ಕುವೈತ್: (ಜನಧ್ವನಿ ವಾರ್ತೆ) ಕುವೈತ್ ಸುನ್ನತ್ ಜಮಾತಿನ ಹರಿಕಾರ ಲೋಕ ಪ್ರಶಸ್ತ ಪಂಡಿತರೂ,ಕುವೈತ್ ಪಾರ್ಲಿಮೆಂಟಿನ ಮಾಜಿ ಮಂತ್ರಿಗಳು ಆದ *ಸೈಯದ್ ಯೂಸುಫ್ ಹಾಶಿಮ್ ರಿಫಾಯಿ ತಂಙಳ್*
ಅರಬೀ ನಾಡಿನಲ್ಲಿ ಸುನ್ನತ್ ಜಮಾತ್ ಗಾಗಿ ರಾತ್ರಿ ಹಗಲೆನ್ನದೆ ದುಡಿದ ಪಂಡಿತ ಜ್ಯೋತಿ,ಅಪತ್ಕಾಲದಲ್ಲಿ ನೆರವು ನೀಡಿ ಬದುಕಿನಲ್ಲಿ ಸುನ್ನತ್ ಜಮಾತಿನ ಆಶಯಗಳನ್ನು ಕುವೈತ್ ನಲ್ಲಿ ಪ್ರಜ್ವಲಿಸಿದ ಮಹಾ ಪಂಡಿತರಾಗಿದ್ದಾರೆ. ಸುನ್ನತ್ ಜಮಾತಿನ ಉಲಮಾಗಳನ್ನು ಅತ್ಯಂತ ಪ್ರೀತಿಯಿಂದ ಗೌರವಿಸುವ ಇವರು ಊರಿನಲ್ಲಿ ಆನೇಕ ಸ್ಥಾಪನೆಗಳಿಗೆ ಸಹಾಯ ಹಸ್ತ ನೀಡಿದ ಮಹಾ ನೇತಾರ ನಮ್ಮೆಲ್ಲರ ಸಾರಥಿಯಾಗಿದ್ದರು.
ಕುವೈತ್ ಮನ್ಸೂರಿಯದಲ್ಲಿರುವ ಬೃಹತ್ ವಿಶಾಲವಾದ ದಿವಾನಿಯದಲ್ಲಿ ವಾರಕ್ಕೊಮ್ಮೆ ಸ್ವಲಾತ್ ಮಜ್ಲಿಸ್, ಹಾಗೂ ವರ್ಷಕೊಮ್ಮೆ ರಬ್ಬಿಲ್ ಅವ್ವಲ್ 11 ರಂದು ನಡೆಯುವ ಸಾರ್ವಜನಿಕ ಮೌಲೂದ್ ಕಾರ್ಯಕ್ರಮ ಕುವೈತ್ ನಲ್ಲಿ ಮಾದರಿಯಾಗಿದೆ.
ಇಂತಹ ಮಹಾ ಚೇತನ ಸೈಯದ್ ಯೂಸುಫ್ ಹಾಶಿಮ್ ರಿಫಾಯಿ ತಂಙಳ್ ನಿನ್ನೆ ನಮ್ಮನ್ನು ಬಿಟ್ಟು ಅಗಲಿದ್ದಾರೆ ಅಲ್ಲಾಹು ಅವರ ಸ್ಥಾನವನ್ನು ಉನ್ನತಿಗೇರಿಸಲಿ. ಪರಲೋಕ ಜೀವನ ಸಂತೋಷದಿಂದ ಕೂಡಲಿ ಆಮೀನ್.
ಇವರ ಅಗಲಿಕೆಯು ಕುವೈತ್ ನಲ್ಲಿರುವ ನಮಗೆ ತುಂಬಲಾರದ ನಷ್ಟವಾಗಿದೆ.ಕೆಸಿಎಫ್ ಕುವೈತ್ ಇದಕ್ಕೆ ವಿಷಾದ ವ್ಯಕ್ತಪಡಿಸುತ್ತದೆ.
ಇನ್ನಾಲಿಲ್ಲಾಹಿ ವ ಇನ್ನಾಇಲೈಹಿ ರಾಜಿಊನ್ ಅಲ್ಲಾಹುಮ್ಮ ಘ್ಫಿರ್ ಲಹು,
ವರ್ಹಮ್’ಹು, ವ’ಅದ್ಖಿಲ್ಹುಲ್ ಜನ್ನತ ಯಾರಬ್ಬಲ್ ಆಲಮೀನ್
Innalillah…
Innalillah