janadhvani

Kannada Online News Paper

ಕುವೈತ್ ಕೆಸಿಎಫ್ ಫರ್ವಾನಿಯ ಸೆಕ್ಟರ್: ಗ್ರ್ಯಾಂಡ್ ಇಫ್ತಾರ್ ಸಂಗಮ

ಕುವೈತ್ : ಕೆಸಿಎಫ್ ಕುವೈಟ್ ನೋರ್ತ್ ಝೋನ್ ಅಧೀನದ ಕೆಸಿಎಫ್ ಫರ್ವಾನಿಯ ಸೆಕ್ಟರ್ ವತಿಯಿಂದ ಗ್ರಾಂಡ್ ಇಫ್ತಾರ್ ಕೂಟ, ಮಾಸಿಕ ಸ್ವಲಾತ್ ಮಜ್ಲಿಸ್ ಹಾಗೂ ರಂಳಾನ್ ವಿಶೇಷ ಸಂದೇಶವು ಏ.27ರಂದು ಫರ್ವಾನಿಯ ಸೆಕ್ಟರ್ ಅಧ್ಯಕ್ಷರಾದ ಜನಾಬ್ ಇಕ್ಬಾಲ್ ಎಡಪದವು ರವರ ಅಧ್ಯಕ್ಷತೆಯಲ್ಲಿ ಕೆಸಿಎಫ್ ಫರ್ವಾನಿಯ ಸೆಕ್ಟರ್ ಕಚೇರಿಯಲ್ಲಿ ಬಹಳ ವಿಜೃಂಭಣೆಯಿಂದ ನಡೆಯಿತು.

ಕೆಸಿಎಫ್ ಕುವೈಟ್ ರಾಷ್ಟ್ರೀಯ ಸಮಿತಿಯ ಅಧ್ಯಕ್ಷ ರಾದ ಬಹುಮಾನ್ಯ ಅಬ್ದುಲ್ ರಹ್ಮಾನ್ ಸಖಾಫಿ ಉಸ್ತಾದರ ನೇತ್ರತ್ವದಲ್ಲಿ ಸ್ವಲಾತ್ ಹಾಗೂ ಇಫ್ತಾರ್ ಕೂಟ ನಡೆಯಿತು. ಕಾರ್ಯಕ್ರಮದಲ್ಲಿ ಕೆಸಿಎಫ್ INC ಸಂಘಟನಾ ಕಾರ್ಯದರ್ಶಿ ಬಹುಮಾನ್ಯ ಹುಸೈನ್ ಎರ್ಮಾಡ್ ಉಸ್ತಾದರು ರಂಜಾನ್ ಸಂದೇಶವನ್ನು ಬೋಧಿಸಿದರು.

ಕೆಸಿಎಫ್ ರಾಷ್ಟ್ರೀಯ ಸಮಿತಿ ಸದಸ್ಯರಾದ ಬಹುಮಾನ್ಯ ಉಮರುಲ್ ಫಾರೂಕ್ ಸಖಾಫಿ ಮತ್ತು ಕೆಸಿಎಫ್ ಕುವೈಟ್ ರಾಷ್ಟ್ರೀಯ ಸಮಿತಿ ಸಾಂತ್ವನ ಅಧ್ಯಕ್ಷರಾದ ಯಾಕೂಬ್ ಕಾರ್ಕಳ ಹಾಗೂ ಸೆಕ್ಟರ್ ಸದಸ್ಯರಾದ ಹೈದರ್ ಹಾಜಿ ಪಟ್ಟೋರಿ ಫಾಹಾಹಿಲ್ ಸೆಕ್ಟರ್ ಅಧ್ಯಕ್ಷರಾದ ಸಿರಾಜ್ ಇಂಜಿನಿಯರ್ ರಾಷ್ಟ್ರೀಯ ಸಮಿತಿ ಆಡಳಿತ ವಿಭಾಗದ ಅಧ್ಯಕ್ಷರು ಅಬ್ದುಲ್ ಮಾಲಿಕ್ ರಾಷ್ಟ್ರೀಯ ಸಮಿತಿ, ಝೋನ್ ಹಾಗೂ ಸೆಕ್ಟರ್ ನಾಯಕರು ಭಾಗವಹಿಸಿದರು. ಕೊನೆಯಲ್ಲಿ ಫರ್ವಾಣಿಯ ಸೆಕ್ಟರ್ ಕಾರ್ಯದರ್ಶಿ ಜನಾಬ್ ಆಸೀಫ್ ಸಾಗರ್ ಧನ್ಯವಾದ ಗೈದರು.

ವರದಿ ಇಬ್ರಾಹಿಂ ವೇಣೂರು