ಬೆಂಗಳೂರು, ಡಿಸೆಂಬರ್ 6: ಪಾನ್ ಕಾರ್ಡ್, ಆಧಾರ್ ಕಾರ್ಡ್ ಪಡೆದು ಸಾರ್ವಜನಿಕರ ಹೆಸರಿನಲ್ಲಿ ವಾಹನಗಳನ್ನು ಖರೀದಿ ಮಾಡಿ ವಂಚಿಸುವ ಜಾಲ ಪತ್ತೆಯಾಗಿದ್ದು, ನಗರದಲ್ಲಿ ಶುರುವಾಗಿರುವ ವಿಚಿತ್ರ ರೀತಿಯ ದೋಖಾಕ್ಕೆ ಸಾರ್ವಜನಿಕರು ಕಂಗಲಾಗಿದ್ದಾರೆ. ನಯೀಮ್ ತಾಜ್ ಈ ದೋಖಾಕ್ಕೆ ಒಳಗಾದ ವ್ಯಕ್ತಿ.
ಏನಿದು ಘಟನೆ?
ಖದೀಮರು ಚೈನ್ ಲಿಂಕ್ ಸ್ಕೀಮ್ ಇದೆ ಎಂದು ನಂಬಿಸಿ ನಯೀಮ್ ತಾಜ್ ಅವರಿಂದ ಆಧಾರ್ ಕಾರ್ಡ್ ಹಾಗೂ ಪಾನ್ ಕಾರ್ಡ್ ಪಡೆದು ಪುಲಕೇಶಿನಗರದ ಸಂಗೀತಾ ಶೋ ರೂಂ ನಲ್ಲಿ ಸದಸ್ಯರಾಗಿದ್ದೀರಿ ಎಂದು ಹೇಳಿ ಸಾವಿರ ರೂಪಾಯಿ ನೀಡಿದ್ದರು. ನಂತರ ಖದೀಮರು ಇನ್ನಷ್ಟು ಜನರನ್ನ ಸೇರಿಸಿದ್ರೆ ನಿಮಗೆ ಇದೆ ರೀತಿ ಹಣ ಬರುತ್ತೆ ಎಂದಿದ್ದರು. ಹಣದ ಆಸೆಗೆ ಒಳಗಾದ ನಜೀಮ್ ಇಪ್ಪತ್ತೈದು ಜನರನ್ನು ಈ ಹೊಸ ಸ್ಕಿಮ್ಗೆ ಸೇರಿಸಿದ್ದರು. ಇವರೆಲ್ಲರೂ ತಮ್ಮ ಅಧಾರ್ ಕಾರ್ಡ್ ಹಾಗೂ ಪಾನ್ ಕಾರ್ಡ್ಗಳನ್ನ ನಜೀಮ್ ಅವರಿಗೆ ನೀಡಿದ್ದರು.
ಇವೆಲ್ಲಾ ಆದ ಮೇಲೆ ಬ್ಯಾಂಕಿನವರು ನೀವು ವಾಹನ ಖರೀದಿ ಮಾಡಿದ್ದಿರಿ, ತಿಂಗಳ ಇಎಂಐ ಪಾವತಿಸಬೇಕು ಎಂದು ಕರೆ ಮಾಡಿದ್ದರು. ಯಾವುದೇ ವಾಹನ ಖರೀದಿ ಮಾಡದವರಿಗೆ ಇದೆಂತಹ ಇಎಂಐ ಎಂದು ವಿಚಾರಿಸಿದಾಗ ಈ ಖದೀಮರು ಸಾರ್ವಜನಿಕರಿಂದ ಪಡೆದ ದಾಖಲೆಗಳನ್ನು ಉಪಯೋಗಿಸಿ ಇಎಂಐನಲ್ಲಿ ವಾಹನಗಳ ಖರೀದಿ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ. ತಕ್ಷಣವೇ ಸಾರ್ವಜನಿಕರು ಪುಲಿಕೇಶಿನಗರ ಠಾಣಾ ಪೊಲೀಸರಿಗೆ ದೂರು ನೀಡಿದ್ದರು.
