ಬೆತ್ತಲೆ ಜಗತ್ತು ವಿನಲ್ಲಿ ಸುಳ್ಳುಗಳನ್ನು ಪೋಣಿಸಿ ಬರೆದು ಇಸ್ಲಾಮೋಫೋಬಿಯಾದ ಮೂಲಕ ಈ ರಾಜ್ಯದ ಹಿಂದುಳಿದ,ದಲಿತರ, ಪರಿಶಿಷ್ಟರ ಮತ್ತು ಬುಡಕಟ್ಟು ಜನಾಂಗದ ದೃಷ್ಟಿಯಲ್ಲಿ ಈ ದೇಶದ ಮುಸ್ಲಿಮರ ಬಗ್ಗೆ ವೈರತ್ವವನ್ನು ಸೃಷ್ಟಿಸಿ, ಕೇಶವ ಕೃಪಾದಿಗಳಿಂದ ಮೆಚ್ಚಿಸಿ ಕೊಂಡು, ಸಂಸದ ದೀಕ್ಷೆ ಪಡೆದ ಪ್ರತಾಪ ಬೆತ್ತಲೆ ಲೇಖನಿ ಸಿಂಹ ಗೆ ಏನು ಅರಿವಿದೆ ಟಿಪ್ಪುವಿನ ಹುಲಿಯ ಖಡ್ಗ ಗರ್ಜನೆ ?.
ಪ್ರತಾಪ್ ಇಂದು ಸಲ್ಲಿಸುತ್ತಿರುವ ವೈದಿಕ ನಿಷ್ಟೆಯಂತೆಯೆ ಅಂದು ಟಿಪ್ಪುವಿನ ಆಚೆಗಿನ ಪ್ರಾಂತ್ಯ ರಾಜರು, ಪೇಶ್ವೆ ವೈದಿಕರಿಗೆ ನಿಷ್ಠೆ ಸೂಚಿಸಿದ ಕಾರಣಕ್ಕೆ ಭಾರತವು ಬ್ರಿಟಿಷರಿಂದ ಸ್ವಾತಂತ್ರ ಹೊಂದಲು ನೂರ ಐವತ್ತು ವರುಷ ತಡವಾಯಿತು.
ಟಿಪ್ಪು ಈ ನಾಡಿನ ನೈಜ ಸ್ವಾತಂತ್ರ್ಯ ಹೋರಾಟಗಾರ, ಟಿಪ್ಪು ಅನುಷ್ಠಾನ ಗೊಳಿಸಿದ ಪೊಲೀಸು ವ್ಯವಸ್ಥೆ, ಭೂ ಸುಧಾರಣೆ ಕಾಯ್ದೆ, ಪಾಳೇಗಾರಿಕೆ ರದ್ದತಿ, ಕೃಷಿ ಕ್ಷೇತ್ರದ ಉತ್ತೇಜನ, ಉದ್ದಿಮೆ ಪ್ರಗತಿಯಿಂದಾಗಿಯೆ, ಬಹುಷಃ ಪ್ರತಾಪ್ ರ ವೈದಿಕ ಪೂರ್ವಜರಿಗೆ ಸೋಮಾರಿ ತನದಿಂದ ಜನರನ್ನು ಜೀತದ ಆಳುಗಳಾಗಿ ಮಾಡಿ ಅವರನ್ನು ಪೀಳಿಗೆ ಗಳಿಂದ ಪೀಳಿಗೆ ವರೆಗೆ ಲೂಟಿ ಮಾಡಿ ಭಕ್ಷಿಸುವ ವ್ಯವಸ್ಥೆ ತಪ್ಪಿ ಹೋಯಿತೆಂದು ಪರಿತಪಿಸಿ, ಪ್ರತಾಪ್ ಗೆ ಹೇಳಿ, ಕೇಶವ ಕೃಪಾದಿಗಳು, ಟಿಪ್ಪುವಿನ ವಿರುದ್ಧ ಹೇಳಿಕೆ ನೀಡಲು ಫರ್ಮಾನು ಹೊರಡಿಸಿರಬಹುದು.
ಅಂದು ಮೈಸೂರಿನ ಚಿಕ್ಕ ದೇವ ಅರಸುರವರಿಗೆ ಬೆಂಗಾವಲು ಆಗಿ ಹೈದರ್ ಆಲಿ ನಿಂತರೆ, ಆಮೇಲಿನ ಟಿಪ್ಪು ಆಡಳಿತದ ಇತಿಹಾಸದ ಅದ್ಬುತ. ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಉದ್ದೇಶಿತ ಜಲಾಶಯಕ್ಕೆ ಅಡಿಗಲ್ಲು ಹಾಕಿದ ಅಂದಿನ ಯೋಜನೆ ಟಿಪ್ಪು ಸರಕಾರದ ಕಾರ್ಯಕ್ರಮವಾಗಿದ್ದು ಬ್ರಿಟಿಷ್ ಇತಿಹಾಸಕಾರರಿಂದ ಮೇಕಿಂಗ್ ಹಿಸ್ಟರಿ’ ಆಗಿದ್ದನ್ನು ಪ್ರತಾಪ್ ಸರಿಯಾಗಿಯೇ ಅರಿಯಲಿ.
