janadhvani

Kannada Online News Paper

ಇಂಡಿಯನ್ ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎ.ಪಿ ಉಸ್ತಾದರಿಗೆ ಶಾಂತಿ ಪ್ರಶಸ್ತಿ

ಜಾಗತಿಕವಾಗಿ ಶಾಂತಿ ಕಾಪಾಡುವಲ್ಲಿ, ಕಾಂತಪುರಂ ಎ.ಪಿ.ಅಬೂಬಕರ್ ಮುಸ್ಲಿಯಾರ್ ನೀಡಿದ ಕೊಡುಗೆಗಾಗಿ ಅವರನ್ನು ಶಾಂತಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಅಬುಧಾಬಿ | ಇಂಡಿಯನ್ ಗ್ರ್ಯಾಂಡ್ ಮುಫ್ತಿ(Indian Grand Mufthi) ಕಾಂತಪುರಂ ಎಪಿ ಅಬೂಬಕರ್ ಮುಸ್ಲಿಯಾರ್ ಅವರಿಗೆ ಶಾಂತಿ ಪ್ರಶಸ್ತಿ ಲಭಿಸಿದೆ.

ಫೋರಂ ಫಾರ್ ಪ್ರೊಮೋಟಿಂಗ್ ಪೀಸ್ ಇನ್ ಮುಸ್ಲಿಂ ಸೊಸೈಟಿಸ್(ಮುಸ್ಲಿಂ ಸಮಾಜಗಳಲ್ಲಿ ಶಾಂತಿಯನ್ನು ಉತ್ತೇಜಿಸುವ ವೇದಿಕೆಯ) ಅಧ್ಯಕ್ಷ ಮತ್ತು ಪ್ರಧಾನ ಕಾರ್ಯದರ್ಶಿ ಶೈಖ್ ಅಬ್ದುಲ್ಲಾಹ್ ಬಿನ್ ಬಯ್ಯ ಅವರು ಅಬುಧಾಬಿಯಲ್ಲಿ ನಡೆದ 8 ನೇ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಕಾಂತಪುರಂಗೆ ಶಾಂತಿ ಪ್ರಶಸ್ತಿಯನ್ನು ನೀಡಿದರು.

ಜಾಗತಿಕವಾಗಿ ಶಾಂತಿ ಕಾಪಾಡುವಲ್ಲಿ, ಕಾಂತಪುರಂ ಎ.ಪಿ.ಅಬೂಬಕರ್ ಮುಸ್ಲಿಯಾರ್ ನೀಡಿದ ಕೊಡುಗೆಗಾಗಿ ಅವರನ್ನು ಶಾಂತಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾಂತಪುರಂ ಅವರು, ಇಂದು ಮುಕ್ತಾಯಗೊಳ್ಳಲಿರುವ ಮೂರು ದಿನಗಳ ಅಂತಾರಾಷ್ಟ್ರೀಯ ಸಮ್ಮೇಳನದ ಮೊದಲ ಅಧಿವೇಶನದಲ್ಲಿ ‘ಜಾಗತಿಕ ಪೌರತ್ವ ನಿರ್ಮಾಣದ ಅಡಿಪಾಯ’ ಕುರಿತು ಮಾತನಾಡಲಿದ್ದಾರೆ.

ಕಳೆದ ಎರಡು ದಿನಗಳಿಂದ ವಿವಿಧ ಅಂತಾರಾಷ್ಟ್ರೀಯ ಸಮುದಾಯಗಳ ಸಹಯೋಗದಲ್ಲಿ ನಡೆಸಲಾದ ಸಮ್ಮೇಳನದಲ್ಲಿ, ಸಯೀದ್ ಇಬ್ರಾಹಿಂ ಶೈಬಿ, ಬಹ್ರೇನ್ ಸುನ್ನಿ ವಕ್ಫ್ ನ ನಿರ್ದೇಶಕ ಡಾ. ರಾಶಿದ್ ಬಿನ್ ಮೊಹಮ್ಮದ್ ಅಲ್ ಹಾಜಿರಿ, ಪಾಕಿಸ್ತಾನದ ಧಾರ್ಮಿಕ ವ್ಯವಹಾರಗಳ ಸಚಿವ; ನೂರುಲ್ ಹಕ್ ಅಲ್ ಖಾದಿರಿ ಸೇರಿದಂತೆ ಪ್ರಪಂಚದಾದ್ಯಂತದ 200 ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸುತ್ತಿದ್ದಾರೆ.

ಯುಎಇಯ ವಿದೇಶಾಂಗ ವ್ಯವಹಾರಗಳ ಸಚಿವ ಶೈಖ್ ಅಬ್ದುಲ್ಲಾಹ್ ಬಿನ್ ಝಾಯಿದ್ ಆಲ್ ನಹ್ಯಾನ್ ಮತ್ತು ಯುಎಇಯ ಫತ್ವಾ ಕೌನ್ಸಿಲ್ ಮುಖ್ಯಸ್ಥ ಶೈಖ್ ಅಬ್ದುಲ್ಲಾಹ್ ಬಿನ್ ಬಯ್ಯ ಅವರ ನೇತೃತ್ವದಲ್ಲಿ ಸಮ್ಮೇಳನ ನಡೆಯುತ್ತಿದೆ.

error: Content is protected !! Not allowed copy content from janadhvani.com