ಧಾರ್ಮಿಕ ಶಿಕ್ಷಣ ಪಡೆಯದೆ ಲೌಕಿಕ ಶಿಕ್ಷಣ ಮಾತ್ರ ಪಡೆಯುತ್ತಿರುವ ವಿದ್ಯಾರ್ಥಿಗಳು ಹಾಗೂ ಉದ್ಯೋಗದಲ್ಲಿರುವ ಎಸ್ಎಸ್ಎಫ್ ಕಾರ್ಯಕರ್ತರಿಗೆ ಧಾರ್ಮಿಕ ವಿಜ್ಞಾನ ನೀಡುವ ಸಲುವಾಗಿ ಕರ್ನಾಟಕ ರಾಜ್ಯ ಸಮಿತಿ ಹಮ್ಮಿಕೊಂಡ ಕಾರ್ಯಕ್ರಮವಾಗಿದೆ “ಸುಹ್ಬಾ”
ಇದನ್ನು ವ್ಯವಸ್ಥಾಪಿತವಾಗಿ ಜಾರಿಗೊಳಿಸುವ ಸಲುವಾಗಿ ವಿವಿಧ ಘಟಕಗಳ ನಾಯಕರನ್ನು ಒಳಗೊಂಡ “ಸುಹ್ಬಾ ಮೀಟ್” ಇಂದು (12-08-2021) ಸುಂಟಿಕೊಪ್ಪದ ಮುನವ್ವಿರುಲ್ ಇಸ್ಲಾಂ ಮದರಸದಲ್ಲಿ ನಡೆಯಿತು.
ಕೊಡಗು ಜಿಲ್ಲಾ ಅಧ್ಯಕ್ಷರಾದ ಶಾಫಿ ಸಅದಿಯವರ ಅಧ್ಯಕ್ಷತೆಯಲ್ಲಿ ನಡೆದ ಪ್ರಸ್ತುತ ಸಭೆಯಲ್ಲಿ ಕರ್ನಾಟಕ ರಾಜ್ಯ ಸಮಿತಿ ದಅವಾ ಕಾರ್ಯದರ್ಶಿಗಳಾದ ಮುಸ್ತಫಾ ನಯಿಮಿ ಉಸ್ತಾದರು ತರಗತಿ ನಡೆಸಿದರು.
ಧಾರ್ಮಿಕ ಪ್ರಜ್ಞೆ ಇಲ್ಲದೆ ದುಶ್ಚಟ ದುಷ್ಕೃತ್ಯಗಳಲ್ಲಿ ತೊಡಗಿ ಸಮಾಜದಲ್ಲಿ ಶಾಂತಿ ಭಂಗವನ್ನುಂಟು ಮಾಡುತ್ತಿರುವ ಯುವ ಸಮೂಹವನ್ನು ಸರಿದಾರಿಗೆ ತಂದು ಒಂದು ಉತ್ತಮ ಸಮೂಹವನ್ನು ಸೃಷ್ಟಿಸುವ ಸಲುವಾಗಿ ಹಮ್ಮಿಕೊಂಡ ಯೋಜನೆಯಾಗಿದೆ ಇದು.
ತರಗತಿಗೆ ಕಾರ್ಯಕರ್ತರನ್ನು ಪ್ರತ್ಯೇಕವಾಗಿ ನೊಂದಾಯಿಸಿ ಪ್ರತಿ ವಾರವೂ ಶಿಕ್ಷಣ ನೀಡಲಾಗುತ್ತದೆ, ಕಾರ್ಯಕರ್ತರು ಸದುಪಯೋಗಪಡಿಸಿಕೊಳ್ಳಬೇಕೆಂದು ಕೊಡಗು ಜಿಲ್ಲಾ ದಅವಾ ಕಾರ್ಯದರ್ಶಿ ರಫೀಕ್ ಲತೀಫಿ ತಿಳಿಸಿದ್ದಾರೆ. ಸಭೆಯಲ್ಲಿ ಜಿಲ್ಲಾ ಸಮಿತಿ ಕೋಶಾಧಿಕಾರಿ ಅಬ್ದುಲ್ ರಹೀಮ್ ಹೊಸತೋಟ, ಸ್ವಾಧಿಕ್ ಕರ್ಕಳ್ಳಿ ಮತ್ತಿತರರು ಹಾಜರಿದ್ದರು. ಕಮರುದ್ದೀನ್ ಸಖಾಫಿ ವಂದಿಸಿದರು.
















ಇನ್ನಷ್ಟು ಸುದ್ದಿಗಳು
ಬೆಳ್ಳಾರೆ: ದಾರುಲ್ ಹಿಕ್ಮ ಯುನಿಟಿ ಕಾನ್ಕ್ಲೇವ್ ಸಂಪನ್ನ
ಝಮೀರ್ ಹಜ್ ಜಮೀನು ಹೇಳಿಕೆಗೆ ಖಂಡನೆ: ಮಂಗಳೂರಿನ ಸ್ಥಿತಿವಂತ ಮುಸ್ಲಿಮರು ಈ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ: ಮಾಜಿ ಮೇಯರ್ ಕೆ.ಅಶ್ರಫ್
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