ಮಂಗಳೂರಿನ ಕೆಲವು ಆಸ್ಪತೆಗಳು ಮತ್ತು ವೈದ್ಯರು ಮೆಡಿಕಲ್ ಮಾಫಿಯಾ ಸ್ರಷ್ಟಿ ಮಾಡಿರುವುದು ದ.ಕ. ಜಿಲ್ಲೆಗೆ ಅವಮಾನ.
ವೈದ್ಯಕೀಯ ನಗರ ಎಂದೇ ಕರೆಯಲ್ಪಡುವ ಮಂಗಳೂರು
ಮುಂದಿನ ದಿನಗಳಲ್ಲಿ ವೈದ್ಯೋ – ಡಕಾಯಿತಿ ನಗರ ಆಗದಿರಲಿ. ಕೆಲವು ಕುಖ್ಯಾತಿ ವೈದ್ಯರ ನಿರ್ಲಕ್ಷ್ಯ ದಿಂದಾಗಿ ಹಲವು ನಿಷ್ಟ್ಟಾವಂತ ವೈದ್ಯರ ಸೇವೆಗಳಿಗೆ ಕೂಡ ಕೆಟ್ಟ ಹೆಸರು ಬರುವುವಂತಾಗಿರುವುದೂ ಖೇದಕರ.
ಖತೀಜ ಜಾಸ್ಮಿನ್ ಎಂಬ ತುಂಬು ಗರ್ಭಿಣಿಯನ್ನು ಅವಳು ಕೋರೋಣ ಪಾಸಿಟಿವ್ ಎಂಬ ಕಾರಣವೊಡ್ಡಿ ಡಾಕ್ಟರ್ ಪ್ರಿಯ ಬಲ್ಲಾಳ್ ರಿಂದ ಹಿಡಿದು ಖಾಸಗಿ ಆಸ್ಪತ್ರೆಗಳು ಮತ್ತು ವೈದ್ಯರು ನಿರ್ಲಕ್ಷಿಸಿರುವುದು ಖಂಡನೀಯ, ಮುಂದುವರಿದು ಡಾ.ಪ್ರಿಯ ಬಲ್ಲಾಳ್ ರ ಸಹ ವೈದ್ಯರುಗಳು ಕೂಡ ರೋಗಿಯಲ್ಲಿ ಮರಣ ಭಯ ಹುಟ್ಟಿಸಿ, ರೋಗಿ ಮತ್ತು ಅವಳ ಕುಟುಂಬದವರಿಗೆ ಪ್ರಾಣ ಭಯ ಹುಟ್ಟಿಸಿ, ಬೆದರಿಸಿರುತ್ತಾರೆ, ರೋಗಿ ಸಂಪರ್ಕಿಸಿದ ಆಸ್ಪತ್ರೆ ಗಳಲ್ಲಿ ಚಿಕಿತ್ಸೆ ನಿರಾಕರಿಸಿ ಅಲ್ಲಿ ಇಲ್ಲಿ ಅಲೆದಾಡಿಸಿದ್ದಾರೆ.
ಸಂತ್ರಸ್ತೆಯ ಕುಟುಂಬ ವೈದ್ಯರಾದ ಡಾ. ಪ್ರಿಯಾ ಬಲ್ಲಾಳ್ ಈ ಸಂತ್ರಸ್ತೆ ಯನ್ನು ಆ ಪರಿ ನಿರ್ಲಕ್ಷಿಸಲು ಪ್ರಯತ್ನಿಸಿದ ಕಾರಣವೇನು?, ಈ ಬಗ್ಗೆ ಜಿಲ್ಲಾಡಳಿತ ಮತ್ತು ಸರಕಾರ ತನಿಖೆ ನಡೆಸಬೇಕು. ವೈದ್ಯರು ನಡೆಸಿದ ಈ ಗಂಭೀರ ಅಪರಾಧ ಕೃತ್ಯದ ವಿರುದ್ಧ ಮುಸ್ಲಿಮ್ ಒಕ್ಕೂಟ ಸಂತ್ರಸ್ತರ ಪರವಾಗಿ ಹೋರಾಟ ಮುಂದುವರಿಸಲಿದೆ.
ಈಗಾಗಲೇ ಸಂತ್ರಸ್ತೆ ಮತ್ತು ಸಂಘಟನೆಗಳು ಆರಂಭಿಸಿದ ಕಾನೂನಾತ್ಮಕ ಹೋರಾಟಕ್ಕೆ ಬೆಂಬಲ ನೀಡಲಿದೆ. ಸರಕಾರ, ಜಿಲ್ಲಾಡಳಿತ, ಆರೋಗ್ಯ ಇಲಾಖೆ, ಪೊಲೀಸು ಇಲಾಖೆ ಈ ಅನ್ಯಾಯದ ವಿರುದ್ಧ ಕಾನೂನಾತ್ಮಕ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲಿ ಆಸ್ಪತ್ರೆ ಮತ್ತು ವೈದ್ಯರ ಮನೆ, ಕ್ಲಿನಿಕ್ ಗಳ ಮುಂದೆ ಉಗ್ರ ಪ್ರತಿಭಟನೆ ನಡೆಸಲಿದ್ದೇವೆ.
ಕೆ.ಅಶ್ರಫ್(ಮಾಜಿ ಮೇಯರ್). .ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ.















ಇನ್ನಷ್ಟು ಸುದ್ದಿಗಳು
ಬೆಳ್ಳಾರೆ: ದಾರುಲ್ ಹಿಕ್ಮ ಯುನಿಟಿ ಕಾನ್ಕ್ಲೇವ್ ಸಂಪನ್ನ
ಝಮೀರ್ ಹಜ್ ಜಮೀನು ಹೇಳಿಕೆಗೆ ಖಂಡನೆ: ಮಂಗಳೂರಿನ ಸ್ಥಿತಿವಂತ ಮುಸ್ಲಿಮರು ಈ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ: ಮಾಜಿ ಮೇಯರ್ ಕೆ.ಅಶ್ರಫ್
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