janadhvani

Kannada Online News Paper

ಬೆಂಗಳೂರು: ಕ್ವೆಸ್ಟ್ ಫೌಂಡೇಶನ್ ಗೆ ನೂತನ ಸಾರಥ್ಯ

ಶಿವಾಜಿ ನಗರ: ಬೆಂಗಳೂರು ಕೇಂದ್ರೀಕರಿಸಿ ಸಾಮಾಜಿಕ ಹಾಗೂ ಶೈಕ್ಷಣಿಕ ರಂಗದಲ್ಲಿ‌ ಕಾರ್ಯಾಚರಿಸುತ್ತಿರುವ ಕ್ವೆಸ್ಟ್ ಫೌಂಡೇಶನ್ ನೂತನ ಸಮಿತಿ ಆಯ್ಕೆ ಮಾಡಲಾಯಿತು.
ಬೆಂಗಳೂರಿನ ಪ್ರಖ್ಯಾತ ವಿದ್ಯಾಕೇಂದ್ರವಾದ ಮರ್ಖಿನ್ಸ್ ನ ಪೂರ್ವ ವಿದ್ಯಾರ್ಥಿ ಒಕ್ಕೂಟವಾಗಿದೆ QUEST FOUNDATION.
ಮರ್ಖಿನ್ಸ್ ಪ್ರಾಂಶುಪಾಲರಾದ ಜಾಫರ್ ನೂರಾನಿ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಹೊಸ ಸಮಿತಿಯನ್ನು ಆಯ್ಕೆ ಮಾಡಲಾಯಿತು.

ಸಭೆಯನ್ನು ಹಬೀಬ್ ನೂರಾನಿ ಉದ್ಘಾಟಿಸಿದರು.ಡೈರೆಕ್ಟರ್ ಜನರಲ್ ಸಯ್ಯಿದ್ ಮುಹಮ್ಮದ್ ಅಲ್ ಖಾದಿರಿ, ಎಕ್ಸಿಕ್ಯೂಟಿವ್ ಜನರಲ್ ಮನ್ಸೂರ್ ಅಲ್ ಖಾದಿರಿ ಮಾತನಾಡಿದರು.
ಅಧ್ಯಕ್ಷ ಸ್ಥಾನಕ್ಕೆ ಅಹ್ಮದ್ ಅಸ್ರಾರ್ ಅಲ್ ಖಾದಿರಿ ಹಾಗೂ ಕನ್ವೀನರ್ ಸ್ಥಾನಕ್ಕೆ ರಾಶಿದ್ ಅಲ್ ಖಾದಿರಿ ಅವರನ್ನು ನೇಮಿಸಲಾಯಿತು.
ಫೈನಾನ್ಸ್: ಹುಸೈನ್ ಅಲ್ ಖಾದಿರಿ,
ಇವೆಂಟ್ ಮ್ಯಾನೇಜ್ಮೆಂಟ್ :ಆಬಿದ್ ಅಲ್ ಖಾದಿರಿ,ಮೀಡಿಯ: ಮುನವ್ವರ್ ಅಲ್ ಖಾದಿರಿ
ಕ್ವೆಸ್ಟ್ ಕೇರ್:ಶಂಸೀರ್ ಅಲ್ ಖಾದಿರಿ ಪ್ರಕಾಶಕರು: ಯಾಸೀನ್ ಅಲ್ ಖಾದಿರಿ,ಗುಂಟಕಲ್ ಶಾಖೆಯ ಮುಖ್ಯಸ್ಥರಾಗಿ :ರಾಝಿಕ್ ಅಲ್ ಖಾದಿರಿ,ಕೋಲಾರ ಶಾಖೆಯ ಮುಖ್ಯಸ್ಥರಾಗಿ: ಅಬ್ದುಲ್ಲಾ ಅಲ್ ಖಾದಿರಿ,ಗದಗ ಶಾಖೆಯ ಮುಖ್ಯಸ್ಥರಾಗಿ ಅಸ್ರಾರ್ ಅಲ್ ಖಾದಿರಿ ಅವರನ್ನು ನೇಮಿಸಲಾಯಿತು. ಸಭೆಯು ನೂತನ ಕನ್ವೀನರ್ ರಾಶಿದ್ ಖಾದಿರಿಯವರ ಧನ್ಯವಾದದೊಂದಿಗೆ ಮುಕ್ತಾಯಗೊಂಡಿತು.

ಇದನ್ನೂ ಓದಿರಿ...