ಹೈದರ್ ಪುತ್ರ, ಫತೇ ಮೊಹಮ್ಮದ್ ಎಂಬ ಧೀರ ದಕ್ಷಿಣ ಏಷಿಯಾದ ಜನಪ್ರೆಮಿ ರಾಜನಿಗೆ ‘ ಮೈಸೂರಿನ ಹುಲಿ ‘ ಎಂದು ಬಿರುದು ನೀಡಿದ್ದು, ಭಾರತ ಉಪಖಂಡದ ಯಾವುದೇ ಆರ್ಯರಲ್ಲ, ಬದಲಾಗಿ ಹದಿನೆಂಟನೇ ಶತಮಾನದಲ್ಲಿ ಒಂದು ಬೃಹತ್ ವಸಾಹತು ಶಾಹಿ ಚಕ್ರಾಧಿಪತ್ಯ ಹೊಂದಿದ್ದ, ಅಂತರ್ ಖಂಡ ಪಾರಮತ್ಯ ಹೊಂದಿದ್ದ, ಸೂರ್ಯ ಮುಳುಗದ ನಾಡಿನ ಆಳ್ವಿಕೆ ಹೊಂದಿದ್ದ, ಲಕ್ಷ ಗಟ್ಟಲೆ ಭೂ ಕಾಲಾಳು ಸೈನ್ಯ, ಹತ್ತಾರು ಜಲ ಯುದ್ದ ನೌಕೆ, ಸಾವಿರಾರು ಯುದ್ದ ಫಿರಂಗಿ ಗಳನ್ನು ಹೊಂದಿದ್ದ,ತನ್ನ ಸೇನೆ ಅದೇ ಫತೇ ಮೊಹಮ್ಮದ್ ನಿಂದಾಗಿ ಎರಡು ಬಾರಿ ಸೋತು ಶರಣಾದ, ಅದೇ ಫತೇ ಮೊಹಮ್ಮದ್ ನ ಪರಾಕ್ರಮವನ್ನು ಇತರರಿಂದ ಕೇಳಿ ಬೆಚ್ಚಿ ಬೀಳುತ್ತಿದ್ದ, ಫತೇ ಮೊಹಮ್ಮದ್ ಯುದ್ದ ರಣಾಂಗಣದಲ್ಲಿ ಹೋರಾಡಿ ವೀರ ಮರಣ ಹೊಂದಿ ಹುತಾತ್ಮನಾದ ಎಂದು ನಂಬಲು ತಯಾರಿಲ್ಲದ ಆ ಬೃಹತ್ ಬ್ರಿಟಿಷ್ ಸೇನೆಯ ಉನ್ನತರು ಪ್ರಧಾನಗೈದ ಬಿರುದು ಆಗಿದೆ ‘ ದಿ ಟೈಗರ್ ಆಫ್ ಮೈಸೂರ್ ‘.
ಟಿಪ್ಪು ಎಂಬುದು ಅಪೇಕ್ಷಿಸಿ ಪಡೆದ ಬಿರುದು ಅಲ್ಲ, ಬದಲಾಗಿ ಟಿಪ್ಪುವಿನ ಆಡಳಿತ ವೈರಿಗಳು ನೀಡಿದ ಬಿರುದು. ಪ್ರತಾಪ ಟಿಪ್ಪುವನ್ನು ಹುಲಿಯಲ್ಲ ಎಂದು ಹೇಳುವ ಭರದಲ್ಲಿ ಈಗಾಗಲೇ,ಅದೇ ಪ್ರತಾಪ ತನ್ನ ಬೆತ್ತಲೆ ಜಗತ್ತಿನ ತನ್ನ ಲೇಖನಿಯಲ್ಲಿ ತನ್ನ ಸಿಂಹ ತನವನ್ನು ಕಳೆದು ಕೊಂಡು ನರಿ ಆದದ್ದು ವಿಪರ್ಯಾಸ. ಹುಲಿ, ಹುಲಿಯೆ, ನರಿ ನರಿಯೇ,ಪ್ರತಾಪ ಅರಿಯಲಿ.
ಕೆ.ಅಶ್ರಫ್( ಮಾಜಿ ಮೇಯರ್)
ಅಧ್ಯಕ್ಷರು.ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ.