ಉಳ್ಳಾಲ, ಆ.1: ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ ಎಸ್ ವೈ ಎಸ್ ಕಿನ್ಯಾ ಸೆಂಟರ್ ಇದರ ವತಿಯಿಂದ ‘ಇಜ್ತಿನಾಬ್-90’ ಕಾರ್ಯಕ್ರಮವು ಇಂದು ಸಂಜೆ ಕಿನ್ಯಾ ಬಖಾರಿ ಜುಮಾ ಮಸ್ಜಿದ್ ನಲ್ಲಿ ಸೆಂಟರ್ ಅಧ್ಯಕ್ಷರಾದ ಇಸ್ಮಾಯಿಲ್ ಹಾಜಿ ಪರಮಾಂಡ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಬಹು: ಮುಹಮ್ಮದ್ ಅಲಿ ಸಖಾಫಿ ಸುರಿಬೈಲ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಹು: ಎಸ್ಪಿ ಹಂಝ ಸಖಾಫಿ ಬಂಟ್ವಾಳ ಅವರು ಆಚಾರ ಮತ್ತು ಅನಾಚಾರ ಎಂಬ ವಿಷಯದಲ್ಲಿ ಹಾಗೂ ಬಹು: ಟಿ ಎಂ ಮುಹ್ಯಿದ್ದೀನ್ ಕಾಮಿಲ್ ಸಖಾಫಿ ತೋಕೆ ಅವರು ಸುನ್ನತ್ ಮತ್ತು ಬಿದ್ ಅತ್ ಎಂಬ ವಿಷಯದಲ್ಲಿ ತರಗತಿ ನಡೆಸಿದರು.

ಸಮಾರಂಭದಲ್ಲಿ ಸ್ಥಳೀಯ ಖತೀಬರಾದ ಉಸ್ಮಾನ್ ಸಖಾಫಿ, ಇಸ್ಮಾಯಿಲ್ ಸಅದಿ ಕಿನ್ಯಾ, ಅಬ್ಬಾಸ್ ಹಾಜಿ ನಾಟೆಕಲ್, ಇಬ್ರಾಹಿಮ್ ಖಲೀಲ್ ಮುಸ್ಲಿಯಾರ್ ಕಾವೂರು, ಕೆ. ಎಂ. ಇಬ್ರಾಹಿಂ ಹಾಜಿ ಕುತುಬಿ ನಗರ,ಇರ್ಫಾನ್ ನೂರಾನಿ ಉಕ್ಕುಡ, ಇ. ಕೆ.ಇಬ್ರಾಹಿಮ್, ಕಿನ್ಯಾ ಕೇಂದ್ರ ಜುಮಾ ಮಸೀದಿ ಕೋಶಾಧಿಕಾರಿ ಸಾದುಕುಂಞ್ಞಿ ಹಾಜಿ ಸಾಗ್ ಬಾಗ್,ಉಸ್ಮಾನ್ ಝುಹುರಿ ಕುರಿಯ, ರಫೀಖ್ ಝುಹುರಿ ಕುರಿಯ,ಮಸೂದ್ ಕಿನ್ಯಾ, ಕೆ.ಎಂ.ಇಸ್ಮಾಯಿಲ್ ಸಾಗ್, ವಿಎ ಮುಹಮ್ಮದ್ ಮುಸ್ಲಿಯಾರ್ ಮುಂತಾದವರು ಭಾಗವಹಿಸಿದ್ದರು.
ಮೆಹಬೂಬ್ ಸಖಾಫಿ ಕಿನ್ಯಾ ರವರು ಆರಂಭದಲ್ಲಿ ಸ್ವಾಗತಿಸಿ, ಕೊನೆಯಲ್ಲಿ ಅಭಿನಂದನೆ ಸಲ್ಲಿಸಿದರು.
















ಇನ್ನಷ್ಟು ಸುದ್ದಿಗಳು
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ
ಸುನ್ನಿ ಸೆಂಟರ್ ಗೂಡಿನಬಳಿ ವತಿಯಿಂದ ರಮಳಾನ್ ಕಿಟ್ ವಿತರಣೆ
ಪೆಬ್ರವರಿ 15 ಮಂಗಳೂರಲ್ಲಿ ಇಹ್ಸಾನೋತ್ಸವ-26 ಘೋಷಣಾ ಸಮಾವೇಶ
ಉಳ್ತೂರು ; ದರ್ಸ್ ವಾರ್ಷಿಕ ಮತ್ತು ಬೀಳ್ಕೊಡಿಗೆ
ಸುಳ್ಯ – ಎಲಿಮಲೆಯಲ್ಲಿ ಇಕ್ರಾಮುಸ್ಸುನ್ನ ಬಿರುದುದಾನ ಮಹಾ ಸಮ್ಮೇಳನಕ್ಕೆ ಪ್ರೌಢ ಸಮಾಪ್ತಿ
ಉಳ್ತೂರು : ದರ್ಸ್ ವಾರ್ಷಿಕ ಮತ್ತು ಅನುಸ್ಮರಣೆ
ಸುಳ್ಯ ಎಲಿಮಲೆಯಲ್ಲಿ ಇಕ್ರಾಮುಸ್ಸುನ್ನ ಸನದುದಾನ ಮಹಾ ಸಮ್ಮೇಳನ ಹಾಗೂ ನುಸ್ರತ್ 42ನೇ ವಾರ್ಷಿಕ ಸಮಾರಂಭ
SSF ಬೆಂಗಳೂರು ಜಿಲ್ಲಾ ವಾರ್ಷಿಕ ಮಹಾಸಭೆ ಸಮಾಪ್ತಿ