕ್ರತೀರ್ಥ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಗೃಹ ಸಚಿವರಿಗೆ, ಡಿಜಿ ಹಾಗೂ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗೆ ಕೆಪಿಸಿಸಿ ಕಾನೂನು ವಿಭಾಗದ ಭೀಮನಗೌಡ ಜಿ ಪರಮಗೊಂಡ ಎಂಬವರು ಮನವಿ ಸಲ್ಲಿಸಿದ್ದಾರೆ.

ಪಠ್ಯ ಪರಿಷ್ಕರಣ ಸಮಿತಿ 2022ರ ಅಧ್ಯಕ್ಷರಾಗುವ ಮುಂಚೆ ರೋಹಿತ್ ಚಕ್ರವರ್ತಿ ಅವರಿಂದ ಸಾಮಾಜಿಕ ಜಾಲತಾಣದಲ್ಲಿ ಬಸವಣ್ಣ, ಅಂಬೇಡ್ಕರ್, ನಾರಾಯಣ ಗುರುಗಳ ಬಗ್ಗೆ ಅವಹೇಳನ ಮಾಡಲಾಗಿದೆ. ಪಠ್ಯದಲ್ಲಿ ಬಸವಣ್ಣ, ಅಂಬೇಡ್ಕರ್, ರಾಜಾರಾಮ್ ಮೋಹನ್ ರಾಯ್, ಸತ್ಯಶೋಧಕ ಸಮಾಜ ರಾಮಕೃಷ್ಣ ಮಿಶನ್, ಪರಿಯಾರ್, ನಾರಾಯಣಗುರು ಚಳವಳಿ ಹಾಗೂ ಥಿಯೋಸೋಪಿಕಲ್ ಸೊಸಾಯಟಿ ಇತಿಹಾಸ ತಿರುಚಿ ಪ್ರಕಟ ಮಾಡಿರುವ ರೋಹಿತ್ ಚಕ್ರತೀರ್ಥ ಅವರ ಮೇಲೆ ಸ್ವಯಂ ಪ್ರೇರಿತವಾಗಿ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಬೇಕು. ಈಗಾಗಲೇ ಪಠ್ಯ ಪರಿಷ್ಕರಣ ಸಮಿತಿಯ ರೋಹಿತ ಚಕ್ರತೀರ್ಥ ಮತ್ತು ಸದಸ್ಯರು ಪರಿಷ್ಕರಣೆ ಮಾಡಿದ ಪಠ್ಯವನ್ನು ಹಿಂದಕ್ಕೆ ಪಡೆಯಬೇಕೆಂದು ದೂರಿನಲ್ಲಿ ವಿನಂತಿ ಮಾಡಿಕೊಂಡಿದ್ದಾರೆ.

error: Content is protected !! Not allowed copy content from janadhvani.com