janadhvani

Kannada Online News Paper

ಬೆಂಗಳೂರು: ನಾಳೆಯಿಂದ ರಂಜಾನ್ ಉಪವಾಸ ಆರಂಭ-ಶಾಫಿ ಸಅದಿ

ಕರಾವಳಿ ಜಿಲ್ಲೆಗಳಲ್ಲಿ ಚಂದ್ರ ದರ್ಶನದ ಮಾಹಿತಿ ಲಭ್ಯವಾಗಿಲ್ಲ

ಬೆಂಗಳೂರು,ಏ.2: ಚಂದ್ರದರ್ಶನ ಹಿನ್ನೆಲೆಯಲ್ಲಿ ರಾಜ್ಯದ ಬೆಂಗಳೂರಿನಲ್ಲಿ (ಏ.3)ನಾಳೆಯಿಂದ ರಂಜಾನ್ ಉಪವಾಸ ಆರಂಭಗೊಳ್ಳಲಿದೆ.

ಈ ಬಗ್ಗೆ ಮಾಹಿತಿ ನೀಡೀರುವ ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷರಾದ ಶಾಫಿ ಸಅದಿಯವರು, ಏಪ್ರಿಲ್ 3 ರಂದು ರಂಜಾನ್ ತಿಂಗಳ ಪ್ರಥಮ ದಿನವಾಗಿದ್ದು, ಕಡ್ಡಾಯ ವೃತವನ್ನು ನಾಳೆಯಿಂದ ಆರಂಭಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಕರಾವಳಿ ಜಿಲ್ಲೆಗಳಲ್ಲೂ ನಾಳೆಯಿಂದ ಉಪವಾಸ ಆರಂಭ

ಮಂಗಳೂರು,ಏ.2: ಇಂದು ( ಶನಿವಾರ ಅಸ್ತ ಆದಿತ್ಯವಾರ ) ರಾತ್ರಿ ಚಂದ್ರ ದರ್ಶನವಾದ ಹಿನ್ನೆಲೆಯಲ್ಲಿ 03 – 04 – 2022 ಆದಿತ್ಯವಾರದಿಂದ ( ನಾಳೆಯಿಂದ ) ರಮಳಾನ್ ಉಪವಾಸ ಪ್ರಾರಂಭವಾಗಿರುತ್ತದೆ ಎಂದು ಉಳ್ಳಾಲ ಹಾಗು ದ.ಕ ಜಿಲ್ಲೆಯ ಹಲವು ಮೊಹಲ್ಲಾಗಳ ಖಾಝಿ ಗೌರವಾನ್ವಿತ ಖುರ್ರತುಸ್ಸಾದಾತ್ ಅಸ್ಸಯ್ಯಿದ್ ಫಝಲ್ ಕೋಯಮ್ಮ ಮದನಿ ಅಲ್ ಬುಖಾರಿ ಕೂರತ್ ತಂಗಳ್ ಪ್ರಕಟಣೆ ಯಲ್ಲಿ ತಿಳಿಸಿರುತ್ತಾರೆ.

ಅದೇ ರೀತಿ ಮಂಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಹಲವು ಮೊಹಲ್ಲಾಗಳ ಖಾಝಿಯವರಾದ ಶೈಖುನಾ ಅಲ್-ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ರವರು ನಾಳೆ ರಂಜಾನ್ ಉಪವಾಸವೆಂದು ಘೋಷಿಸಿದ್ದಾರೆ.

ಆದಿತ್ಯವಾರ ಉಪವಾಸ ಆಚರಿಸುವುದಾಗಿ ಉಡುಪಿ, ಚಿಕ್ಕಮಗಳೂರು, ಹಾಗೂ ಹಾಸನ ಜಿಲ್ಲೆಗಳ ಸಂಯುಕ್ತ ಜಮಾಅತ್ ಖಾಝಿ ಎಂ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ತಿಳಿಸಿದ್ದಾರೆ.

error: Content is protected !! Not allowed copy content from janadhvani.com