janadhvani

Kannada Online News Paper

ಮುಸ್ಲಿಮ್ ರಾಷ್ಟ್ರಗಳಲ್ಲಿ ಮಸೀದಿ ಬಳಿ ಹಿಂದೂ ವ್ಯಾಪಾರಿಗಳಿಗೆ ನಿರ್ಬಂಧವಿಲ್ಲ- ಶೈಖಾ ಹಿಂದ್ ಅಲ್ ಖಾಸಿಮಿ

ಅವರು ಕೆಲವು ಮುಸ್ಲಿಮ್ ರಾಷ್ಟ್ರಗಳಲ್ಲಿ ವಾಸಿಸುವ ಹಿಂದೂಗಳ ಸಂಖ್ಯೆಯನ್ನು ಅಂಕಿ ಅಂಶಗಳೊಂದಿಗೆ ಬಹಿರಂಗಪಡಿಸಿದ್ದಾರೆ.

ಶಾರ್ಜಾ: ಭಾರತದಲ್ಲಿ ಮುಸ್ಲಿಮ್ ಅಲ್ಪಸಂಖ್ಯಾತರನ್ನು ಗುರಿಯಾಗಿಸಿ ಸಂಘಪರಿವಾರ ನಡೆಸುತ್ತಿರುವ ಅಕ್ರಮ ವಿರುದ್ಧ ಸದಾ ಧ್ವನಿ ಎತ್ತುತ್ತಿರುವ ಶಾರ್ಜಾ ರಾಜ ಮನೆತನದ ರಾಜಕುಮಾರಿ ಶೈಖಾ ಹಿಂದ್ ಫೈಸಲ್ ಅಲ್ ಖಾಸಿಮಿ ಅವರು ಕರ್ನಾಟಕದಲ್ಲಿ ದೇವಸ್ಥಾನಗಳ ಬಳಿ ಮುಸ್ಲಿಂ ವ್ಯಾಪಾರಿಗಳಿಗೆ ನಿಷೇಧ ಹೇರುತ್ತಿರುವ ವಿಚಾರದಲ್ಲಿ ಟ್ವೀಟ್ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಮುಸ್ಲಿಮ್ ರಾಷ್ಟ್ರಗಳಲ್ಲಿ ಅಸಂಖ್ಯಾತ ಹಿಂದೂ ಬಾಂಧವರು ಮಸೀದಿ ಬಳಿಯಲ್ಲಿ ವ್ಯಾಪಾರ ವಹಿವಾಟು ನಡೆಸುತ್ತಿದ್ದಾರೆ. ಅವರನ್ನು ಯಾರೂ ಇದುವರೆಗೆ ತಡೆದಿಲ್ಲ’ ಎಂದು ಟ್ವೀಟ್ ಮೂಲಕ ಎಚ್ಚರಿಸಿದ ಅವರು, ಕೆಲವು ಮುಸ್ಲಿಮ್ ರಾಷ್ಟ್ರಗಳಲ್ಲಿ ವಾಸಿಸುವ ಹಿಂದೂಗಳ ಸಂಖ್ಯೆಯನ್ನು ಅಂಕಿ ಅಂಶಗಳೊಂದಿಗೆ ಬಹಿರಂಗಪಡಿಸಿದ್ದಾರೆ.

ಕೆಲವು ಮುಸ್ಲಿಂ ರಾಷ್ಟ್ರಗಳಲ್ಲಿ ವಾಸಿಸುವ ಹಿಂದೂಗಳ ಸಂಖ್ಯೆ ಇಂತಿವೆ:

1.ಇಂಡೋನೇಷ್ಯಾ- 4, 480,000, 2.ಮಲೇಷ್ಯಾ- 2, 040,000, 3.UAE- 9, 10,000, 4.ಕತಾರ್-3, 60,000, 5.ಬಹ್ರೇನ್-2, 40,000, 6.ಕುವೈತ್-6, 30,000, 7.ಓಮನ್-6, 50,000, 8.ಸೌದಿ -3, 70,000.

ಈ ಮೇಲಿನ ಯಾವುದೇ ರಾಷ್ಟ್ರಗಳಲ್ಲಿರುವ ಹಿಂದೂಗಳಿಗೆ ಮಸೀದಿ ಆವರಣದಲ್ಲಿ ವ್ಯಾಪಾರ ಮಾಡುವುದನ್ನು ಇದುವರೆಗೂ ನಿರ್ಬಂಧ ವಿಧಿಸಿಲ್ಲ ಎಂದು ಅವರು ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದಾರೆ. ಅವರ ಟ್ವೀಟ್ ಇದೀಗ ಅಂತಾರಾಷ್ಟ್ರೀಯ ಮಟ್ಟದ ಚರ್ಚೆಗೆ ಎಡೆಮಾಡಿ ಕೊಟ್ಟಿದೆ.

error: Content is protected !! Not allowed copy content from janadhvani.com