janadhvani

Kannada Online News Paper

ಕೆಸಿಎಫ್ ಸೌದಿ ಅರೇಬಿಯಾಕ್ಕೆ ನೂತನ ಸಾರಥ್ಯ: ನಝೀರ್ ಹಾಜಿ ಕಾಶಿಪಟ್ನರವರು ಅಧ್ಯಕ್ಷರು

ಕೆಸಿಎಫ್ ಸೌದಿ ಅರೇಬಿಯಾ ರಾಷ್ಟ್ರೀಯ ಸಮಿತಿಯ ಮಹಾಸಭೆಯು ದಿನಾಂಕ 20 ಮೇ 2022ರಂದು ರಿಯಾದಿನ ಅಪೋಲೋ ದಿ ಮೋರಾ ಹೋಟೆಲ್ ನಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಡಿಪಿ ಯೂಸುಫ್ ಸಖಾಫಿ ಬೈತಾರ್ ರವರು ದುಆ ಮಾಡಿ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಸಾಲಿಹ್ ಬೆಳ್ಳಾರೆಯವರು ಸ್ವಾಗತ ಹೇಳಿದ ಕಾರ್ಯಕ್ರಮವನ್ನು ರಿಯಾದ್ ಝೋನ್ ಅಧ್ಯಕ್ಷರಾದ ಮುಸ್ತಫಾ ಸಅದಿಯವರು ಉದ್ಘಾಟನೆ ಮಾಡಿದರು. ನಂತರ ಕ್ರಮವಾಗಿ ಪ್ರ.ಕಾರ್ಯದರ್ಶಿ ಸಾಲಿಹ್ ಬೆಳ್ಳಾರೆ ಹಾಗೂ ಕೋಶಾಧಿಕಾರಿ ಮುಹಮ್ಮದ್ ಕಲ್ಲರ್ಬೆಯವರು ವರದಿ ಹಾಗೂ ಲೆಕ್ಕ ಪತ್ರ ಮಂಡನೆ ಮಾಡಿ ಅಂಗೀಕಾರ ಪಡೆಯಲಾಯಿತು.

ಈ ಕಾರ್ಯಕ್ರಮದಲ್ಲಿ ಸೌದಿ ಅರೇಬಿಯಾ ರಾಷ್ಟ್ರೀಯ ಸಮಿತಿಯಿಂದ ಹೊರತರುವ “ಪ್ರವಾಸಿ ಸೌರಭ” ಸುವನೀರ್ ಬಿಡುಗಡೆ ಮಾಡಲಾಯಿತು. ಕಳೆದ ಕಾರ್ಯಾಚರಣೆ ವರ್ಷದಲ್ಲಿ ಕೊಪ್ಪಳ ಜಿಲ್ಲೆಯ ಕಾರಟಗಿ ಎಂಬಲ್ಲಿ ಸರಿಸುಮಾರು 32 ಲಕ್ಷ ರೂಪಾಯಿ ವೆಚ್ಚದಲ್ಲಿ IFA (Ihsan Future Academy) ಇಹ್ಸಾನ್ ಸೆಂಟರ್ ನಿರ್ಮಿಸುವಲ್ಲಿ ಯಶಸ್ವಿಯಾದ ಅಲ್-ಕಸೀಮ್ ಝೋನ್ ಸಮಿತಿಗೆ ರಾಷ್ಟ್ರೀಯ ಸಮಿತಿಯಿಂದ ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು.