ಇದೀಗ ಪೊಲೀಸರು ಸಾರ್ವಜನಿಕರ ದೂರಿನನ್ವಯ ಮಹಮ್ಮದ್ ಜೈನ್, ಲೋಕೇಶ್, ಕಾರ್ತಿಕ್ , ಮುಜಾಹಿದ್ ಹಫೀಜ್ , ಮನ್ಸೂರ್, ಎಂಬುವರ ಮೇಲೆ ಎಫ್ ಐ ಆರ್ ದಾಖಲು ಮಾಡಿದ್ದು, ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
















ಇನ್ನಷ್ಟು ಸುದ್ದಿಗಳು
ಸಪ್ಟೆಂಬರ್-17 : ಉಪ್ಪಿನಂಗಡಿಯಲ್ಲಿ ಬೃಹತ್ ಮೀಲಾದ್ ರ್ಯಾಲಿ ಹಾಗೂ ಕಾನ್ಫರೆನ್ಸ್
SIR ನೋಟೀಸ್ ಗೊಂದಲ: ಅನಿವಾಸಿ ಭಾರತೀಯರಿಗೆ ಶೀಘ್ರದಲ್ಲೇ ಪರಿಹಾರ- ಉಸ್ತುವಾರಿ ಸಚಿವರಿಂದ ಭರವಸೆ
ಕಿನ್ಯದಲ್ಲಿ ಹಬ್ಬಗಳ ಮೂಲಕ ಗಟ್ಟಿಯಾದ ಸೌಹಾರ್ದದ ಬಂಧ
ಬೆಸ್ಟ್ ಫ್ರೆಂಡ್ಸ್ ಚಾರಿಟಬಲ್ ಟ್ರಸ್ಟ್: ಶುದ್ಧ ಕುಡಿಯುವ ನೀರಿನ ವಾಟರ್ ಡಿಸ್ಪೆನ್ಸರ್ ವಿತರಣೆ
ಧರ್ಮವನ್ನು ವ್ಯಾಖ್ಯಾನಿಸುವುದಲ್ಲ ರಾಜ್ಯದ ಕರ್ತವ್ಯ, ಆಡಳಿತ ನಡೆಸುವತ್ತ ಗಮನ ಕೊಡಿ- ವಿ.ಡಿ.ಸತೀಶನ್ ವಿರುದ್ಧ ಎಸ್ಎಸ್ಎಫ್
ಇಸ್ಲಾಂ ವಿರೋಧಿ ಹೇಳಿಕೆಯನ್ನು ಮುಖ್ಯಮಂತ್ರಿ ಹಿಂಪಡೆಯಬೇಕು- ಕೇರಳ ಮುಸ್ಲಿಂ ಜಮಾಅತ್
ಎಸ್ಸೆಸ್ಸೆಫ್ ರಾಜ್ಯ ಮಟ್ಟದ ಸಾಹಿತ್ಯೋತ್ಸವ- ಹೂವಿನಹಡಗಲಿಯಲ್ಲಿ
ಸ್ಕಾಯ್ ಕರಾಟೆಯಲ್ಲಿ ಫಾತಿಮತ್ ರಿಫಾತ್ಗೆ ಚಿನ್ನದ ಪದಕ
ಶೈಖ್ ಅಬೂಬಕ್ಕರ್ ಅಹ್ಮದ್ ಮುಸ್ಲಿಯಾರ್- ಜಗತ್ತು ಕಂಡ ಆಧುನಿಕ ದಾರ್ಶನಿಕ ನಾಯಕ
ಸೌಹಾರ್ದ ಹಾಗೂ ಸಾಮರಸ್ಯದ ಸಂಗಮಕ್ಕೆ ಸಾಕ್ಷಿಯಾದ ಬಳಕುಂಜೆ