janadhvani

Kannada Online News Paper

ಪಾಸ್‌ಪೋರ್ಟ್ ಕವರ್ ನಲ್ಲಿ ಸ್ಟಿಕ್ಕರ್‌ಗಳನ್ನು ಅಂಟಿಸಬಾರದು- ಇಂಡಿಯನ್ ಕಾನ್ಸುಲೇಟ್

ಇದು ಪಾಸ್‌ಪೋರ್ಟ್ ಸಂಬಂಧಿತ, ಭಾರತ ಸರ್ಕಾರ ಹೊರಡಿಸಿದ ನಿರ್ದೇಶನಗಳಿಗೆ ವಿರುದ್ಧವಾಗಿದೆ.

ದುಬೈ: ಪಾಸ್‌ಪೋರ್ಟ್‌ನಲ್ಲಿ ಜಾಹೀರಾತು ಸ್ಟಿಕ್ಕರ್‌ಗಳನ್ನು ಅಂಟಿಸುವುದರ ವಿರುದ್ಧ ದುಬೈನಲ್ಲಿರುವ ಭಾರತೀಯ ಕಾನ್ಸುಲೇಟ್ ವಿಶೇಷ ನಿರ್ದೇಶನ ನೀಡಿದೆ. ಈ ಕುರಿತು ಟ್ವಿಟರ್‌ನಲ್ಲಿ ಘೋಷಣೆ ಮಾಡಲಾಗಿದೆ. ಪಾಸ್‌ಪೋರ್ಟ್‌ ಕವರ್ಗಳನ್ನು ವಿಕೃತಗೊಳಿಸಲು ಅವಕಾಶ ನೀಡಬಾರದು ಎಂದೂ ಅದು ಒತ್ತಾಯಿಸಿದೆ.

ಅನೇಕ ಟ್ರಾವೆಲ್ ಏಜೆಂಟ್‌ಗಳು ಭಾರತೀಯ ಪಾಸ್‌ಪೋರ್ಟ್‌ಗಳನ್ನು ತಮ್ಮ ಜಾಹೀರಾತುಗಳನ್ನು ಪ್ರಚಾರಪಡಿಸುವ ವಸ್ತುವಾಗಿ ಬಳಸುತ್ತಿರುವುದಾಗಿ ಕಾನ್ಸುಲೇಟ್ ಆರೋಪಿಸಿದೆ.ಕೆಲವು ಕಂಪೆನಿಗಳು ತಮ್ಮ ಸ್ಟಿಕ್ಕರ್‌ಗಳನ್ನು ಅಂಟಿಸುವ ಮೂಲಕ ಪಾಸ್‌ಪೋರ್ಟ್‌ಗಳ ಕವರ್ ಅನ್ನು ವಿರೂಪಗೊಳಿಸುತ್ತಿದ್ದಾರೆ. ಇದು ಪಾಸ್‌ಪೋರ್ಟ್ ಸಂಬಂಧಿತ, ಭಾರತ ಸರ್ಕಾರ ಹೊರಡಿಸಿದ ನಿರ್ದೇಶನಗಳಿಗೆ ವಿರುದ್ಧವಾಗಿದೆ.

ಆದ್ದರಿಂದ,ಭಾರತೀಯ ಪಾಸ್‌ಪೋರ್ಟ್ ಹೊಂದಿರುವ ಎಲ್ಲರೂ ತಮ್ಮ ಪಾಸ್‌ಪೋರ್ಟ್‌ಗಳನ್ನು ಟ್ರಾವೆಲ್ ಏಜೆಂಟ್‌ಗಳು ಅಥವಾ ಬೇರೆಯವರು ಹಾಳು ಮಾಡದಂತೆ ನೋಡಿಕೊಳ್ಳಬೇಕು ಎಂದು ಕಾನ್ಸುಲೇಟ್ ನೆನಪಿಸಿದೆ.

error: Content is protected !! Not allowed copy content from janadhvani.com