ರಾಷ್ಟ್ರೀಯ ಸಮಿತಿ ಅಧ್ಯಕ್ಷರಾಗಿದ ಡಿಪಿ ಯೂಸುಫ್ ಸಖಾಫಿ ಬೈತಾರ್ ರವರ ಅಧ್ಯಕ್ಷೀಯ ಭಾಷಣದಲ್ಲಿ ಕಳೆದ 9 ವರ್ಷಗಳ ಕಾಲ ಕೆಸಿಎಫ್ ಸೌದಿ ಅರೇಬಿಯಾ ನಡೆದು ಬಂದ ದಾರಿಯನ್ನು ಎಲ್ಲರಿಗೂ ಮನವರಿಕೆ ಮಾಡಿಕೊಟ್ಟುರು. ನಂತರ ಅಂತರಾಷ್ಟ್ರೀಯ ಸಮಿತಿಯಿಂದ ಚುನಾವಣಾ ಅಧಿಕಾರಿಗಳಾಗಿ ಆಗಮಿಸಿದ ಅಂತರಾಷ್ಟ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಜನಾಬ್ ಖಮರುದ್ದೀನ್ ಗೂಡಿನಬಳಿಯವರು ಸೌದಿ ಅರೇಬಿಯಾ ರಾಷ್ಟ್ರೀಯ ಸಮಿತಿ ನಡೆಸಿದ ಕಾರ್ಯಾಚರಣೆಯ ಬಗ್ಗೆ ಶ್ಲಾಘನೀಯ ಮಾತುಗಳನ್ನಾಡಿ ಸದ್ರಿ ಸಮಿತಿಯನ್ನು ವಿಸರ್ಜಿಸಿ ಹೊಸ ಸಮಿತಿಯನ್ನು ಕೆಳಗಿನಂತೆ ಆಯ್ಕೆ ಮಾಡಿದರು.

ಅಧ್ಯಕ್ಷರು: ನಝೀರ್ ಹಾಜಿ ಕಾಶಿಪಟ್ನ
ಪ್ರಧಾನ ಕಾರ್ಯದರ್ಶಿ: ಸಾಲಿಹ್ ಬೆಳ್ಳಾರೆ
ಕೋಶಾಧಿಕಾರಿ: ಮುಹಮ್ಮದ್ ಕಲ್ಲರ್ಬೆ

ಸಂಘಟನಾ ಇಲಾಖೆ ಅಧ್ಯಕ್ಷರು: ರಶೀದ್ ಸಖಾಫಿ ಮಿತ್ತೂರ್
ಕಾರ್ಯದರ್ಶಿ: ಶಂಸುದ್ದೀನ್ ಮಡಂತ್ಯಾರ್

ಶಿಕ್ಷಣ ಇಲಾಖೆ ಅಧ್ಯಕ್ಷರು: ಸಿದ್ದೀಕ್ ಸಖಾಫಿ ಪೆರುವಾಯಿ
ಕಾರ್ಯದರ್ಶಿ: ಫಾರೂಕ್ ಸಅದಿ ಹೆಚ್ ಕಲ್ಲು

