ಮಂಗಳೂರು: ಶ್ರೀರಾಮ ಸೇನೆ ಸಂಘಟನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ನ್ನು ಮಂಗಳೂರು ಪೊಲೀಸ್ ಆಯುಕ್ತ ಕಚೇರಿಯಲ್ಲಿ ಕೆಂಪು ಹಾಸು ಸ್ವಾಗತದಂತೆ ಬರ ಮಾಡಿ ಕೊಂಡ ವಿಷಯಕ್ಕೆ ಸಂಬಂಧಿಸಿ ಮಂಗಳೂರು ಪೊಲೀಸ್ ಆಯುಕ್ತರು ಸಾರ್ವಜನಿಕ ಹೇಳಿಕೆ ನೀಡಿ ಸ್ಪಷ್ಟೀಕರಣ ನೀಡಬೇಕು ಎಂದು ಮುಸ್ಲಿಮ್ ಒಕ್ಕೂಟದ ದ.ಕ.ಜಿಲ್ಲಾಧ್ಯಕ್ಷರಾದ ಮಾಜಿ ಮೇಯರ್ ಕೆ.ಅಶ್ರಫ್ ಆಗ್ರಹಿಸಿದ್ದಾರೆ.
ಇತ್ತೀಚೆಗೆ , ರಾಜ್ಯಾದ್ಯಂತ ನೂರಾರು ಸಭೆ ಸಮಾರಂಭದಲ್ಲಿ ಮುಸ್ಲಿಮ್,ಕ್ರೈಸ್ತ,ದಲಿತ ಸಮುದಾಯದ ವಿರುದ್ಧ ನಿರಂತರ ಕೋಮು ದ್ವೇಷದ ಭಾಷಣ ಮಾಡುತ್ತಾ, ನೂರಾರು ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪಿಯಾಗಿರುವ ಇವರನ್ನು, ಇದೇ ಪೊಲೀಸು ಇಲಾಖೆಯ ಉಡುಪಿ ಅಧೀಕ್ಷಕರು ಇತ್ತೀಚೆಗೆ ಸಂಭಾವ್ಯ ವಿದ್ವಂಸಕ ಕೃತ್ಯ ಆರೋಪಿಸಿ ಉಡುಪಿ ಜಿಲ್ಲೆಗೆ ಪ್ರವೇಶಿಸದಂತೆ ಪ್ರತಿ ಭಂಧಕ ಆಜ್ಞೆ ವಿಧಿಸಿ ಗಡಿಪಾರು ಮಾಡಿ ಇನ್ನೂ ಒಂದು ತಿಂಗಳು ಪೂರ್ತಿಯಾಗಿಲ್.
ಮಂಗಳೂರು ನಗರ ಪೊಲೀಸು ಆಯುಕ್ತರು, ಮುತಾಲಿಕ್ ಏನೋ ಶಿಷ್ಟಾಚಾರದಂತೆ ಸರಕಾರಿ ಕಚೇರಿಗಳಲ್ಲಿ ಶಾಂತಿ ಸುವ್ಯವಸ್ಥೆಯ ಭಾರೀ ಮೇಲ್ನೋಟ ವಹಿಸಿದಂತೆ ಪ್ರಭಾರ ಹೊಂದುವ ರೀತಿಯಲ್ಲಿ ಭೇಟಿ ನೀಡುವ ಕುಕೃತ್ಯದ ಬಗ್ಗೆ ಪೊಲೀಸು ಆಯುಕ್ತರಾದ ಶಶಿ ಕುಮಾರ್ ಸಾರ್ವಜನಿಕ ಸ್ಪಷ್ಟೀಕರಣ ನೀಡಬೇಕಿದೆ.
ಪೊಲೀಸು ಇಲಾಖೆ ಮತ್ತು ಮತೀಯ ವಿದ್ವೇಶಿ ಆರ್ಯ ಸಂತತಿಯ ಮುತಾಲಿಕ್ ಗೆ ಏನು ಸಂಭಂದ ಎಂದು ಜಿಲ್ಲೆಯ ಜನತೆಗೆ ತಿಳಿಯಬೇಕಿದೆ. ಪೊಲೀಸು ಇಲಾಖೆಯ ಇಂತಹ ನಡೆ ಸ್ಥಳೀಯವಾಗಿ ತೀವ್ರ ಸಂಶಯಕ್ಕೆ ಕಾರಣವಾಗಿದೆ. ಈ ಭೇಟಿಯಲ್ಲಿ ಮಂಗಳೂರಿನ ಸಂಘ ನಿಕೇತನೀಗಳ ನೇರ ಪ್ರಭಾವ ಇದ್ದ ಹಾಗೆ ಕಾಣುತ್ತದೆ ಎಂದು ಜಿಲ್ಲೆಯ ಜನತೆ ಭಾವಿಸ ಬೇಕಾಗುತ್ತದೆ ಎಂದು ಕೆ.ಅಶ್ರಫ್ ಹೇಳಿದ್ದಾರೆ.