“ಸ್ವಸ್ಥ ಜಗತ್ತಿನ ಪ್ರವಾದಿ” ಎಂಬ ಘೋಷ ವಾಕ್ಯದಡಿಯಲ್ಲಿ ಕೆ.ಸಿ.ಎಫ್ ಬಹರೈನ್ ರಾಷ್ಟ್ರೀಯ ಸಮಿತಿ ವತಿಯಿಂದ ಇಶ್ಕೇ ರಸೂಲ್ (ﷺ) ಮೀಲಾದ್ ಕಾನ್ಫರೆನ್ಸ್-2021 ಝೂಮ್ ಮೂಲಕ ಅಕ್ಟೋಬರ್ 08 ಬಹಳ ಯಶಸ್ವಿಯಾಗಿ ನಡೆಸಲಾಯಿತು.
ರಾಷ್ಟ್ರೀಯ ಸಮಿತಿ ಅದ್ಯಕ್ಷರಾದ ವಿಟ್ಟಲ್ ಜಮಾಲುದ್ದೀನ್ ರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಕೆಸಿಎಫ್ ಅಂತರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಡಾ| ಶೇಖ್ ಬಾವ ಮಂಗಳೂರು ರವರು ಉದ್ಘಾಟನೆ ಮಾಡಿದರು.
ಸಮಾರಂಭದಲ್ಲಿ ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಉಪಾಧ್ಯಕ್ಷರಾದ ಅಸ್ಸಯ್ಯಿದ್ ಅಲೀ ಬಾಫಖಿ ತಂಙಳ್ ರವರು ದುಆಶಿರ್ವಚನ ಮಾಡಿದರು.
ಮದನೀಯಂ ಕಾರ್ಯಕ್ರಮದ ಮೂಲಕ ಜನ ಸಾಗರದ ಮನ ಗೆದ್ದ ಅಬುಲ್ಲತೀಫ್ ಸಖಾಫಿ ಕಾಂತಪುರಂ ರವರು ಮುಖ್ಯ ಪ್ರಭಾಷಣ ಮಾಡಿದರು. ಸತ್ಯ ವಿಶ್ವಾಸಿಗಳ ಪಾಲಿಗೆ ಮದೀನಾ ಅಭಯ ಕೇಂದ್ರವಾಗಿದೆ, ಲೋಕ ಪ್ರವಾದಿ ಮುಹಮ್ಮದ್ ಮುಸ್ತಫಾ (ﷺ) ರವರ ಚರ್ಯೆಯನ್ನು ಪಾಲಿಸುವುದೇ ನಮ್ಮ ಇಹ ಪರ ವಿಜಯಕ್ಕೆ ದಾರಿಯಾಗಿದೆ ಎಂಬುದನ್ನು ಮುಖ್ಯ ಪ್ರಭಾಷಣದಲ್ಲಿ ನೆನಪಿಸಿದರು.
ಕೆ.ಸಿ.ಎಫ್ ಬಹರೈನ್ ನೋರ್ತ್ ಝೋನ್ ಅಧ್ಯಕ್ಷರಾದ ಸಿದ್ದೀಕ್ ಮುಸ್ಲಿಯಾರ್ ಮಂಜನಾಡಿಯವರ ದುಆದೊಂದಿಗೆ ಪ್ರಾರಂಭಗೊಂಡ ಸಮಾರಂಭದಲ್ಲಿ, ದರ್ವೆಶ್ ಮುಹಮ್ಮದ್ ಅಲಿ ಖಿರಾಅತ್ ಪಠಿಸಿದರು.
ಬಹರೈನ್ ಐಸಿಎಫ್ ಅಧ್ಯಕ್ಷರಾದ ಝೈನುದ್ದೀನ್ ಸಖಾಫಿ, ಕೆಸಿಎಫ್ ಅಂತರಾಷ್ಟ್ರೀಯ ಸಮಿತಿ ಕೌನ್ಸಿಲರ್ ಬಶೀರ್ ಕಾರ್ಲೆ, ನೋರ್ತ್ ಝೋನ್ ಕೋಶಾಧಿಕಾರಿ ಇಬ್ರಾಹಿಂ ಸಅದಿ, ಉರ್ದು ವಿಂಗ್ ಚೇರ್ಮ್ಯಾನ್ ಗಯಾಝುದ್ದೀನ್ ಮೈಸೂರು, ಬಹರೈನ್ ಫಿಲಾಂತ್ರೊಪಿಕ್ ಸೊಸೈಟಿ ಪ್ರಧಾನ ಕಾರ್ಯದರ್ಶಿ ಡಾ| ಹಸನ್ ಕಮಾಲ್ ರವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಕೆಸಿಎಫ್ ಬಹರೈನ್ ರಾಷ್ಟ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಹಾರಿಸ್ ಸಂಪ್ಯ ಸ್ವಾಗತಿಸಿದ ಕಾರ್ಯಕ್ರಮವನ್ನು ಸಂಘಟನಾ ಇಲಾಖೆಯ ಅಧ್ಯಕ್ಷರಾದ ಕಲಂದರ್ ಮುಸ್ಲಿಯಾರ್ ನಿರೂಪಿಸಿ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಅಶ್ರಫ್ ರೆಂಜಾಡಿ ಧನ್ಯವಾದ ಹೇಳಿದರು.
















ಇನ್ನಷ್ಟು ಸುದ್ದಿಗಳು
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ
ಹೋರ್ಮುಜ್ ಮೂಲಕ ಸುರಕ್ಷಿತ ಸಾರಿಗೆ- ಪ್ರಮುಖ ಚರ್ಚೆಗಾಗಿ ಇರಾನ್ಗೆ ತಲುಪಿದ ಒಮಾನ್ ನಿಯೋಗ
ಉಮ್ರಾ ಯಾತ್ರಿಕರಿಗೆ ಸಿಹಿ ಸುದ್ದಿ: ಒಂದು ವರ್ಷ ಕಾಲಾವಧಿಯ ‘ಮಲ್ಟಿ ಎಂಟ್ರಿ’ ಉಮ್ರಾ ವೀಸಾ ಬಿಡುಗಡೆ
ಭಾರತದ ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ: ಟಿಕೆಟ್ ದರಕ್ಕೆ ಮಾಸಿಕ ಕಂತಿನ ಸೌಲಭ್ಯ
ನಿಖರವಲ್ಲದ ಸುದ್ದಿ ಹಂಚಿಕೊಂಡರೆ ಅಪಾಯ- ನಕಲಿ ಸುದ್ದಿಗಳ ವಿರುದ್ಧ ಸೌದಿಯಲ್ಲಿ ಎಚ್ಚರಿಕೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
ಅಂತಾರಾಷ್ಟ್ರೀಯ ಸರ್ವೀಸ್ಗಳಲ್ಲಿ ದರ ಕಡಿತ – ಏರ್ ಇಂಡಿಯಾ ಎಕ್ಸ್ಪ್ರೆಸ್ ಘೋಷಣೆ