ಬೆಳ್ತಂಗಡಿ: ಸುನ್ನೀ ಮ್ಯಾನೇಜ್ ಮೆಂಟ್ ಅಸೋಸಿಯೇಷನ್ ಬೆಳ್ತಂಗಡಿ ರೀಜನಲ್ ಹಾಗೂ ಸುನ್ನೀ ಜಂ-ಇಯ್ಯತುಲ್ ಮುಅಲ್ಲಿಮೀನ್ ಬೆಳ್ತಂಗಡಿ ರೇಂಜ್ ಜಂಟಿ ಆಶ್ರಯದಲ್ಲಿ, ಇತ್ತೀಚೆಗೆ ನಮ್ಮನ್ನಗಲಿದ ಸಮಸ್ತ ಉಪಾಧ್ಯಕ್ಷರಾದ ತಾಜುಶ್ಶರೀಅ ಶೈಖುನಾ ಅಲೀಕುಂಞಿ ಉಸ್ತಾದ್ (ನ.ಮ) ಅನುಸ್ಮರಣೆ ಹಾಗೂ ರೇಂಜ್ ವ್ಯಾಪ್ತಿಯ ಮದ್ರಸಾಗಳ 34 ಅಧ್ಯಾಪಕರಿಗೆ ರಮಳಾನ್ ಕಿಟ್, ಆಹಾರ ಸಾಮಗ್ರಿಗಳ ವಿತರಣಾ ಕಾರ್ಯಕ್ರಮವು ಗುರುವಾಯನಕೆರೆ ಇಹ್ಯಾವುಲ್ ಇಸ್ಲಾಂ ಮದರಸದಲ್ಲಿ ನಡೆಯಿತು.

ಎಸ್.ಎಂ.ಎ ಅಧ್ಯಕ್ಷರಾದ ಅಬ್ದುಲ್ ಲತೀಫ್ ಹಾಜಿ ಎಸ್.ಎಂ.ಎಸ್ ರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯನ್ನು, ಗುರುವಾಯನಕೆರೆ ಅಧ್ಯಕ್ಷರಾದ ಯಾಕೂಬ್ ಮುಸ್ಲಿಯಾರ್ ಗುರುವಾಯನಕೆರೆ ಉದ್ಘಾಟಿಸಿದರು. ಸ್ಥಳೀಯ ಮುದರ್ರಿಸರಾದ ಆದಂ ಅಹ್ಸನಿ ತುರ್ಕಳಿಕೆ ಅನುಸ್ಮರಣಾ ಮಜ್ಲಿಸ್ ಗೆ ನೇತೃತ್ವ ವಹಿಸಿದ್ದರು. ರೇಂಜ್ ಅಧ್ಯಕ್ಷರಾದ ಉಮರುಲ್ ಫಾರೂಕ್ ಸಖಾಫಿ ಪರಪ್ಪು, ಉಪಾಧ್ಯಕ್ಷರಾದ ಝಾಕಿರ್ ಹುಸೈನ್ ಕಣಿಯೂರು ಮೊದಲಾದವರು ಶುಭ ಹಾರೈಸಿದರು. ಇದೇ ವೇಳೆ ಯಾಕೂಬ್ ಮುಸ್ಲಿಯಾರ್, ಎನ್ ಎಂ ಶರೀಫ್ ಸಖಾಫಿ, ಝಾಕಿರ್ ಹುಸೈನ್ ರವರನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಉಪಾಧ್ಯಕ್ಷರಾದ ಅಬೂಬಕರ್ ಬದ್ಯಾರ್, ಮುಹಮ್ಮದ್ ಗೋವಿಂದೂರು, ಕಾರ್ಯದರ್ಶಿಗಳಾದ ಹಾರಿಸ್ ಕುಕ್ಕುಡಿ, ಹೈದರ್ ಸರ್ ಮನ್ಶರ್, ನಝೀರ್ ಎರುಕಡಪು ಮೊದಲಾದವರು ಉಪಸ್ಥಿತರಿದ್ದರು.
ಎಸ್.ಎಂ.ಎ ಹಾಗೂ ಎಸ್.ಜೆ.ಎಂ ಪ್ರಧಾನ ಕಾರ್ಯದರ್ಶಿ ಎನ್ ಎಂ ಶರೀಫ್ ಸಖಾಫಿ ನೆಕ್ಕಿಲ್ ಸ್ವಾಗತಿಸಿದರು.
















ಇನ್ನಷ್ಟು ಸುದ್ದಿಗಳು
ಬೆಳ್ಳಾರೆ: ದಾರುಲ್ ಹಿಕ್ಮ ಯುನಿಟಿ ಕಾನ್ಕ್ಲೇವ್ ಸಂಪನ್ನ
ಝಮೀರ್ ಹಜ್ ಜಮೀನು ಹೇಳಿಕೆಗೆ ಖಂಡನೆ: ಮಂಗಳೂರಿನ ಸ್ಥಿತಿವಂತ ಮುಸ್ಲಿಮರು ಈ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ: ಮಾಜಿ ಮೇಯರ್ ಕೆ.ಅಶ್ರಫ್
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