ಆಸಿಫಾಳ ಬಿಸಿ ರಕ್ತದೊಂದಿಗೆ ಕುದಿಯುತ್ತಿದೆ ಬಾರತ:S,S,F ಸರಳಿಕಟ್ಟೆ ಸೆಕ್ಟರ್ ಪ್ರತಿಭಟನೆ

ಸರಳಿಕಟ್ಟೆ: ಜಮ್ಮುವಿನ ಕಠಾವಾದಲ್ಲಿ ಅತ್ಯಂತ ದಾರುಣವಾಗಿ ವಧಿಸಲ್ಪಟ್ಟ ಪುಟ್ಟ ಮಗು ಆಸಿಫಾಳಿಗೆ ನ್ಯಾಯ ದೊರೆಯುವಂತೆ ಒತ್ತಾಯಿಸಿ ಬ್ರಹತ್ ಪ್ರತಿಭಟನೆಯು ಇಂದು ಬೆಳಿಗ್ಗೆ ಸರಳಿಕಟ್ಟೆ ಜಂಕ್ಷನ್ ನಲ್ಲಿ ನಡೆಯ್ತು.

SSFಸರಳಿಕಟ್ಟೆ ಸೆಕ್ಟರ್‍ ಗೊಳಪಟ್ಟ ಎಲ್ಲಾ ಶಾಖಾ ಸದಸ್ಯರು ಮತ್ತು ಊರಿನ ಹಿರಿಯ ಕಿರಿಯರೆಲ್ಲರೂ ಆಸಿಫಾಳ ಬಿಸಿ ರಕ್ತದೊಂದಿಗೆ ಕುದಿಯುತ್ತಿದೆ ಭಾರತ ಎಂಬ ದ್ವೇಯ ವಾಕ್ಯದೊಂದಿಗೆ ಪ್ರತಿಭಟನೆಯಲ್ಲಿ ಪಾಲ್ಗೊಂಡರು.ಸೆಕ್ಟರ್ ಪ್ರ.ದಾನ ಕಾರ್ಯದರ್ಶಿ ಬಾತಿಶ್ ಕೆ.ಪಿ ತೆಕ್ಕಾರು ಸ್ವಾಗತ ಬಾಷಣ ನಡೆಸಿದರು.ಮುಹಮ್ಮದ್ ಸಖಾಫಿ ಕನ್ಯಾಡಿ, ಮುತ್ತಲಿಬ್ ಸಕಾಫಿ ಸರಳಿಕಟ್ಟೆ, ನಈಮಿ ಉಸ್ತಾದ್ ಮೂಡಡ್ಕ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.

ಕೋಮುವಾದಿಗಳ ಅಟ್ಟ ಹಾಸವನ್ನು ಬಯಲು ಮಾಡಲು ಕೇಂದ್ರ ಸರಕಾರ ಮತ್ತು ಮಾಧ್ಯಮಗಳುಕಣ್ಣು ತೆರೆಯಲಿ ಎಂಬ ನಿಟ್ಟಿನಲ್ಲಿ ಸೇರಿದ ನೂರಾರು ಜನರು ಆಸಿಫಾಳ ಪರ ಏರು ಧ್ವನಿಯಲ್ಲಿ ಘೋಷಣೆ ಕೂಗಿದರು.ಸಂಘಟನಾ ಚತುರ ಲತೀಫ್ ಮಾಸ್ಟರ್ ವಂದನಾರ್ಪಣೆ ಬಾಷಣ ನಡೆಸಿದರು. ನಂತರ ಆಸಿಫಾಳ ಮೇಲೆ ತಹ್ಲೀಲ್ ಸಮರ್ಪಿಸಲಾಯಿತು.

ಇದೇ ವೇಳೆ ಆರೋಪಿಗಳಿಗೆ ಗಲ್ಲು ಶಿಕ್ಷೆ ನೀಡಬೇಕೆಂದು ಕೇಂದ್ರಸರಕಾರವನ್ನು ಒತ್ತಾಯಿಸಿ ತಹಶೀಲ್ದಾರರಿಗೆ ಮನವಿ ನೀಡಲಾಯಿತು.
✍ಬಾತಿಷ್ ಕೆ.ಪಿ.

One thought on “ಆಸಿಫಾಳ ಬಿಸಿ ರಕ್ತದೊಂದಿಗೆ ಕುದಿಯುತ್ತಿದೆ ಬಾರತ:S,S,F ಸರಳಿಕಟ್ಟೆ ಸೆಕ್ಟರ್ ಪ್ರತಿಭಟನೆ

Leave a Reply

Your email address will not be published. Required fields are marked *

error: Content is protected !!