janadhvani

Kannada Online News Paper

ಗಲ್ಫ್ ಇಶಾರ ಚಂದಾದಾರ ಅಭಿಯಾನ :ಉಚಿತಾ ಉಮ್ರಾ ಯಾತ್ರೆಗೆ ಅಬ್ದುಲ್ ಖಾದರ್ ಕೊಡಿಪ್ಪಾಡಿ ಆಯ್ಕೆ

ಶಾರ್ಜಾ: ಯು.ಎ.ಇ ಕರ್ನಾಟಕ ಕಲ್ಚರಲ್ ಫೌಂಡೇಶನ್ ಹೊರತರುತ್ತಿರುವ ಗಲ್ಫ್ ಇಶಾರ ಕನ್ನಡ ಮಾಸಿಕದ 2018 ನೇ ಸಾಲಿನ ಚಂದಾದಾರ ಅಭಿಯಾನದಲ್ಲಿ ನ್ಯಾಷನಲ್ ಪಬ್ಲಿಕೇಷನ್ ಡಿವಿಷನ್ ಘೋಷಿಸಿದ ಉಮ್ರಾ ಯಾತ್ರೆಗೆ ಕೆ.ಸಿ.ಎಫ್ ಅಜ್ಮಾನ್ ಝೋನ್ ರಿಲೀಫ್ ಕಾರ್ಯದರ್ಶಿ ಅಬ್ದುಲ್ ಖಾದರ್ ಕೊಡಿಪ್ಪಾಡಿ ಆಯ್ಕೆಯಾಗಿದ್ದಾರೆ. ಅತೀ ಹೆಚ್ಚು ಚಂದಾದಾರರನ್ನು ಸೇರಿಸಿದ ಕೂಟದಲ್ಲಿ ಇವರು ಮೊದಲಿಗಾರಾಗಿದ್ದಾರೆ.

ಮೃದು ಸ್ವಭಾವದ ಮೂಲಕ ಎಲ್ಲರೊಂದಿಗೂ ಬಹಳ ಆತ್ಮೀಯತೆಯಿಂದ ಬೆರೆಯುವ ಖಾದರ್ ಕೊಡಿಪ್ಪಾಡಿ ನಿಷ್ಠಾವಂತ ಕಾರ್ಯಕರ್ತ ಮತ್ತು ಉತ್ತಮ ಸಂಘಟನಾ ಚತುರನಾಗಿದ್ದಾರೆ. ಕಾರ್ಯಕರ್ತರನ್ನು ಆಧ್ಯಾತ್ಮಿಕತೆಯೆಡೆಗೆ ಹುರಿದುಂಬಿಸುತ್ತಾ ಮೇಳ್ಘಟಕ ನೀಡುವ ಪ್ರತಿಯೊಂದು ಯೋಜನೆಗಳನ್ನು ಅನುಷ್ಠಾನಗೊಳಿಸಿ ಹೆಚ್ಚಿನ ಜವಾಬ್ದಾರಿಯನ್ನು ಹೊತ್ತ ಪ್ರತಿಯೊಬ್ಬ ಕಾರ್ಯಕರ್ತನನ್ನು ಹುಡುಕಿ ಬಳಿಗೆ ಹೋಗಿ ಸಂಘಟನೆಯ ಸಂದೇಶವನ್ನು ತಲುಪಿಸುವಂತ ಶ್ರಮ ಜೀವಿಯಾಗಿದ್ದಾರೆ.