janadhvani

Kannada Online News Paper

ಧ್ವನಿವರ್ಧಕ ಮತ್ತು ಅಝಾನ್: ಕೆ.ಎಸ್. ಮಸೂದ್ ರವರ ಹೇಳಿಕೆಗೆ ಕೆ.ಅಶ್ರಫ್ ಸ್ಪಷ್ಟೀಕರಣ

ಅವರು ಅಧ್ಯಕ್ಷರಾಗಿರುವ ಮಸೀದಿಯಲ್ಲಿ ಐದು ಹೊತ್ತಿನ ಆಝಾನ್ ಕರೆಗೆ ಧ್ವನಿವರ್ಧಕವನ್ನು ನಿಲ್ಲಿಸಲಾಗುವುದು ಎಂದಿದ್ದರು

ಮಂಗಳೂರು: ಇಂದು ನಗರದಲ್ಲಿ ನಡೆದ ಮುಸ್ಲಿಮ್ ಸೆಂಟ್ರಲ್ ಕಮಿಟಿ ಮಂಗಳೂರು ಇದರ ಪತ್ರಿಕಾ ಗೋಷ್ಠಿ ಯಲ್ಲಿ, ಅಧ್ಯಕ್ಷರಾದ ಕೆ. ಎಸ್. ಮೊಹಮ್ಮದ್ ಮಸೂದ್ ರವರು ಸರಕಾರದ ಇಂದಿನ ದ್ವನಿವರ್ಧಕ ಮತ್ತು ಶಬ್ದ ಮಾಲಿನ್ಯದ ಬಗೆಗಿನ ಆದೇಶವನ್ನು ಮತ್ತು ಮುತಾಲಿಕ ರ ವಿದ್ವಂಸಕತೆ ಗಳನ್ನು ಪ್ರಸ್ತಾಪಿಸಿ ವಿವರವಾಗಿ ಮಾತನಾಡಿದ್ದಾರೆ.

ದ್ವನಿವರ್ಧಕ ಬಳಕೆಯ ಬಗ್ಗೆ ಧಾರ್ಮಿಕ ಕೇಂದ್ರಗಳಲ್ಲಿ ಸರಕಾರದ ನಿರ್ದೇಶನ ಪಾಲಿಸಲಾಗುವುದು ಎಂದು ಹೇಳಿಕೆ ನೀಡುವುದರೊಂದಿಗೆ , ಕೆ. ಎಸ್.ಮೊಹಮ್ಮದ್ ಮಸೂದ್ ರವರು ಖುದ್ದು ಅಧ್ಯಕ್ಷರಾಗಿರುವ ಮಂಗಳೂರಿನ ಕುದ್ರೋಳಿ ಜಾಮಿಯಾ ಮಸೀದಿ ಬಗ್ಗೆ ಪ್ರಾಸ್ತಾವಿಸಿ, ದ್ವನಿವರ್ಧಕದ ಉಪಯೋಗವನ್ನು ಅವರು ಅಧ್ಯಕ್ಷರಾಗಿರುವ ಮಸೀದಿಯಲ್ಲಿ ದಿನದ ನಂತರ ಐದು ಹೊತ್ತಿನ ಆಝಾನ್ ಕರೆಯನ್ನು ನಿಲ್ಲಿಸಲಾಗುವುದು ಎಂದು ಅವರು ಸಾಂದರ್ಭಿಕವಾಗಿ ನೀಡಿದ ಇನ್ನೊಂದು ಹೇಳಿಕೆಯು, ಅವರ ಮಸೀದಿಗೆ ಮಾತ್ರ ಸೀಮಿತವಾಗಿದೆ.

ಅದು ಅವರು ಅಧ್ಯಕ್ಷರಾಗಿರುವ ಮಸೀದಿಯ ವಿಷಯವೇ ಹೊರತು ಮುಸ್ಲಿಮ್ ಸೆಂಟ್ರಲ್ ಕಮಿಟಿಯ ನಿರ್ಣಯದ ಹೇಳಿಕೆ ಅಲ್ಲ,ಎಂದು ಈ ಮೂಲಕ ಸ್ಪಷ್ಟೀಕರಣ ನೀಡುವುದಾಗಿ ಕೆ.ಅಶ್ರಫ್
(ಉಪಾಧ್ಯಕ್ಷರು. ದಿ ಮುಸ್ಲಿಮ್ ಸೆಂಟ್ರಲ್ ಕಮಿಟಿ.ಮಂಗಳೂರ) ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !! Not allowed copy content from janadhvani.com