ದೋಹಾ : ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆ.ಸಿ.ಎಫ್ ಖತ್ತರ್ ವತಿಯಿಂದ, ಇಮಾಂ ಬುಖಾರಿ ಮದ್ರಸಾ ಉದ್ಘಾಟನಾ ಸಮಾರಂಭವು ದಿನಾಂಕ 06-04-2022 ರಂದು ಝೂಮ್ ಆ್ಯಪ್ ಮೂಲಕ ನಡೆಯಿತು.
ಅಖಿಲ ಭಾರತ ಸುನ್ನೀ ವಿದ್ಯಾಭ್ಯಾಸ ಬೋರ್ಡ್ ಅಧ್ಯಕ್ಷರಾದ ಬಹುಮಾನ್ಯರಾದ ಸಯ್ಯದ್ ಅಲಿ ಬಾಫಖಿ ತಂಙಳ್ ರವರು ಪವಿತ್ರ ಖುರ್’ಆನಿನ ವಾಕ್ಯವನ್ನು ಪಠಿಸುವುದರ ಮೂಲಕ ಇಮಾಮ್ ಬುಖಾರಿ ಮದ್ರಸಾವನ್ನು ಉದ್ಘಾಟನೆಗೈದರು.
ಕೆ.ಸಿ.ಎಫ್. ಖತ್ತರ್ ರಾಷ್ಟ್ರೀಯ ಸಮಿತಿ ಶಿಕ್ಷಣ ವಿಭಾಗದ ಚೇರ್ಮಾನ್ ಸತ್ತಾರ್ ಅಶ್ರಫಿ ಮಠ ಅವರ ದುಆ ಮೂಲಕ ಆರಂಭಗೊಂಡ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆ.ಸಿ.ಎಫ್.ಖತ್ತರ್ ರಾಷ್ಟ್ರೀಯ ಅಧ್ಯಕ್ಷರಾದ ಯೂಸುಫ್ ಸಖಾಫಿ ಅಯ್ಯಂಗೇರಿ ವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು “ನಾವು ಮಾತ್ರ ಕಲಿತರೆ ಸಾಲದು, ನಮ್ಮ ಕುಟುಂಬಕ್ಕೂ, ಮುಂದಿನ ಪೀಳಿಗೆಗೂ ಮದ್ರಸಾ ಶಿಕ್ಷಣ ದೊರಯುವಂತಾಗಬೇಕು ಹಾಗೂ ದ’ಅ್’ವಾ ರಂಗದ ಕಾರ್ಯಾಚರಣೆ ಸದಾ ಮುಂದುವರಿಯುತ್ತಿರಲಿ” ಎಂಬ ಆಶಂಸೆಯನ್ನು ವ್ಯಕ್ತಪಡಿಸಿದರು.
ಮುಖ್ಯ ಭಾಷಣಕಾರರಾಗಿ ಪಾಲ್ಗೊಂಡಿದ್ದ ಕೆ.ಸಿ.ಎಫ್. ಅಂತರಾಷ್ಟ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿಯಾದ ಖಮರುದ್ದೀನ್ ಗೂಡಿನಬಳಿ, ಲೌಕಿಕ – ಮದ್ರಸಾ ಶಿಕ್ಷಣದ ಮಹತ್ವ, ಯುವಪೀಳಿಗೆಗೆ ದೊರಕಬೇಕಾದ ಪೇರಣಾತ್ಮಕ ತರಗತಿಯ ಅಗತ್ಯತೆ ಬಗ್ಗೆ ವಿವರಿಸುವುದರ ಜೊತೆಗೆ , ಆಧುನಿಕ ಜಗತ್ತಿನ ಬೆಳವಣಿಗೆಯ ಅನುಸಾರವಾಗಿ, ಮದ್ರಸಾ ಶಿಕ್ಷಣ ಮಕ್ಕಳಿಗೆ ಬಹಳ ಸುಲಭ ರೀತಿಯಲ್ಲಿ ಮನದಟ್ಟಾಗುವ ಭಾಷೆಯಲ್ಲಿ ದೊರಕಿಸುವ ಪ್ರಯತ್ನದ ಉದ್ದೇಶವನ್ನೂ ಬಹಳ ಸ್ಪಷ್ಟವಾದ ಮಾತುಗಳ ಮೂಲಕ ವಿವರಿಸಿದರು.
ಮದ್ರಸಾ ಆರಂಭದ ಭಾಗವಾಗಿ ಕೆ.ಸಿ.ಎಫ್. ಅಂತರಾಷ್ಟ್ರೀಯ ಸಮಿತಿ ಸದಸ್ಯರಾದ ಹಾಫಿಳ್ ಫಾರೂಖ್ ಸಖಾಫಿ ಎಮ್ಮೆಮ್ಮಾಡು ಅವರಿಂದ ಪಾಲ್ಗೊಂಡಿದ್ದ ಮಕ್ಕಳಿಗಾಗಿ ಸಣ್ಣಮಟ್ಟಿನ ದೀನಿ ತರಗತಿ ನಡೆಯಿತು.
ಕಾರ್ಯಕ್ರಮದಲ್ಲಿ ಕೆ.ಸಿ.ಎಫ್. ಖತ್ತರ್ ರಾಷ್ಟ್ರೀಯ ಸಮಿತಿಯ ಕೋಶಾಧಿಕಾರಿ ಕಬೀರ್ ದೇರಳಕಟ್ಟೆ, ರಾಷ್ಟ್ರೀಯ ಸಮಿತಿ ಇಹ್ಸಾನ್ ವಿಭಾಗದ ಚೇರ್ಮಾನ್ ಮುನೀರ್ ಮಾಗುಂಡಿ, ರಾಷ್ಟ್ರೀಯ ಸಮಿತಿ ಸಂಘಟನಾ ವಿಭಾಗದ ಚೇರ್ಮಾನ್ ಹನೀಫ್ ಪಾತೂರು, ರಾಷ್ಟ್ರೀಯ ನಾಯಕರಾದ ಸಿದ್ದೀಖ್ ಕೃಷ್ಣಾಪುರ ಉಪಸ್ಥಿತಿಯಿದ್ದರು.
ಕೆ.ಸಿ.ಎಫ್.ಖತ್ತರ್ ರಾಷ್ಟ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಸಿದ್ದೀಖ್ ಹಂಡುಗೂಳಿ ಸ್ವಾಗತಿಸಿದರೆ,ರಾಷ್ಟ್ರೀಯ ಸಂಘಟನಾ ವಿಭಾಗದ ಕನ್ವೀನರ್ ಮಿರ್ಶಾದ್ ಕನ್ಯಾನ ವಂದಿಸಿದರು.