janadhvani

Kannada Online News Paper

ಧಾರವಾಡ ವಿಧ್ವಂಸಕತೆ: ರಾಜ್ಯ ಕೇಶವ ಕೃಪಾ ನಿಯಂತ್ರಣದಲ್ಲಿದೆ, ಮುತಾಲಿಕ್ ಬಂಧನವಾಗಾಲಿ- ಮುಸ್ಲಿಮ್ ಒಕ್ಕೂಟ

ಈ ದೇಶದ ಕಾನೂನು, ನ್ಯಾಯ, ಪೊಲೀಸು, ನಾಗರಿಕತೆ, ಸಾಮಾಜಿಕ ನ್ಯಾಯ ಮಾನವ ಹಕ್ಕುಗಳು ಇನ್ನೂ ಜೀವಂತ ಇದೆಯೇ ಎಂದು ಸಂಶಯ ವಾಗುತ್ತಿದೆ.

ಮಂಗಳೂರು: ಧಾರವಾಡದ ನುಗ್ಗೀಕೆರಿ ಯಲ್ಲಿ ಧಾರ್ಮಿಕ ಕೇಂದ್ರದ ಹೊರಾಂಗಣದಲ್ಲಿ ಕಲ್ಲಂಗಡಿ ಹಣ್ಣು ಮಾರಾಟ ಮಾಡುತ್ತಿದ್ದ ನೇಬಿ ಸಾಬ್ ಎಂಬ ಬಡ ಮುಸ್ಲಿಮ್ ವರ್ತಕರನ್ನು ಸಂಘೀ ಗೂಂಡಾಗಳು ಬಲವಂತ ಹೊರಹಾಕಿ ಅವರ ಕಲ್ಲಂಗಡಿ ಹಣ್ಣುಗಳನ್ನು ನಾಶ ಗೊಳಿಸಿದ್ದು, ಈ ರಾಜ್ಯ ರಾಕ್ಷಸ ರಾಜ್ಯವಾಗಿದೆ ಎಂದು ಸಾಬೀತು ಪಡಿಸಿದೆ. ಈ ದೇಶದ ಕಾನೂನು, ನ್ಯಾಯ, ಪೊಲೀಸು, ನಾಗರಿಕತೆ, ಸಾಮಾಜಿಕ ನ್ಯಾಯ ಮಾನವ ಹಕ್ಕುಗಳು ಇನ್ನೂ ಜೀವಂತ ಇದೆಯೇ ಎಂದು ಸಂಶಯ ವಾಗುತ್ತಿದೆ. ಈ ಘಟನೆಯಲ್ಲಿ ಗ್ರಹ ಸಚಿವರು ತಕ್ಷಣ ತನ್ನ ಹುದ್ದೆಗೆ ರಾಜೀನಾಮೆ ಸಲ್ಲಿಸಬೇಕಿದೆ. ಈ ದೇಶದಲ್ಲಿ ಸಂಘ ಬೆಂಬಲಿತ ಸರ್ಕಾರ ಬಂದ ನಂತರ ಯಾವುದೆಲ್ಲ ವಿದ್ವಂಸಕತೆಗಳು ಸಂಭವಿಸಲಿಲ್ಲ ಎಂದು ವಿಮರ್ಶಿಸಿ ನೋಡ ಬೇಕಾಗಿದೆ.

ಇತ್ತೀಚೆಗೆ ಮುಸ್ಲಿಮ್ ವಿದ್ಯಾರ್ಥಿನಿಯರ ಹಿಜಾಬ್ ಅನ್ನು ಸಮವಸ್ತ್ರ ವಿರೋಧಿ ಎಂದು ಸಮರ್ಪಕವಾಗಿ ಬಿಂಬಿಸಲು ಪ್ರಯತ್ನ ಪಟ್ಟಲ್ಲಿಂದ ಹಿಡಿದು,ಹಲಾಲ್, ಆಝಾನ್, ಮುಸ್ಲಿಮರಿಗೆ ವ್ಯಾಪಾರ ನಿರ್ಭಂದ, ಮಾವು ಖರೀದಿ ನಿಷೇಧ, ಟ್ಯಾಕ್ಷಿ ನಿಷೇಧ ಇತ್ಯಾದಿ ವರೆಗೆ, ಸಮರ್ಪಕವಾಗಿ ಮುಸ್ಲಿಮ್ ವಿರೋಧಿ ಅಭಿಯಾನ ನಡೆಸಿ, ಇಲ್ಲಿನ ಮುಸ್ಲಿಮೇತರರ ದೃಷ್ಟಿಯಲ್ಲಿ ಅವರನ್ನು ವಿಕೃತರಾಗಿ ಬಿಂಬಿಸಿ, ಈ ದೇಶದ , ರಾಜ್ಯದ ನೈಜ ಸಮಸ್ಯೆಗಳನ್ನು ಶಾಶ್ವತವಾಗಿ ಮಣ್ಣು ಮುಕ್ಕಿಸಿದ ಕೀರ್ತಿ ಕೇಶವ ಕೃಪಾ ಗೆ ಸಲ್ಲಿಸಬೇಕು.

ಶೂದ್ರರನ್ನು ಮುಸಲ್ಮಾನರ ವಿರುದ್ಧ ಹಚ್ಚಿ ಹಾಕಿ,ತನ್ನ ಸಂಘೀ ಕಾರ್ಯಕರ್ತರಿಗೆ ಹೇಗಾದರೂ ಹರಸಾಹಸ ಪಟ್ಟು, ಕರ್ನಾಟಕದಲ್ಲಿ ಗಲಭೆ ಸೃಷ್ಟಿಸುವ ಹೆಣ ಗುತ್ತಿಗೆ ನೀಡಿದಂತೆ ಕಾಣುತ್ತದೆ. ರಾಜ್ಯದಲ್ಲಿ ಅಘೋಷಿತ ಪರ್ಯಾಯ ವ್ಯವಸ್ಥೆ ಒಂದು ಈ ರಾಜ್ಯದ ವಿಂಗಡನೆ ಬಯಸುತ್ತಿದೆ .ಈ ರಾಜ್ಯದ ನೈಜ ವೈರಿ ಯಾರೆಂದು ಶೂದ್ರರಿಗೆ ಅರ್ಥವಾಗದಿದ್ದರೂ, ಮುಸ್ಲಿಮ್ ಸಮುದಾಯಕ್ಕೆ ತನ್ನ ನೈಜ ವೈರಿ ಯಾರೆಂದು ಮನವರಿಕೆ ಆಗಲು ಹೆಚ್ಚಿನ ಅವಧಿ ಅಗತ್ಯವಿಲ್ಲ.

ಕೆ.ಅಶ್ರಫ್
ಅಧ್ಯಕ್ಷರು.ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ.

error: Content is protected !! Not allowed copy content from janadhvani.com