janadhvani

Kannada Online News Paper

ಪಬ್ಲಿಕ್ ಪರೀಕ್ಷಾ ಫಲಿತಾಂಶ ಪ್ರಕಟ- ಬಡಕಬೈಲ್ ಮದ್ರಸ ವಿದ್ಯಾರ್ಥಿಗಳ ಉತ್ತಮ ಸಾಧನೆ

ಬಂಟ್ವಾಳ: ಇಸ್ಲಾಮಿಕ್ ಎಜ್ಯುಕೇಶನಲ್ ಬೋರ್ಡ್ ಅಧೀನದಲ್ಲಿ ಮಾರ್ಚ್ ತಿಂಗಳಲ್ಲಿ ರಾಷ್ಟ್ರೀಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆದ ಐದು, ಏಳು ಮತ್ತು ಹತ್ತನೇ ತರಗತಿಯ ವಿದ್ಯಾರ್ಥಿಗಳ ಪಬ್ಲಿಕ್ ಪರೀಕ್ಷೆಯ ಫಲಿತಾಂಶ ಪ್ರಕಟ ವಾಗಿದ್ದು, ಬಡಕಬೈಲ್, ಜಲಾಲಿಯಾ ಹಯಾತುಲ್ ಇಸ್ಲಾಂ ಮದ್ರಸದ ವಿದ್ಯಾರ್ಥಿಗಳು ಶೇಕಡಾ ನೂರು ಫಲಿತಾಂಶ ದೊಂದಿಗೆ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಬಂಟ್ವಾಳ ರೇಂಜ್ ಮಟ್ಟದಲ್ಲೂ ಮೇಲುಗೈ ಸಾಧಿಸಿದ್ದಾರೆ.

ಬಂಟ್ವಾಳ ರೇಂಜ್ ಮಟ್ಟದಲ್ಲಿ
ಏಳನೇ ತರಗತಿಯ ಇಲ್ಹಾಮ್ ಫಾತಿಮಾ (D/O ಇಬ್ರಾಹಿಂ ಖತ್ತರ್) ಪ್ರಥಮ ಹಾಗೂ ಫಾತಿಮಾ ರಿಶಾನಾ (D/O ಅಬ್ದುರ್ರಹ್ಮಾನ್ ) ದ್ವಿತೀಯ
ಮತ್ತು ಹತ್ತನೇ ತರಗತಿಯ ಆಯಿಷಾ ಲುಬಾಬ (D/O ಮರ್ಹೂಂ ಹಮೀದ್) ಪ್ರಥಮ ಹಾಗೂ ಫಾತಿಮಾ ತ್ವಬೀಬಾ (D/O ಜುನೈದ್) ದ್ವಿತೀಯ ಸ್ಥಾನ ಪಡೆದು ನಾಡಿನ ಹಿರಿಮೆಗೆ ಪಾತ್ರರಾಗಿದ್ದಾರೆ.

ಪರೀಕ್ಷೆ ಎದುರಿಸಿ ಯಶಸ್ಸಿಗೆ ಕಾರಣಕರ್ತರಾದ ವಿದ್ಯಾರ್ಥಿಗಳು, ತರಬೇತಿ ನೀಡಿದ ಅಧ್ಯಾಪಕ ವೃಂದ ಹಾಗೂ ಪ್ರೋತ್ಸಾಹಿಸಿದ ಪೋಷಕರಿಗೆ ಬದ್ರಿಯಾ ಜುಮಾ ಮಸೀದಿ ಮತ್ತು ಹಯಾತುಲ್ ಇಸ್ಲಾಂ ಮದ್ರಸ ಸಮಿತಿ ಜಲಾಲಿಯಾ, ಬಡಕಬೈಲ್ ಹೃದಯಾಂತರಾಳದ ಅಭಿನಂದನೆಗಳನ್ನು ಸಲ್ಲಿಸಿದೆ.

error: Content is protected !! Not allowed copy content from janadhvani.com