janadhvani

Kannada Online News Paper

ಬಜ್ಪೆ ಪೋಲೀಸ್ ಇನ್ಸ್‌ಪೆಕ್ಟರ್ ಅಮಾನತು: ಸಮಾಜದ್ರೋಹಿ ಶಕ್ತಿಗಳಿಗೆ ಪ್ರೇರಣೆ- ಯು.ಟಿ.ಖಾದರ್

ಮಂಗಳೂರು: ಬಜ್ಜೆ ಠಾಣೆಯ ಇನ್ಸ್ ಪೆಕ್ಟರ್ ಸಂದೇಶ್ ಮತ್ತು ಮೂವರು ಸಿಬ್ಬಂದಿಗಳ ಅಮಾನತಿನ ಬಗ್ಗೆ ಮಾಜಿ ಸಚಿವ, ವಿಪಕ್ಷದ ಉಪನಾಯಕ ಯುಟಿ ಖಾದರ್ ಪ್ರತಿಕ್ರಿಯಿಸಿದ್ದು, ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಯಾವುದೇ ತನಿಖೆ ನಡೆಸದೆ ಬಜ್ಪೆ ಠಾಣೆಯ ಪೋಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ಸರಕಾರದ ಈ ನಡೆಯು ಪ್ರಾಮಾಣಿಕ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದಂತಾಗುತ್ತಿದೆ.

ಇಂಥಹ ಘಟನೆಗಳು ಕೆಲವು ಸಮಾಜದ್ರೋಹಿ ಶಕ್ತಿಗಳು ಬೇಕಾಬಿಟ್ಟಿ ಮಾತನಾಡಲು ಹಾಗೂ ಕಾನೂನು ಕೈಗೆತ್ತಿಕೊಳ್ಳಲು ಪ್ರೇರಣೆಯಾಗುತ್ತದೆ ಎಂದು ಯುಟಿ ಖಾದರ್ ಹೇಳಿದ್ದಾರೆ.

ಮುಸ್ಲಿಂ ವ್ಯಾಪಾರಿಗೆ ವ್ಯಾಪಾರಕ್ಕೆ ಅಡ್ಡಿಪಡಿಸಿದ್ದ ಹಿಂದೂ, ಬಿಜೆಪಿ ಬೆಂಬಲಿತ ಗೂಂಡಾ ಕಾರ್ಯಕರ್ತರನ್ನು ಲಾಕಪ್ ಗೆ ತಳ್ಳಿದ ಬಜ್ಪೆ ಇನ್ಸ್ ಪೆಕ್ಟರ್ ಸಂದೇಶ್ ರ ವಿರುದ್ದ ಪರಿವಾರ ಕಾರ್ಯಕರ್ತರು ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದ್ದರು. ಈ ಹಿನ್ನೆಲೆಯಲ್ಲಿ ಇನ್ಸ್ ಪೆಕ್ಟರ್ ಸಹಿತ ಮೂವರು ಪೊಲೀಸ್ ಸಿಬ್ಬಂದಿಯನ್ನು ಕಮೀಷನರ್ ಶಶಿ ಕುಮಾರ್ ಅಮಾನತುಗೊಳಿಸಿದ್ದಾರೆ.