janadhvani

Kannada Online News Paper

ಜಾಮಿಯಾ ಇಹ್ಯಾ’ಉಸ್ಸುನ್ನ ಮಲಪ್ಪುರಂ: ಕರ್ನಾಟಕ ಸ್ಟೂಡೆಂಟ್ಸ್ ಅಸೋಸಿಯೇಶನ್ ಕೆ.ಎಸ್.ಎ ಗೆ ನವ ಸಾರಥ್ಯ

ಮಲಪ್ಪುರಂ: ಪಂಡಿತ ಶಿರೋಮಣಿ ಬಹ್ರುಲ್ ಉಲೂಂ ಶೈಖುನಾ ಓಕೆ ಉಸ್ತಾದರ ಕರಗಳಿಂದ ಸ್ಥಾಪಿಸಲ್ಪಟ್ಟ, ಸಮಸ್ತ ಕೇಂದ್ರ ಮುಶಾವರ ಅಧ್ಯಕ್ಷರಾದ ಶೈಖುನಾ ರಈಸುಲ್ ಉಲಮಾ ಸುಲೈಮಾನ್ ಉಸ್ತಾದರ ನೇತೃತ್ವದಲ್ಲಿ ಕಾರ್ಯಾಚರಿಸುವ ಪ್ರತಿಷ್ಠಿತ ವಿದ್ಯಾಸಂಸ್ಥೆ, ಜಾಮಿಯಾ ಇಹ್ಯಾಉಸ್ಸುನ್ನ ಅರೆಬಿಕ್ ಕಾಲೇಜ್, ಮಲಪ್ಪುರಂ ಕೇರಳ.

ಈ ಸಂಸ್ಥೆಯಲ್ಲಿ ಕಲಿಯುವ ಕರ್ನಾಟಕ ವಿದ್ಯಾರ್ಥಿಗಳ ಕಲಾಸಂಘವಾದ ಇಶಾಅತುಸ್ಸುನ್ನಃ ಕರ್ನಾಟಕ ಸ್ಟೂಡೆಂಟ್ಸ್ ಅಸೋಸಿಯೇಷನ್ /ಕೆ ಎಸ್ ಎ ಇದರ 2021-22 ನೇ ಶೈಕ್ಷಣಿಕ ವರ್ಷದ ನೂತನ ಸಮಿತಿಯನ್ನು ಸಯ್ಯಿದ್ ಶರಫುದ್ದೀನ್ ಅಲ್-ಹಾದಿ ತಂಙಳರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನೂತನ ಸಮಿತಿಯ ಪದಾಧಿಕಾರಿಗಳನ್ನು ಆರಿಸಲಾಯಿತು.

ಅಧ್ಯಕ್ಷರಾಗಿ-ಅನಸ್ ಜೋಗಿಬೆಟ್ಟು,
ಉಪಾಧ್ಯಕ್ಷರಾಗಿ ಮುಹಮ್ಮದ್ ಶಾಫಿ ಅನ್ವಾರಿ ಸಕಲೇಶಪುರ, ಪ್ರ.ಕಾರ್ಯದರ್ಶಿಯಾಗಿ- ಅಬ್ದುರ್ರಹ್ಮಾನ್ ಮರ್ಝೂಖಿ ವಳಾಲ್,
ಕೋಶಾಧಿಕಾರಿಯಾಗಿ:- ಅಬ್ದುಲ್ ರಹ್ಮಾನ್ ಬೇಂಗಿಲ
ಕನ್ವೀನರ್:- ಅಬೂಬಕ್ಕರ್ ಅನ್ವಾರಿ ವಿರಾಜಪೇಟೆ ಅವರನ್ನು ನೇಮಕಗೊಳಿಸಲಾಯಿತು.

ಕಾರ್ಯಕ್ರಮವನ್ನು ಶಫೀಕ್ ನೆಲ್ಯಾಡಿ ಸ್ವಾಗತಗೈದು ನಿರೂಪಿಸಿದರು, ನೂತನ ಕಾರ್ಯದರ್ಶಿ ಮರ್ಝೂಖಿ ವಳಾಲ್ ವಂದಿಸಿದರು.

error: Content is protected !! Not allowed copy content from janadhvani.com