janadhvani

Kannada Online News Paper

ಯುಎಇ :ಈದುಲ್ ಅದ್’ಹಾ ಪ್ರಯುಕ್ತ ಖಾಸಗಿ ವಲಯಗಳಲ್ಲಿ 4 ದಿನಗಳ ರಜೆ

ದುಬೈ: ಈದ್ ಅಲ್-ಅದ್ಹಾ ಸಂಬಂಧಿಸಿದಂತೆ ಯುಎಇಯ ಖಾಸಗಿ ವಲಯಕ್ಕೆ ನಾಲ್ಕು ದಿನಗಳ ರಜೆ ನೀಡಲಾಗಿದೆ. ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ಈ ಘೋಷಣೆ ಮಾಡಿದೆ.

ರಜೆಯು, ಜುಲೈ 19 ರಿಂದ (ದುಲ್ ಹಜ್ 9 – ಅರಫಾ ದಿನ) ಜುಲೈ 22 ರವರೆಗೆ ಇರಲಿದೆ. ದೇಶದ ಎಲ್ಲಾ ಖಾಸಗಿ ಕಂಪನಿಗಳು ಮತ್ತು ಕಂಪನಿಗಳಲ್ಲಿ ಕೆಲಸ ಮಾಡುವವರಿಗೆ ಈ ದಿನಗಳಲ್ಲಿ ವೇತನ ಸಹಿತ ರಜೆ ನೀಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

error: Content is protected !! Not allowed copy content from janadhvani.com