ಜಸ್ಟೀಸ್ ಫಾರ್ ಆಸಿಫಾ : ಪೈಶಾಚಿಕ ಕೃತ್ಯದ ವಿರುದ್ಧ SSF ಸಂತೋಷನಗರ ಶಾಖೆ ಪ್ರತಿಭಟನೆ

ಕುತ್ತಾರ್: ಕಾಶ್ಮೀರದ ಕಥುವಾ ಎಂಬಲ್ಲಿ ಆಸಿಫಾ ಅನ್ನುವ ಎಂಟರ ಹರೆಯದ ಬಾಲಕಿಯನ್ನು ಸಾಮೂಹಿಕ ಅತ್ಯಾಚಾರಗೈದು ಪೈಶಾಚಿಕವಾಗಿ ಕೊಲೆ ನಡೆಸಿದ ಆರೋಪಿಗಳಿಗೆ ಉಗ್ರ ಶಿಕ್ಷೆಯಾಗಬೇಕೆಂದು ಒತ್ತಾಯಿಸಿ, ಎಸ್ಸೆಸ್ಸಫ್ ರಾಜ್ಯ ಘಟಕದ ನಿರ್ದೇಶನದಂತೆ, ಎಸ್.ಎಸ್.ಎಫ್ ಸಂತೋಷನಗರ ಶಾಖೆ ವತಿಯಿಂದ ಪ್ರತಿಭಟನೆ ನಡೆಯಿತು.ಈ ವೇಳೆ ಸಂತೋಷ್ ನಗರ ಮಸ್ಜಿದ್ ಖತೀಬ್ ಯಾಕುಬ್ ಸಅದಿ ಅಫ್ಲಲಿ ಮಾತನಾಡಿ ಟಿಪ್ಪು ಸುಲ್ತಾನ್, ಮುಹಮ್ಮದ್ ಅಲಿ, ಶೌಕತ್ ಅಲಿ, ಜವಾಹರಲಾಲ್ ನೆಹರು, ಸುಭಾಷ್ ಚಂದ್ರ ಬೋಸ್ ರಂತಹ ಹಿರಿಯರು ಭಾರತದಲ್ಲಿ ಪರಸ್ಪರ ಸ್ನೇಹ, ಏಕತೆ ನೆಲೆಸಲು ಸ್ವಾತಂತ್ರ್ಯ ಕ್ಕಾಗಿ ಹೋರಾಡಿದ್ದಾರೆ, ಆದ್ರೆ‌ ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಭೀಕರ ಕೃತ್ಯಗಳಲ್ಲಿ ಕೆಲವೊಂದು ಜನರು ತೊಡಗಿದ್ದು ದೇಶದಲ್ಲಿ ಭಯದ ವಾತಾವರಣ ಮೂಡಿಸುತ್ತಿದ್ದು ಅಂತವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕಾಗಿದೆ ಎಂದರು.

Leave a Reply

Your email address will not be published. Required fields are marked *

error: Content is protected !!