janadhvani

Kannada Online News Paper

ಕಿನ್ಯದಲ್ಲಿ SSF ವತಿಯಿಂದ ‘ಜಸ್ಟೀಸ್ ಫಾರ್ ಆಸಿಫಾ’ ಬೃಹತ್ ಪ್ರತಿಭಟನೆ

ಕಿನ್ಯಾ:ಜಮ್ಮುವಿನಲ್ಲಿ ಆಸಿಫಾ ಎಂಬ 8ರ ಹರೆಯದ ಮುಗ್ದ ಕಂದಮ್ಮಳ ಮೇಲೆ ಕೋಮುವಾದಿ ನರ ರಾಕ್ಷಸರು ನಡೆಸಿದ ಅತ್ಯಾಚಾರ ಹಾಗೂ ಹತ್ಯೆಯ ಸಮಗ್ರ ತನಿಖೆ ನಡೆಸಿ ಆರೋಪಿಗಳನ್ನು ಗಲ್ಲಿಗೇರಿಸುವಂತೆ ಒತ್ತಾಯಿಸಿ ಕಿನ್ಯಾ SSF ಶಾಖಾ ವ್ಯಾಪ್ತಿಗಳಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯ್ತು.ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ ಇದರ ನಿರ್ಧೇಶನ ಮೇರೆಗೆ “ಆಸಿಫಾಳ ಬಿಸಿರಕ್ತದೊಂದಿಗೆ ಕುದಿಯುತ್ತಿದೆ ಭಾರತ” ಎಂಬ ಘೋಷಣೆಯೊಂದಿಗೆ ಹಮ್ಮಿಕೊಂಡ ಪ್ರತಿಭಟನಾ ಕಾರ್ಯಕ್ರಮವನ್ನು ಎಸ್ಸೆಸ್ಸೆಫ್ ಕಿನ್ಯ ಸೆಕ್ಟರ್ ವ್ಯಾಪ್ತಿಯ ಖುತುಬಿನಗರ, ಬೆಳರಿಂಗೆ, ಕುರಿಯ, ಮೀಂಪ್ರಿ, ಉಕ್ಕುಡ ಈ ಎಲ್ಲಾ ಶಾಖಾ ವ್ಯಾಪ್ತಿಯಲ್ಲಿ ಅತ್ಯಂತ ಯಶಸ್ವಿಯಾಗಿ ನಡೆಸಲಾಯಿತು.ಈ ಕಾರ್ಯಕ್ರಮದಲ್ಲಿ ಮೆಹಬೂಬ್ ಸಖಾಫಿ ಕಿನ್ಯ ಉಸ್ತಾದರು ನಡೆಸಿದ ಜಾಗೃತಿ ಭಾಷಣದಲ್ಲಿ” ಭಾರತ ಎಂಬ ಜಾತ್ಯಾತೀತ ಧೇಶದಲ್ಲಿ ಹಿಂದೂ, ಮುಸ್ಲಿಂ, ಕೈಸ್ತ ಹಾಗೂ ಇನ್ನಿತರ ಧರ್ಮದ ಜನರು ಪರಸ್ಪರ ಸಹ ಬಾಳ್ವೆಯಿಂದ ಬದುಕಬೇಕಾಗಿದೆ. ಅದೇ ರೀತಿ ಈ ಧೇಶದಲ್ಲಿ ಆಡಳಿತ ನಡೆಸುವ ಯಾವುದೇ ರಾಜಕೀಯ ಪಕ್ಷಗಳ ನಾಯಕರು, ದುಷ್ಕೃತ್ಯವೆಸಗಿದ ಆರೋಪಿಗಳನ್ನು ರಕ್ಷಿಸುವ ರೀತಿಯಲ್ಲಿ ಬೆಂಬಲ ನೀಡಬಾರದು.ಆಸಿಫಾ ಎಂಬ ಪುಟಾಣಿ ಸಹೋದರಿಯ ಮೇಲೆ ನರ ರಾಕ್ಷಸಕರು ನಡೆಸಿದ ಹೀನ ಕೃತ್ಯವನ್ನು ಜಾತಿ,ಧರ್ಮ ಭೇದವಿಲ್ಲದೆ ಎಲ್ಲಾ ಭಾರತೀಯರೂ ಒಗ್ಗೂಡಿ ಪ್ರತಿಭಟಿಸಬೇಕು ಎಂದರು.ಕಾರ್ಯಕ್ರಮದಲ್ಲಿ ಸೈಯ್ಯದ್ ಅಲವಿ ತಂಙಳ್, K.H ಇಸ್ಮಾಯಿಲ್ ಸಹದಿ ಕಿನ್ಯ, V.Aಮುಹಮ್ಮದ್ ಮುಸ್ಲಿಯಾರ್,ಮುಹಮ್ಮದ್ ಮುಸ್ಲಿಯಾರ್ ಉಕ್ಕುಡ,ಶರೀಫ್ ಸಅದಿ,ಉಸ್ಮಾನ್ ಮುಸ್ಲಿಯಾರ್,ಇಲ್ಯಾಸ್ ಮದನಿ,ಮುಹಮ್ಮದ್ ಉಳ್ಳಾಲ್, ಅಬೂಬಕ್ಕರ್ ಮೀನಾದಿ,ಹಮೀದ್ ಮೀಂಪ್ರಿ,ಮೂಸಕುಂಞ ಬದ್ರಿಯ ನಗರ ಕಿನ್ಯ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಸಿರಾಜ್ ಕಿನ್ಯ ಸದಸ್ಯರಾದ ಮೊಹಮ್ಮದ್ ಕುರಿಯ, ಫಾರೂಕ್ ಬೆಳರಿಂಗೆ ಹಿರಿಯರಾದ ವಾಮನ ಪೂಜಾರಿ ಕಿನ್ಯ ಹಾಗೂ ಎಸ್ಸೆಸ್ಸೆಫ್ ಕಿನ್ಯ ಸೆಕ್ಟರ್ ವ್ಯಾಪ್ತಿಯ ಶಾಖಾ ನಾಯಕರು ಹಾಗೂ ಕಿನ್ಯ ಪ್ರದೇಶದ ನಾಗರಿಕರು ಬಾಗವಹಿಸಿದ್ದರು.

✍…..ಫಯಾಝ್ ಕಿನ್ಯ

error: Content is protected !! Not allowed copy content from janadhvani.com