janadhvani

Kannada Online News Paper

ಸಿ.ಎಂ ಇಬ್ರಾಹಿಂ ಅವರಿಗೆ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನ-ಏಪ್ರಿಲ್ 17 ಕ್ಕೆ ಅಧಿಕೃತ ಘೋಷಣೆ

ರಾಮನಗರ: ಕಾಂಗ್ರೆಸ್ ಬಿಟ್ಟು ಜೆಡಿಎಸ್ ಗೂಡು ಸೇರಿರೋ ಸಿ.ಎಂ ಇಬ್ರಾಹಿಂ ಅವರಿಗೆ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನ ನೀಡೋದಾಗಿ ಜೆಡಿಎಸ್ ವರಿಷ್ಠರು ಹಾಗೂ ಮಾಜಿ ಪ್ರಧಾನಿ H.D ದೇವೇಗೌಡ ಅವರು ಘೋಷಣೆ ಮಾಡಿದ್ದಾರೆ. ರಾಮನಗರದಲ್ಲಿ ಜನತಾ ಜಲಧಾರೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಮಾತಾಡಿದ ಅವ್ರು, ಇದೇ 17 ಕ್ಕೆ ಸಿ.ಎಂ.ಇಬ್ರಾಹಿಂರನ್ನ ಪಕ್ಷದ ರಾಜ್ಯಾಧ್ಯಕ್ಷರಾಗಿ ಘೋಷಣೆ ಮಾಡ್ತೇನೆ ಎಂದು ಹೇಳಿದ್ದಾರೆ. ಈಗ ಹೆಚ್.ಕೆ.ಕುಮಾರಸ್ವಾಮಿ ರಾಜ್ಯಾಧ್ಯಕ್ಷರಾಗಿದ್ದಾರೆ ಅವರಿಗೆ ಪಕ್ಷದಲ್ಲಿ ಮತ್ತೊಂದು ಹುದ್ದೆಯನ್ನು ನೀಡಲಾಗುತ್ತೆ ಎಂದ್ರು. ಇದಕ್ಕೆ ಹೆಚ್.ಡಿ.ಕುಮಾರಸ್ವಾಮಿ ಸಹ ಒಪ್ಪಿದ್ದಾರೆ ಎಂದು ದೇವೇಗೌಡರು ತಿಳಿಸಿದ್ದಾರೆ.

ಜೆಡಿಎಸ್‌ನಿಂದ ಜನತಾ ಜಲಧಾರೆ

ಪಕ್ಷ ಕೂಡಾ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದೆ. ಈಗಾಗಲೇ ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕಾಂಗ್ರೆಸ್ ಪಾದಯಾತ್ರೆ ಹಮ್ಮಿಕೊಂಡಿತ್ತು. ಇದೀಗ ಜೆಡಿಎಸ್‌ ಪಕ್ಷ ಜನತಾ ಜಲಧಾರೆ ಎಂಬ ಹೆಸರಿನಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದೆ. ಜನತಾಜಲಧಾರೆಗೆ ಮಾಜಿ ಪ್ರಧಾನಿ ದೇವೇಗೌಡರು ಚಾಲನೆ ನೀಡಿದ್ರು. ರಾಮನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಕಾರ್ಯಕರ್ತರ ಸಭೆ ನಡೆಯಿತು. ದೇವೇಗೌಡರು, ಮಾಜಿ ಸಿಎಂ ಕುಮಾರಸ್ವಾಮಿ ಸಭೆ ಉದ್ಘಾಟನೆ ಮಾಡಿದ್ರು. ಸಿ.ಎಂ.ಇಬ್ರಾಹಿಂ, ಅನಿತಾ ಕುಮಾರಸ್ವಾಮಿ ಸೇರಿ ಹಲವು ಹಲವು ಜೆಡಿಎಸ್ ಶಾಸಕರು, ಎಂ.ಎಲ್.ಸಿ ಭಾಗಿಯಾಗಿದ್ರು. ಕಾರ್ಯಕ್ರಮದಲ್ಲಿ 2 ಸಾವಿರಕ್ಕೂ ಹೆಚ್ಚು ಜನರು ಭಾಗಿಯಾಗಿದ್ದು, ರಾಮನಗರ, ಚನ್ನಪಟ್ಟಣ, ಮಾಗಡಿ, ಕನಕಪುರ, ಮಂಡ್ಯದಿಂದಲೂ ಜನರು ಆಗಮಸಿದ್ರು