ಸಾಂತ್ವನ ಇಲಾಖೆ ಅಧ್ಯಕ್ಷರು: ಅಶ್ರಫ್ ಕಿನ್ಯಾ
ಕಾರ್ಯದರ್ಶಿ: ಬಶೀರ್ ತಲಪ್ಪಾಡಿ

ಪ್ರಕಾಶನ ಇಲಾಖೆ ಅಧ್ಯಕ್ಷರು: ಹನೀಫ್ ಕಣ್ಣೂರ್
ಕಾರ್ಯದರ್ಶಿ: ತೌಫೀಕ್ ಅಂಬಾಗಿಲು

ಆಡಳಿತ & PR ಇಲಾಖೆ ಅಧ್ಯಕ್ಷರು: ಅಬ್ದುಲ್ ಸಲಾಂ ಎಣ್ಮೂರು
ಕಾರ್ಯದರ್ಶಿ: ಸಮೀಉಲ್ಲಾಹ್ ಗೂಡಿನಬಳಿ

ಇಹ್ಸಾನ್ ಇಲಾಖೆ ಅಧ್ಯಕ್ಷರು: ಅಬ್ದುಲ್ ಖಾದರ್ ಕಣ್ಣಂ‌ಗಾರ್
ಕಾರ್ಯದರ್ಶಿ: ಹಂಝ ಮೈಂದಾಳ

ರಾಷ್ಟ್ರೀಯ ಸಮಿತಿ ಕಾರ್ಯಕಾರಣಿ ಸಮಿತಿ ಸದಸ್ಯರಾಗಿ ಸಿದ್ದೀಕ್ ಬಾಳೆಹೊನ್ನೂರು, ಹುಸೈನಾರ್ ಮಾಪಳ್, ಮೂಸ ಹಾಜಿ ಕಿನ್ಯಾ, ಅಸ್ರು ಬಜ್ಪೆ, ಮುಹಮ್ಮದ್ ಮಲೆಬೆಟ್ಟು, ಫೈಸಲ್ ಕೃಷ್ಣಾಪುರ, ಉಮರ್ ಅಳಕೆಮಜಲು, ಮೂಸಾ ಹಾಜಿ ಜುಬೈಲ್, ಸಲಾಂ ಹಳೆಯಂಗಡಿ, ಆಸಿಫ್ ಗೂಡಿನಬಳಿ, ಅಬೂಬಕ್ಕರ್ ಮುಸ್ಲಿಯಾರ್ ಮದೀನಾ, ಮುಸ್ತಫಾ ಹಾಸನ, ಸುಲೈಮಾನ್ ಸಅದಿ ಕೊಡಗು, ಇಸ್ಮಾಯಿಲ್ ಕಣ್ಣಂಗಾರ್, ಸಮೀರ್ ಜೆಪ್ಪು, MKM ಮದನಿ, ಮನ್ಸೂರ್ ಕಾಟಿಪಳ್ಳ, ನಝೀರ್ ಕಕ್ಕಿಂಜೆ, ಯಾಕೂಬ್ ಸಖಾಫಿ, ಅಬ್ದುಲ್ ರಹ್ಮಾನ್ ತಬೂಕ್ ಹಾಗೂ ನಿಸಾರ್ ಗೂಡಿನಬಳಿ.

ಅಂತರಾಷ್ಟ್ರೀಯ ಕೌನ್ಸಿಲರ್ ಗಳಾಗಿ ಡಿಪಿ ಯೂಸುಫ್ ಸಖಾಫಿ ಬೈತಾರ್, ಖಮರುದ್ದೀನ್ ಗೂಡಿನಬಳಿ, ಅಬೂಬಕ್ಕರ್ ಹಾಜಿ ರೈಸ್ಕೋ, ಫಾರೂಕ್ ಕಾಟಿಪಳ್ಳ, ಎನ್ ಎಸ್ ಅಬ್ದುಲ್ಲಾ, ಬಶೀರ್ ತಲಪ್ಪಾಡಿ, ಮುಹಮ್ಮದ್ ಮಲೆಬೆಟ್ಟು, ಫೈಸಲ್ ಕೃಷ್ಣಾಪುರ, ಅಬ್ದುಲ್ ಸಲಾಂ ಎಣ್ಮೂರು, ಅಸ್ರು ಬಜ್ಪೆ, ಅಶ್ರಫ್ ಕಿನ್ಯಾ, ಉಮರ್ ಅಳಕೆಮಜಲು, ಹಾಗೂ ಫಾರೂಕ್ ಸಅದಿ ಯವರನ್ನು ಆಯ್ಕೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಅಂತರಾಷ್ಟ್ರೀಯ ಸಮಿತಿ ಇಹ್ಸಾನ್ ಸಮಿತಿ ಅಧ್ಯಕ್ಷರಾದ ಅಬೂಬಕ್ಕರ್ ಹಾಜಿ ರೈಸ್ಕೋ, ಹಿರಿಯ ನೇತಾರರಾದ ಎನ್ ಎಸ್ ಅಬ್ದುಲ್ಲಾ, ಫಾರೂಕ್ ಕಾಟಿಪಳ್ಳ ಹಾಗೂ ಪ್ರತಿ ಝೋನ್ ಗಳಿಂದ ಆಯ್ಕೆಯಾಗಿ ಬಂದ ನೂರಕ್ಕೂ ಮಿಕ್ಕ ಕೌನ್ಸಿಲರ್ ಗಳು ಭಾಗವಹಿಸಿದ್ದರು.

ಸಿದ್ದೀಕ್ ಸಖಾಫಿ ಪೆರುವಾಯಿಯವರು ನಿರೂಪಿಸಿದ ಕಾರ್ಯಕಮಕ್ಕೆ ಸಾಲಿಹ್ ಬೆಳ್ಳಾರೆಯವರು ಧನ್ಯವಾದ ಹೇಳಿದರು.

error: Content is protected !! Not allowed copy content from janadhvani.com