ಮಂಗಳೂರು: ಪ್ರಜಾಪ್ರಭುತ್ವ ದೇಶದಲ್ಲಿ, ಪ್ರಜೆಗಳು ನಿರ್ಧಿಷ್ಟ ಭಕ್ಷಣ ಸೇವಿಸಬೇಕು, ನಿರ್ಧಿಷ್ಟ ಉಡುಪು ಧರಿಸಬೇಕು, ನಿರ್ಧಿಷ್ಟ ರೀತಿಯಲ್ಲಿಯೇ ಆಹಾರ ತಯಾರಿ ನಡೆಸಬೇಕು ಎಂದು ಫರ್ಮಾನು ಹೊರಡಿಸಲು ನಾವು ಕೊಲೊನಿಯಲ್ ಸಾಮ್ರಾಜ್ಯದಲ್ಲಿ ಜೀವಿಸುತ್ತಿಲ್ಲ.
ವಿವಿಧತೆ ಯಲ್ಲಿ ಏಕತೆ ಪ್ರತಿಪಾದಿಸಿದ ಡಾ.ಅಂಬೇಡ್ಕರ್, ನಾರಾಯಣ ಗುರು ಸ್ವಾಮಿ, ಸ್ವಾಮಿ ವಿವೇಕಾನಂದರು, ಬಸವಣ್ಣ, ತಿರುವಳ್ಳುವರ್, ಮಹಾತ್ಮ ಜ್ಯೋತಿ ಭಾಪುಳೆ , ಮಹಾತ್ಮ ಗಾಂಧಿ, ದೇವರಾಜ ಅರಸು ಅವರಂತಹ ಸಾಮಾಜಿಕ ಹೋರಾಟಗಾರರು ಜೀವಿಸಿದ ನೆಲದಲ್ಲಿ ಬದುಕುತ್ತಿದ್ದೇವೆ. ಭಾರತದ ಮೂಲ ನಿವಾಸಿಗಳು ನಿಸರ್ಗ ಲಭ್ಯ ಆಹಾರ ಸೇವಿಸಿ ಉತ್ತಮ ನಾಗರಿಕ ಬದುಕು ರೂಪಿಸಲು ನಮಗೆ ಕಲಿಸಿ ಕೊಟ್ಟಿದ್ದಾರೆ. ಜನರು ಹಸಿವು ನೀಗಿಸಲು ಯಾವ ಆಹಾರ , ಹೇಗೆ ತಯಾರಿಸಬೇಕು ಎಂದು ಆರ್ಯರಿಂದ ಕಲಿತು ಕೊಳ್ಳುವ ಗತಿಗೇಡು ನಾಡಿನ ಮಣ್ಣಿನ ನಾಗರಿಕರಿಗೆ ಬರಲಿಲ್ಲ.
ಆದುದರಿಂದ ಭಾರತದ ಮುಸ್ಲಿಮರು ಹುಟ್ಟಿನಿಂದ ಸಾಯುವವರೆಗೆ ಹಲಾಲ್ ಗೊಳಿಸಿದ ಶುದ್ಧ ಆಹಾರ, ಮಾಂಸ, ಕೋಳಿ, ಕೋಣಗಳನ್ನು ಭಕ್ಷಿಸಲಿದ್ದಾರೆ. ಮತ್ತು ತಮ್ಮ ಆರೋಗ್ಯವನ್ನು ಸಮರ್ಥವಾಗಿ ಸಂರಕ್ಷಿಸಲು ಬದ್ಧರು. ಈ ಬಗ್ಗೆ ಇತರರು ಚಿಂತಿಸುವ ಅಗತ್ಯವಿಲ್ಲ. ಮುಸ್ಲಿಮರ ಆಹಾರ ಪದ್ಧತಿಯನ್ನು ಇತರರು ನಿರ್ಧರಿಸುವ ವ್ಯರ್ಥ ಹೊಣೆಗಾರಿಕೆ ಕೂಡಾ ಇತರರಿಗೆ ಅಗತ್ಯ ವಿಲ್ಲ.
ಕೆ.ಅಶ್ರಫ್.
ಅಧ್ಯಕ್ಷರು.ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ.
















ಇನ್ನಷ್ಟು ಸುದ್ದಿಗಳು
ಮಂಗಳೂರಿನ MRPL ಘಟಕದಲ್ಲಿ ಭಾರೀ ಸ್ಫೋಟ: ದಟ್ಟ ಹೊಗೆ, ಸುತ್ತಮುತ್ತಲಿನ ಮನೆಗಳಿಗೆ ಹಾನಿ- ಹಲವರಿಗೆ ಗಾಯ
ಅಣು-ವಿಕಿರಣ ಸೋರಿಕೆಯಾದರೆ ಏನು ಮಾಡಬೇಕು?; ಜಾಗರೂಕತೆಯ ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಿದ CDAA
ಗಂಟೆಗಟ್ಟಲೆ ರೀಲ್ಸ್ ಸ್ಕ್ರೋಲಿಂಗ್- ದೇಹದ ಮೇಲೆ ಪರಿಣಾಮ!
ಒಮಾನ್:ಕಾರ್ಮಿಕ ಕಾಯ್ದೆ ಉಲ್ಲಂಘನೆ ವಿರುದ್ಧ ಕಠಿಣ ಕ್ರಮ- ಫೀಲ್ಡ್ ತಪಾಸಣೆಗೆ ಮುಂದಾದ ಕಾರ್ಮಿಕ ಸಚಿವಾಲಯ
ರಸ್ತೆ ಬದಿಯ ಪೈಪ್ ಸರಿಪಡಿಸಿದ ಭಾರತೀಯ ಡೆಲಿವರಿ ಯುವಕ – ದುಬೈ ಸರ್ಕಾರದ ಗೌರವ
ಸಪ್ಟೆಂಬರ್-17 : ಉಪ್ಪಿನಂಗಡಿಯಲ್ಲಿ ಬೃಹತ್ ಮೀಲಾದ್ ರ್ಯಾಲಿ ಹಾಗೂ ಕಾನ್ಫರೆನ್ಸ್
SIR ನೋಟೀಸ್ ಗೊಂದಲ: ಅನಿವಾಸಿ ಭಾರತೀಯರಿಗೆ ಶೀಘ್ರದಲ್ಲೇ ಪರಿಹಾರ- ಉಸ್ತುವಾರಿ ಸಚಿವರಿಂದ ಭರವಸೆ
ಕಿನ್ಯದಲ್ಲಿ ಹಬ್ಬಗಳ ಮೂಲಕ ಗಟ್ಟಿಯಾದ ಸೌಹಾರ್ದದ ಬಂಧ
ಬೆಸ್ಟ್ ಫ್ರೆಂಡ್ಸ್ ಚಾರಿಟಬಲ್ ಟ್ರಸ್ಟ್: ಶುದ್ಧ ಕುಡಿಯುವ ನೀರಿನ ವಾಟರ್ ಡಿಸ್ಪೆನ್ಸರ್ ವಿತರಣೆ
ಧರ್ಮವನ್ನು ವ್ಯಾಖ್ಯಾನಿಸುವುದಲ್ಲ ರಾಜ್ಯದ ಕರ್ತವ್ಯ, ಆಡಳಿತ ನಡೆಸುವತ್ತ ಗಮನ ಕೊಡಿ- ವಿ.ಡಿ.ಸತೀಶನ್ ವಿರುದ್ಧ ಎಸ್ಎಸ್ಎಫ್