2023ಕ್ಕೆ ಜೆಡಿಎಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ

ರಾಮನಗರದ ದೊಡ್ಡದರ್ಗಾದಲ್ಲಿ ಸಿಎಂ ಇಬ್ರಾಹಿಂ ಪ್ರಾರ್ಥನೆ ಸಲ್ಲಿಸಿದ್ರು. ಈ ವೇಳೆ ಪ್ರಾರ್ಥನೆ ಬಳಿಕ ಹೂ ಹಾಕಿ 5 ವರ್ಷದ ಸರ್ಕಾರ ಬರಲಿದೆ ಎಂದು ದೇವೇಗೌಡರು ಇಲ್ಲಿಂದಲೇ ಹೋರಾಟ ಪ್ರಾರಂಭ ಮಾಡಿದ್ದರು , ಈಗ 2022 ರಲ್ಲಿ ಕುಮಾರಸ್ವಾಮಿ ಇಲ್ಲಿಂದಲೇ ಪ್ರಾರಂಭ ಮಾಡಿದ್ದಾರೆ, 2023 ಕ್ಕೆ ಜೆಡಿಎಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಸಿ.ಎಂ ಇಬ್ರಾಹಿ ಹೇಳಿದ್ದಾರೆ

ಈಶ್ವರಪ್ಪ ರಾಜೀನಾಮೆ ಕೊಡಲೇಬೇಕು

ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣ ವಿಚಾರಕ್ಕೆ ಸಂಬಂಧಿಸಿದಂತೆ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ. ನೈತಿಕತೆ‌ ಇದ್ದರೆ ಈಶ್ವರಪ್ಪ‌ ಒಳ್ಳೆಯ ತೀರ್ಮಾನಕ್ಕೆ ಬರಲಿ, ಬಿಜೆಪಿಯಲ್ಲಿ‌ ಒಳಜಗಳ ನಡೆಯುತ್ತಿದೆ, ಈಶ್ವರಪ್ಪನವರೇ ಕಾಂಗ್ರೆಸ್ ‌ಗೆ ಆಹಾರ ಆಗಬೇಡಿ, ನಿಮ್ಮ ವಿರುದ್ಧ ನಿಮ್ಮ ಪಕ್ಷದಲ್ಲೇ ಚಿತಾವಣೆ ನಡೆದಿದ್ದರೇ ಎದುರಿಸಿ, ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಿ ಎಂದ್ರು.

ಕೇಸ್ನನ್ನು ಉನ್ನತ ತನಿಖೆಗೆ ಒಳಪಡಿಸಬೇಕು

ಇದೊಂದು ಇಲಾಖೆಗೆ ಮಾತ್ರ ಯಾಕೆ ಪರ್ಸೆಂಟೆಜ್ ಆರೋಪ ಎಲ್ಲ ಇಲಾಖೆಯಲ್ಲಿ ಕಮೀಷನ್ ದಂಧೆ ನಡೆಯುತ್ತಿದೆ, ಈಶ್ವರಪ್ಪ ನವರ ಮೇಲೆ ಆರೋಪ ಮಾಡುತ್ತಿರುವುದು ಅನುಮಾನಕ್ಕೆ ಎಡೆ ಮಾಡಿಕೊಡುತ್ತದೆ. ಈ ಕಳಂಕದಿಂದ ಈಶ್ವರಪ್ಪ ಹೊರಬೇಕು ಹೀಗಾಗಿ ರಾಜೀನಾಮೆ ಕೊಟ್ಟು ಈಶ್ವರಪ್ಪ ‌ಒತ್ತಡ ಹಾಕಬೇಕು ಸರ್ಕಾರದ ಮೇಲೆ ಈ ಪ್ರಕರಣವನ್ನು ಉನ್ನತ ತನಿಖೆಗೆ ಒಳಪಡಿಸಬೇಕು ಎಂದು ರಾಮನಗರದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ

ಜಲಧಾರೆ ಕಾರ್ಯಕ್ರಮದ ಉದ್ದೇಶ

ರಾಜ್ಯದ ಪ್ರಮುಖ ನದಿಗಳಾದ ಗೋದಾವರಿ, ಕೃಷ್ಣಾ, ಕಾವೇರಿ, ಭೀಮಾ, ಕಾರಂಜ, ಮುಲ್ಲಮಾರಿ, ಅಮರ್ಚಾ, ಬೆಣ್ಣೆ ತೋರಾ, ಘಟಪ್ರಭಾ, ಮಲಪ್ರಭಾ, ಮಹದಾಯಿ, ತುಂಗಭದ್ರೆ ಹೇಮಾವತಿ, ಕಬಿನಿ, ಹಾರಂಗಿ, ಕಾಳಿ, ಅಘನಾಶಿನಿ, ನೇತ್ರಾವತಿ ಹರಿಯುತ್ತಿತ್ತು ಇವುಗಳಲ್ಲಿ ಕೆಲವು ಅಂತರಾಜ್ಯ ಜಲವಿವಾದದ ಸುಳಿಯಲ್ಲಿ ಸಿಕ್ಕಿವೆ. ಇದರಿಂದ ರಾಜ್ಯಕ್ಕೆ ಅನ್ಯಾಯವಾಗುತ್ತಿದ್ದು, ಮತ್ತು ಕೆಲವೊಂದು ಜಲವಿವಾದಗಳು ಸುಪ್ರೀಂ ಕೋರ್ಟ್‌ನಲ್ಲಿ ನೆರೆ ರಾಜ್ಯಗಳ ತಕರಾರಿನಿಂದ ನೆನೆಗುದಿಗೆ ಬಿದ್ದಿವೆ.

ಅಷ್ಟೇ ಅಲ್ಲದೆ ರಾಜ್ಯದಲ್ಲಿ ಕೆಲವೊಂದು ಅಣೆಕಟ್ಟುಗಳನ್ನು ನಿರ್ಮಿಸಿ 3 ರಿಂದ 4 ದಶಕಗಳು ಕಳೆದಿವೆ. ಕಾಲುವೆಗಳು ಮತ್ತು ವಿತರಣಾ ನಾಲೆಗಳನ್ನು ಪುನಶ್ಚೇತನ ಮತ್ತು ಆಧುನೀಕರಣಗೊಳಿಸದೆ ರೈತರಿಗೆ ಸದುಪಯೋಗ ಪಡೆಯಲು ಆಗುತ್ತಿಲ್ಲ. ಇದರಿಂದ ಈ ಯೋಜನೆಗಳಿಗೆ ಕಾಯಕಲ್ಪ ಕಲ್ಪಿಸಿ ರಾಜ್ಯದ ನದಿಗಳಲ್ಲಿ ದೊರೆಯುವ ನೀರನ್ನು ಸುದ್ಭಳಕೆ ಮಾಡಿ ಎಂಬುದು ಜೆಡಿಎಸ್ ಹಮ್ಮಿಕೊಂಡಿರುವ ಈ ಜಲಧಾರೆ ಕಾರ್ಯಕ್ರಮದ ಉದ್ದೇಶವಾಗಿದೆ

error: Content is protected !! Not allowed copy content from janadhvani.com