janadhvani

Kannada Online News Paper

ಕುಪ್ಪೆ ಪದವು:ಮದರಸ ವಿದ್ಯಾರ್ಥಿ ಒಕ್ಕೂಟದ ಮಹಾ ಸಭೆ

ಮಂಗಳೂರು:ಬದ್ರಿಯಾ ಜುಮಾ ಮಸ್ಜಿದ್ ಕುಪ್ಪೆ ಪದವು ಇದರ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಮದೀನತುಲ್ ಉಲೂಂ ಹೈಯ್ಯರ್ ಸೆಕೆಂಡರಿ ಮದರಸ ವಿದ್ಯಾರ್ಥಿಗಳ ಅಧಿಕೃತ ಒಕ್ಕೂಟವಾದ ಸುನ್ನೀ ಬಾಲ ಸಂಘ (SBS) ಇದರ ಮಹಾಸಭೆಯು ಸ್ಥಳೀಯ ಖತೀಬರಾದ ಅಬೂ ಝೈದ್ ಶಾಫಿ ಮದನಿ ಕರಾಯರವರ ನೇತೃತ್ವದಲ್ಲಿ ನಡೆಯಿತು.

ನೂತನ ಅಧ್ಯಕ್ಷರಾಗಿ ಮುಹಮ್ಮದ್ ಹನೀಶ್ ಮಾನಿಪಳ್ಳ, ಪ್ರಧಾನ ಕಾರ್ಯದರ್ಶಿಯಾಗಿ ಮುಹಮ್ಮದ್ ಮುಸ್ತಫಾ ,ಕೋಶಾಧಿಕಾರಿಯಾಗಿ ಮುಹಮ್ಮದ್ ಮುಶ್ಫಿಕ್ ಸರ್ವಾನುಮತದಿಂದ ಆಯ್ಕೆಯಾದರು.ಸದ್ರಿ ಸಮಿತಿಯ ಉಪಾಧ್ಯಕ್ಷರಾಗಿ ಫಾಯಿಝ್, ಹಫೀಝ್, ಇಫಾಝ್ ಜೊತೆ ಕಾರ್ಯದರ್ಶಿಗಳಾಗಿ ಸಿರಾಜುದ್ದೀನ್, ಜುನೈದ್, ಅಮೀರ್ ಇವರನ್ನು ನೇಮಿಸಲಾಯಿತು.

ಕಾರ್ಯಕಾರಿಣಿ ಸಮಿತಿ ಸದಸ್ಯರಾಗಿ ಮುಹಮ್ಮದ್ ಅರ್ಫಾಝ್, ಅಬೂಬಕ್ಕರ್ ಸಿದ್ದೀಕ್, ಮುಹಮ್ಮದ್ ಸುಹೈಲ್, ಅಬ್ದುಲ್ ಮುಖದ್ದಿಮ್, ಮುಹಮ್ಮದ್ ನಿಯಾಝ್ ,ನಶಾತ್ ಹಾಗು ಪ್ರತೀ ತರಗತಿಯ ಇಬ್ಬರನ್ನು ಆಯ್ಕೆ ಮಾಡಲಾಯಿತು. ಪವಿತ್ರ ರಬೀಉಲ್ ಅವ್ವಲ್ ಪ್ರಯುಕ್ತ ಅಕ್ಟೋಬರ್ 8,9,10 ರಂದು ನಡೆಯಲ್ಪಡುವ ಸ್ಟೂಡೆಂಟ್ ಫೆಸ್ಟ್-2021 ಇದರ ಮುನ್ನುಡಿಯಾಗಿ ಮದೀನತುಲ್ ಸ್ವಿಬಿಯಾನ್, ಮದೀನತುಲ್ ಇಖ್ವಾನ್ ಗ್ರೂಪನ್ನು ರಚಿಸಲಾಯಿತು.

ಪ್ರಸ್ತುತ ತಂಡದ ಟೀಂ ಕ್ಯಾಪ್ಟನ್ ಆಗಿ ಅದ್ನಾನ್ ಮುಹಮ್ಮದ್, ಸಿರಾಜುದ್ದೀನ್, ಅರಫಾತ್, ಝಯಾನ್ ಇವರನ್ನು ನೇಮಕ ಮಾಡಲಾಯಿತು. ಸಭೆಯಲ್ಲಿ ಮದೀನತುಲ್ ಉಲೂಂ ಹೈಯ್ಯರ್ ಸೆಕೆಂಡರಿ ಮದರಸ ಉಸ್ತಾದರಾದ ಅಶ್ರಫ್ ಅಮಾನಿ ಇಂದಬೆಟ್ಟು, ಅಬ್ದುರ್ರಹ್ಮಾನ್ ಮದನಿ ಸರಳಿಕಟ್ಟೆ, ಉಮರುಲ್ ಫಾರೂಕ್ ಹಿಮಮಿ ಪೆರ್ಲ ಉಪಸ್ಥಿತಿಯಿದ್ದರು, ಕಾರ್ಯಕ್ರಮದ ಆರಂಭದಲ್ಲಿ ನಿಕಟಪೂರ್ವ ಕಾರ್ಯದರ್ಶಿ ಅಬ್ದುಲ್ ಮುಖದ್ದಿಮ್ ಸ್ಲಾಗತಿಸಿ ನೂತನ ಕಾರ್ಯದರ್ಶಿ ಮುಹಮ್ಮದ್ ಮುಸ್ತಫಾ ಧನ್ಯವಾದಗೈದರು.

error: Content is protected !! Not allowed copy content from janadhvani.com