ನಾಲೇಜ್ ಸಿಟಿ |ಸಾತ್ವಿಕ ಶ್ರೇಷ್ಠರ ಮೇಲೆ ಪ್ರೀತಿ ತೋರಿಸುವುದೆಂದರೆ ಅವರು ತೋರಿದ ಪ್ರೀತಿ, ಸಹನೆ, ಸೌಹಾರ್ದತೆ ಹಾಗೂ ಅಧ್ಯಾತ್ಮದ ಹಾದಿಯಲ್ಲಿ ಸಾಗುವುದಾಗಿದೆ ಎಂದು ಇಂಡಿಯನ್ ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎ.ಪಿ.ಅಬೂಬಕರ್ ಮುಸ್ಲಿಯಾರ್ ಹೇಳಿದರು.
ಅಲ್ಲದೇ, ಸಾತ್ವಿಕರ ಬಗ್ಗೆ ಇಲ್ಲದ ಕಾರ್ಯಗಳನ್ನು ಹೇಳಿ ಅಲ್ಲ ಸ್ಮರಿಸಬೇಕಾದ್ದು ಎಂದು ಅವರು ಸಲಹೆ ನೀಡಿದರು.ಅವರು ಮರ್ಕಝ್ ನಾಲೆಜ್ ಸಿಟಿಯಲ್ಲಿರುವ ಸಾಂಸ್ಕೃತಿಕ ಕೇಂದ್ರದಲ್ಲಿ ಸಿ.ಎಂ.ವಲಿಯುಲ್ಲಾಹಿ ಉರೂಸ್ ಮುಬಾರಕ್ ಉದ್ಘಾಟಿಸಿ ಮಾತನಾಡಿದರು.
ಸಿ.ಎಂ.ವಲಿಯುಲ್ಲಾಹಿಯವರ 32ನೇ ವಾರ್ಷಿಕ ನಿಮಿತ್ತ ಮರ್ಕಝ್ ನಾಲೆಡ್ಜ್ ಸಿಟಿಯಲ್ಲಿರುವ ಸಾಂಸ್ಕೃತಿಕ ಕೇಂದ್ರದಲ್ಲಿ ಆಯೋಜಿಸಿದ್ದ ಸಿ.ಎಂ.ಉರೂಸ್ ಮುಬಾರಕ್ ಸಮಾರೋಪ ಸಮಾರಂಭವನ್ನು ಕಾಂತಪುರಂ ಎ.ಪಿ.ಅಬೂಬಕರ್ ಮುಸ್ಲಿಯಾರ್ ಉದ್ಘಾಟಿಸಿದರು. ಡಾ. ಅಬ್ದುಲ್ ಹಕೀಂ ಅಝ್ಹರಿ, ಇಮಾಮ್ ಮುಶರಫ್ ಕೋಲ್ಕತ್ತಾ, ಹಾಫಿಲ್ ಅಬೂಬಕ್ಕರ್ ಸಖಾಫಿ ಪನ್ನೂರು, ಡಾ. ಅಬ್ದುಲ್ ಸಲಾಂ, ಅಡ್ವ. ತನ್ವೀರ್ ಉಮರ್, ಅಲವಿ ಸಖಾಫಿ ಕಾಯಲಂ, ಪ್ರೊ. ಶಾಹುಲ್ ಹಮೀದ್, ಅಬ್ದುಲ್ ಬಸ್ವೀರ್ ಸಖಾಫಿ, ಪಿಲಾಕ್ಕಲ್. ಜಮಾಲ್ ಅಹ್ಸನಿ ಮಂಞಪ್ಪಟ್ಟ, ಲುಖ್ಮಾನ್ ಹಾಜಿ ಮೊದಲಾದವರು ಉಪಸ್ಥಿತರಿದ್ದರು.